ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶುಪಾಲಕರಿಗೆ ಅಕ್ಷರಾಭ್ಯಾಸ

Last Updated 8 ಮೇ 2017, 6:44 IST
ಅಕ್ಷರ ಗಾತ್ರ
ತೋವಿನಕೆರೆ: ಗೋಶಾಲೆಯಲ್ಲಿ ಅಕ್ಷರ ಜ್ಞಾನವಿಲ್ಲದ ಪಶುಪಾಲಕರಿಗೆ ಮತ್ತು ಅಸಕ್ತ ರೈತರಿಗೆ ಅಕ್ಷರಾಭ್ಯಾಸವನ್ನು ಕಲಿಸುವ ತರಗತಿಗಳು ಶನಿವಾರದಿಂದ ಪ್ರಾರಂಭವಾದವು.
 
ಮೂವತ್ತು ಮಂದಿ ಪಶುಪಾಲಕರು ಸಹಿಗಳನ್ನು ಮಾಡುವ ಮೂಲಕ ಅಕ್ಷರಾಭ್ಯಾಸ ಮಾಡಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
‘ಗೋಶಾಲೆ ಮುಗಿಯುವವರೆಗೂ ಆಸಕ್ತರಿಗೆ ಅಕ್ಷರಾಭ್ಯಾಸವನ್ನು ಸ್ವಯಂಸೇವಕರ ಸಹಾಯದಿಂದ ಮಾಡಿಸಲಾಗುತ್ತದೆ’ ಎಂದು ಸಂಯೋಜಕ ಎಂ.ಅರಸಪ್ಪ ತಿಳಿಸಿದರು.  
 
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಂ.ಎಚ್.ಚಂದ್ರಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಟಿ.ಡಿ.ಪ್ರಸನ್ನಕುಮಾರ್, ಕುರಂಕೋಟೆ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಜು, ಎಸ್.ಎಲ್.ಎನ್.ಸ್ವಾಮಿ, ಬಾಣಪ್ಪ, ಪ್ರೇರಕರಾದ ಕೆ.ಆರ್.ರಾಜೇಶ್ವರಿ, ಸಿದ್ಧರಬೆಟ್ಟದ ಮಮತಾ, ಗಂಗಮ್ಮ, ಸಾವಿತ್ರಿ, ನೇತ್ರಾವತಿ, ಲತಾ, ಮಂಜುಳಾ, ಸುಶೀಲಮ್ಮ ಇದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT