ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸಾಹ ಹೆಚ್ಚಿಸಿದ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆ

ಮಹಿಳೆ, ಮಕ್ಕಳಿಗೆ ವಿವಿಧ ಸ್ಪರ್ಧೆ, ಸಾಧಕರಿಗೆ ಸನ್ಮಾನ
Last Updated 8 ಮೇ 2017, 7:50 IST
ಅಕ್ಷರ ಗಾತ್ರ
ಸೋಮವಾರಪೇಟೆ: ಸಮೀಪದ ಕೆಂಚಮ್ಮನ ಬಾಣೆಯಲ್ಲಿ ಅಲ್ಲಿನ ಆದಿ ನಾಗಬ್ರಹ್ಮ ಮೊಗೇರ್ಕರ ಯುವಕ ಸಂಘ ಇತ್ತೀಚೆಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಜನರ ಗಮನ ಸೆಳೆಯಿತು. 
 
ಮಹಿಳೆಯರಿಗೆ ನಡೆದ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಅನ್ನಪೂರ್ಣೇಶ್ವರಿ ತಂಡ ಪ್ರಥಮ, ಲಕ್ಷ್ಮಿ ಫ್ರೆಂಡ್ಸ್ ತಂಡ ದ್ವಿತೀಯ ಬಹುಮಾನ ಪಡೆಯಿತು. 
 
ಮಕ್ಕಳಿಗಾಗಿ ಏರ್ಪಡಿಸಿದ್ದ ಕಬಡ್ಡಿ ಟೂರ್ನಿಯಲ್ಲಿ ವಿವಿಧ ತಂಡಗಳು ಭಾಗ ವಹಿಸಿದ್ದವು. ಭಾರತ್‌ಮಾತಾ ಸೇವಾ ಸಮಿತಿ ತಂಡ ಪ್ರಥಮ ಸ್ಥಾನ, ಸರ್ದಾರ್‌ ಫ್ರೆಂಡ್ಸ್ ತಂಡ 2ನೇ ಸ್ಥಾನ ಪಡೆಯಿತು.
 
ಉತ್ತಮ ಹಿಡಿತಗಾರ ಗೌರವಕ್ಕೆ ಬಿಎಂಎಸ್ಎಸ್ ತಂಡದ ವಿನೋದ್ ಪಾತ್ರರಾದರೆ, ಉತ್ತಮ ದಾಳಿಗಾರನಾಗಿ ಹೇಮಂತ್ ಬಹುಮಾನ ಪಡೆದರು.
15 ವರ್ಷದೊಳಗಿನ ಬಾಲಕಿಯರ ಓಟದ ಸ್ಪರ್ಧೆಯಲ್ಲಿ ಸಂಚಿತಾ ಪ್ರಥಮ, ನಿಶ್ಮಿತಾ ದ್ವಿತೀಯ ಸ್ಥಾನ ಪಡೆದರು. ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಸಂಗೀತಾ ಮಾದೇವ ಪ್ರಥಮ ಹಾಗೂ ಭವಾನಿ ದ್ವಿತೀಯ ಬಹುಮಾನ ಪಡೆದರು.
 
ಅಂಗನವಾಡಿ ಮಕ್ಕಳಿಗಾಗಿ ನಡೆದ ಓಟದ ಸ್ಪರ್ಧೆಯ ಗಂಡು ಮಕ್ಕಳ ವಿಭಾಗದಲ್ಲಿ ಬಿಶನ್ ಪ್ರಥಮ, ಉದಯ ದ್ವಿತೀಯ ಹಾಗೂ ಹೆಣ್ಣು ಮಕ್ಕಳ ವಿಭಾಗದಲ್ಲಿ ಯಶಸ್ವಿನಿ ಪ್ರಥಮ, ರೇಷ್ಮಾ ದ್ವಿತೀಯ ಬಹುಮಾನ ಪಡೆದರು. 
 
ಕಾಳು ಹೆಕ್ಕುವ ಸ್ಪರ್ಧೆಯ ಹೆಣ್ಣು ಮಕ್ಕಳ ವಿಭಾಗದಲ್ಲಿ ಭುವನಾ ಪ್ರಥಮ, ದೀಪ್ತಿ ದ್ವಿತೀಯ, ಗಂಡು ಮಕ್ಕಳ ವಿಭಾಗದಲ್ಲಿ  ಶೀತಲ್ ಪ್ರಥಮ, ಸಾಗರ್ ದ್ವಿತೀಯ, ಕಪ್ಪೆ ಜಿಗಿತ ಸ್ಪರ್ಧೆಯ ಗಂಡು ಮಕ್ಕಳ ವಿಭಾಗದಲ್ಲಿ ಅಂತೋಣಿ ಪ್ರಥಮ, ದೀಕ್ಷಿತ್ ದ್ವಿತೀಯ, ಹೆಣ್ಣು ಮಕ್ಕಳ ವಿಭಾಗದಲ್ಲಿ ನಿಶ್ಮಿತಾ ಪ್ರಥಮ, ಶಾಂಭವಿ ದ್ವಿತೀಯ ಬಹುಮಾನ ಪಡೆದರು. ಭಕ್ತಿಗೀತೆ ಗಾಯನದಲ್ಲಿ ತೋಳೂರುಶೆಟ್ಟಳ್ಳಿಯ ಅಂಕಿತಾ ಹಾಗೂ ರಕ್ಷಿತಾ ಬಹುಮಾನ ಪಡೆದರು.
ಸಂಘದ ಅಧ್ಯಕ್ಷ ಕೆ.ಎ. ದಿನೇಶ್ ಸಮಾರೋಪದ ಅಧ್ಯಕ್ಷತೆ ವಹಿಇದ್ದರು. 
 
ಸನ್ಮಾನ:  ಪತ್ರಕರ್ತ ಬಿ.ಎ. ಭಾಸ್ಕರ್, ಅಂಗನವಾಡಿ ಕಾರ್ಯಕರ್ತೆ ಕೆ.ಪಿ. ಜಯಲಲಿತಾ, ಕಬಡ್ಡಿ ಆಟಗಾರ್ತಿ ಕುಸುಬೂರಿನ ರೇಷ್ಮಾ ಮೊಗೇರ, ಬಾಸ್ಕೆಟ್‌ಬಾಲ್ ಆಟಗಾರ ಚಿಕ್ಕ ತೋಳೂರಿನ ಕೀರ್ತಿ ಪ್ರಸಾದ್, ಆಟೊ ಚಾಲಕಿ ಪ್ರಮೀಳಾ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
 
ರಾಜ್ಯ ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ ಸಮಿತಿಯ ಪೂಣಚ್ಚ, ಸೋಮವಾರಪೇಟೆಯ ಸೃಷ್ಟಿ ಚಿಗುರು ಸಾಹಿತ್ಯ ಘಟಕದ ಅಧ್ಯಕ್ಷ ಸುದರ್ಶನ್, ಹಳ್ಳದಿಣ್ಣೆಯ ಮುನೇಶ್ವರ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಸಿ. ಸುಂದರ್, ಆರ್ಎಂಸಿ ಸದಸ್ಯೆ ಚಂದ್ರಿಕಾ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT