ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಸುತ್ತಿಗೆ ಕೂತಂಡ, ನೆಲ್ಲಮಕ್ಕಡ

ಕೊಡವ ಕುಟುಂಬಗಳ ನಡುವಿನ 21ನೇ ವರ್ಷದ ಉತ್ಸವ: ಮಾಜಿ ಚಾಂಪಿಯನ್‌ಗಳ ಮುನ್ನಡೆ
Last Updated 8 ಮೇ 2017, 7:58 IST
ಅಕ್ಷರ ಗಾತ್ರ
ನಾಪೋಕ್ಲು: ಇಲ್ಲಿ ನಡೆಯುತ್ತಿರುವ ಬಿದ್ದಾಟಂಡ ಕಪ್ ಹಾಕಿ ಟೂರ್ನಿ 20ನೇ ದಿನದ ಪ್ರೀ ಕ್ವಾರ್ಟರ್‌ ಪಂದ್ಯಗಳಲ್ಲಿ  ಕೂತಂಡ, ನೆಲ್ಲಮಕ್ಕಡ ತಂಡಗಳ ಮುನ್ನಡೆ ಸಾಧಿಸಿದ್ದು, ಇತರೆ ತಂಡಗಳು ಗೆಲುವಿಗೆ ತೀವ್ರ ಸೆಣಸಾಟ ನಡೆಸುತ್ತಿವೆ.
 
ಭಾನುವಾರ ಕೋಡಿಮಣಿಯಂಡ ಮತ್ತು ಕಳ್ಳಿಚಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದವು.
 
ಕೋಡಿಮಣಿಯಂಡ ತಂಡ ಟೈ ಬ್ರೇಕರ್‌ನಲ್ಲಿ ಕಳ್ಳಿಚಂಡ ತಂಡದ ವಿರುದ್ಧ ಸಡನ್‌ಡೆತ್‌ನಲ್ಲಿ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಾಜಿ ಚಾಂಪಿಯನ್ ಕೂತಂಡ ಮತ್ತು ಮಾಚಮಾಡ ತಂಡ ನಡುವಿನ ಪಂದ್ಯದಲ್ಲಿ ಕೂತಂಡ ತಂಡವು 1–0 ಗೋಲಿನ ಅಂತರದಿಂದ ಮಾಚಮಾಡ ತಂಡವನ್ನು ಪರಾಭವಗೊಳಿಸಿತು.
 
ಕೂತಂಡ ಸಂತೋಷ್ ತಂಡದ ಪರ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಕುಪ್ಪಂಡ (ಕೈಕೇರಿ) ಮತ್ತು ನೆಲ್ಲಮಕ್ಕಡ ತಂಡಗಳ ನಡುವಿನ ಪಂದ್ಯದಲ್ಲಿ ಮಾಜಿ ಚಾಂಪಿಯನ್ ನೆಲ್ಲಮಕ್ಕಡ ತಂಡ 2-0 ಅಂತರದಿಂದ ಕುಪ್ಪಂಡ ತಂಡವನ್ನು ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು.
 
ನೆಲ್ಲಮಕ್ಕಡ ತಂಡದ ಪರ ಅಯ್ಯಪ್ಪ, ಸೋಮಯ್ಯ ತಲಾ ಒಂದು ಗೋಲು ದಾಖಲಿಸಿದರು. ಚೆಪ್ಪುಡಿರ– ಚೋಕಿರ ತಂಡಗಳ ನಡುವಿನ ಪಂದ್ಯದಲ್ಲಿ ಚೆಪ್ಪುಡಿರ ತಂಡ 6-–0 ಗೋಲುಗಳಿಂದ ಚೋಕಿರ ತಂಡವನ್ನು ಮಣಿಸಿತು.
 
ಚೆಪ್ಪುಡಿರ ತಂಡದ ಪರ ಸೋಮಣ್ಣ, ನರೇನ್ ಕಾಳಪ್ಪ ತಲಾ ಎರಡು, ಸುಮನ್ ಮತ್ತು ಚೇತನ್ ತಲಾ ಒಂದು ಗೋಲು ದಾಖಲಿಸಿದರು. ಚೇಂದಂಡ ಮತ್ತು ಕಂಗಾಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೇಂದಂಡ ತಂಡ 2–0 ಗೋಲುಗಳ ಅಂತರದಿಂದ ಕಂಗಾಂಡ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಚೇಂದಂಡ ತಂಡದ ಪರ ಸನ್ನು, ತಿಮ್ಮಯ್ಯ ತಲಾ ಒಂದು ಗೋಲು ದಾಖಲಿಸಿದರು.
 
ಚೋಯಮಾಡಂಡ ಮತ್ತು ಚೆಕ್ಕೆರ ತಂಡಗಳ ನಡುವಿನ ಪಂದ್ಯದಲ್ಲಿ ಚೆಕ್ಕೆರ ತಂಡ 5-1 ಅಂತರದಿಂದ ಚೋಯ ಮಾಡಂಡ ತಂಡವನ್ನು ಮಣಿಸಿತು. ಚೆಕ್ಕೇರ ತಂಡದ ಪರ ಆದರ್ಶ್‌ ಎರಡು, ಸಜನ್,  ಆಕಾಶ್, ಪೂವಯ್ಯ ತಲಾ ಒಂದು ಗೋಲು ದಾಖಲಿಸಿದರೆ, ಚೋಯಮಾಡಂಡ ತಂಡದ ಪರ ಸನ್ನು ಗೋಲು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT