ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಗ್ಗೆಕಾಯಿ ಬೀಜಕ್ಕೂ ಉಂಟು ಔಷಧಿ ಗುಣ

Last Updated 8 ಮೇ 2017, 19:30 IST
ಅಕ್ಷರ ಗಾತ್ರ

ಆರೋಗ್ಯ ಹಾಗೂ ಸೌಂದರ್ಯಕ್ಕೆ ಯಥೇಚ್ಛವಾಗಿ ಉಪಕಾರಿಯಾಗಬಲ್ಲದು ನುಗ್ಗೆಕಾಯಿ.



ನುಗ್ಗೆಕಾಯಿ ಚಿಗುರೆಲೆಯ ಪಲ್ಯ ದೇಹಕ್ಕೆ ಒಳ್ಳೆಯದು. ಜೊತೆಗೆ ನುಗ್ಗೇಕಾಯಿ ಬೀಜದಲ್ಲಿಯೂ ಔಷಧೀಯ ಗುಣವಿದೆ. ನುಗ್ಗೇಕಾಯಿ ಬೀಜದಲ್ಲಿ ಇರುವ ಹಲವು ಔಷದೀಯ ಗುಣಗಳ ಬಗ್ಗೆ ಮಾಹಿತಿ ಇಲ್ಲಿದೆ.

*ಇದರಲ್ಲಿ ವಿಟಮಿನ್‌ ಎ, ಸಿ, ಬಿ ಹೇರಳವಾಗಿದೆ. ರೋಗ ನಿರೋಧಕ ಶಕ್ತಿಯಾಗಿಯೂ ಇದು ಕೆಲಸ ಮಾಡುತ್ತದೆ.

*ಈ ಬೀಜಗಳು ದೇಹದಲ್ಲಿರುವ ಅನಗತ್ಯ ಕೊಬ್ಬಿನಂಶವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತವೆ. ಹೃದಯದ ಅಂಗಾಶಗಳನ್ನು (tissue) ಆರೋಗ್ಯವಾಗಿಡುತ್ತವೆ. ಕ್ಯಾನ್ಸರ್‌ ಸೆಲ್ಸ್‌ಗಳ ಬೆಳವಣಿಗೆಯನ್ನೂ ಕುಂಠಿತಗೊಳಿಸುವ ಶಕ್ತಿ ಇದಕ್ಕಿದೆ. ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು  (b*ood c*ot) ಕಡಿಮೆ ಮಾಡುತ್ತದೆ.

*ಸತು, ಕ್ಯಾಲ್ಶಿಯಂ, ಮ್ಯಾಂಗನಿಸ್‌, ಕಬ್ಬಿಣ ಅಂಶ ಹೆಚ್ಚಿದೆ. ಇನ್ಸುಲಿನ್‌ ಹಾರ್ಮೋನ್‌ ಅನ್ನು ನಿಯಂತ್ರಿಸುವುದರಿಂದ ಸಕ್ಕರೆ ಕಾಯಿಲೆಗೂ ರಾಮಬಾಣ.
*ಆರ್ಥ್ರೈಟಿಸ್‌ನಂಥ ಎಲುಬಿನ ಸಮಸ್ಯೆ ನಿವಾರಣೆಗೂ ಇವು ಉಪ ಯೋಗಕಾರಿ.

*ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು.

*ತ್ವಚೆಯ ಆರೋಗ್ಯಕ್ಕೆ ಉತ್ತಮ. ತ್ವಚೆಯ ಜೀವಕೋಶಗಳಿಗೆ ಯಾವುದೇ ರೀತಿಯಲ್ಲಿ ಹಾನಿ ಯಾಗದಂತೆ ನೋಡಿಕೊಳ್ಳುತ್ತದೆ. ಚರ್ಮ ಸುಕ್ಕುಕಟ್ಟದಂತೆ ಕಾಪಾಡುತ್ತದೆ.

*ಒಣಗಿದ ನುಗ್ಗೆಕಾಯಿ ಬೀಜದಿಂದ ಮಾಡಿದ ಎಣ್ಣೆ ಮಾಯಿಶ್ಚರೈಸರ್‌ ರೀತಿಯಲ್ಲಿ ಬಳಸಬಹುದು. ತ್ವಚೆಯ ಆರೋಗ್ಯ ವೃದ್ಧಿಸುವುದರೊಂದಿಗೆ ಕಾಂತಿಯು ಹೆಚ್ಚುತ್ತದೆ.

*ತ್ವಚೆಗೆ ಸಂಬಂಧಿಸಿದ ಸೌಂದರ್ಯ ಉತ್ಪನ್ನಗಳಲ್ಲಿ ಹೆಚ್ಚಾಗಿ ನುಗ್ಗೆಕಾಯಿ ಬೀಜವನ್ನು ಬಳಸಲಾಗುತ್ತದೆ. ಇದರ ಎಣ್ಣೆ ಮುಖದ ಮೇಲೆ ಉಂಟಾಗುವ ಮೊಡವೆ, ಗುಳ್ಳೆ, ಕಪ್ಪು ಕಲೆಯನ್ನು ಕಡಿಮೆ ಮಾಡುತ್ತದೆ.

*ವಿಟಮಿನ್‌ ಸಿ ಅಂಶ ಹೆಚ್ಚಿರುವುದರಿಂದ ಕೂದಲ ಬುಡದಲ್ಲಿ ರಕ್ತಸಂಚಾರ ಸರಿಯಾಗಿ ಆಗುತ್ತದೆ. ಇದರಿಂದ ಕೂದಲಿನ ಬೇರುಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿ ದೊರೆಯುತ್ತದೆ. ಕೂದಲು ಉದುರುವುದು ಕಡಿಮೆಯಾಗುವುದಲ್ಲದೆ, ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT