ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾ.ಸದಾಶಿವ ವರದಿ ಜಾರಿಗೆ ಆಗ್ರಹ

Last Updated 9 ಮೇ 2017, 5:42 IST
ಅಕ್ಷರ ಗಾತ್ರ

ರೋಣ: ನ್ಯಾ. ಎ.ಜೆ.ಸದಾಶಿವ ಆಯೋ ಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರೋಣ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಮಾದಿಗ– ದಂಡೋರ ಸಮಿತಿ ವತಿಯಿಂದ ಅರಬೆತ್ತಲೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಸೋಮವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ನಡೆದ ಅರೆ ಬೆತ್ತಲೆ ಪ್ರತಿಭಟನೆ ವೇಳೆ ಮಾತನಾಡಿದ ದಸಂಸ ಮುಖಂಡ ಪ್ರಕಾಶ ಹೊಸಳ್ಳಿ, ಸ್ವಾತಂತ್ರ್ಯ ಸಿಕ್ಕು 70 ವರ್ಷಗಳಾದರೂ ಮಾದಿಗ ಜನಾಂಗ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದೆ. ಇದಕ್ಕೆ ಸಂಘಟನೆ, ಒಗ್ಗಟ್ಟಿನ ಕೊರತೆ, ಶೈಕ್ಷಣಿಕ ಹಿಂಬೀಳಿಕೆ ಕಾರಣವಾಗಿದೆ ಎಂದರು.

ಮಂಜುನಾಥ ಹಾಳಕೇರಿ ಮಾತ ನಾಡಿ, ಮಾದಿಗ ಜನಾಂಗದ ಮೇಲೆ ನಿತ್ಯ ಒಂದಿಲ್ಲೊಂದು ಅನ್ಯಾಯ, ಅತ್ಯಾಚಾರ, ದಬ್ಬಾಳಿಕೆ, ನಡೆಯುತ್ತಲಿದೆ. ಕರ್ನಾಟಕ ರಾಜ್ಯದಲ್ಲಿ ಮಾದಿಗ ಜನಾಂಗ 90 ಲಕ್ಷ ಜನಸಂಖ್ಯೆ ಹೊಂದಿದೆ. ಆದರೂ ಸಮು ದಾಯ ಸರ್ಕಾರದ ಸೌಲಭ್ಯ ಪಡೆಯುವಲ್ಲಿ ವಂಚಿತರಾಗಿದೆ.

ಇದನ್ನು ಮನಗಂಡು ಸದಾಶಿವ ಆಯೋಗ ಪರಿಶಿಷ್ಟ ಜಾತಿಗೆ ನೀಡಿರುವ ಶೇ 15ರ ಪೈಕಿ ಶೇ 6ರಷ್ಟು ಮೀಸಲಾತಿಯನ್ನು ಮಾದಿಗರಿಗೆ ನೀಡ ಬೇಕು ಎಂದು ಶಿಫಾರಸು ಮಾಡಿದೆ. ಆ ಶಿಫಾರಸನ್ನು ಯಥಾವತ್ತಾಗಿ ಜಾರಿಗೊ ಳಿಸಬೇಕು ಎಂದು ಒತ್ತಾಯಿಸಿದರು.

ಯಮನಪ್ಪ ಮಾದರ, ರಮೇಶ ಮಾತಿನ, ಮೈಲಾರಪ್ಪ ಮಾದರ, ಶಿವಪ್ಪ ಮಾದರ, ಈರಪ್ಪ ಭಾವಿಮನಿ, ಮಲ್ಲು ಮಾದರ, ಸುನೀಲ ಹೊಸಳ್ಳಿ, ಬಾಲಪ್ಪ ಮಾದರ, ಎಫ್.ಡಿ.ಮಾದರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT