ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇಟಾ ಬಳಕೆಯಲ್ಲಿ ಗಮನಾರ್ಹ ಹೆಚ್ಚಳ

Last Updated 9 ಮೇ 2017, 19:30 IST
ಅಕ್ಷರ ಗಾತ್ರ

ಬೈಲ್‌ ಬ್ಯಾಲನ್ಸ್‌ ನಿರ್ವಹಿಸುವ ದೇಶದ ಪ್ರಮುಖ ಕಿರುತಂತ್ರಾಂಶವಾಗಿರುವ (ಆ್ಯಪ್‌) ಟ್ರೂ ಬ್ಯಾಲನ್ಸ್‌ ನಡೆಸಿರುವ ಅಧ್ಯಯನದ ಪ್ರಕಾರ, ದೇಶದ ಮೊಬೈಲ್‌ ಬಳಕೆದಾರರ ಡೇಟಾ ಬಳಕೆ ಪ್ರಮಾಣವು 1 ‘ಜಿಬಿ’ಗಳಷ್ಟು ಗಮನಾರ್ಹ ಏರಿಕೆ ದಾಖಲಿಸಿದೆ.

ದೂರಸಂಪರ್ಕ ಸೇವಾ ಸಂಸ್ಥೆಗಳು ಕaೈಗೆಟುಕುವ ಬೆಲೆಯ ಡೇಟಾ ಪ್ಲ್ಯಾನ್‌ಗಳ  ಕೊಡುಗೆಗಳನ್ನು ಪೈಪೋಟಿ ಮೇಲೆ ನೀಡಿದ್ದರಿಂದ ದೇಶದಲ್ಲಿ ದತ್ತಾಂಶ ಬಳಕೆ  ಪ್ರಮಾಣವು ಗಣನೀಯ ಏರಿಕೆ ದಾಖಲಿಸಲು ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಟ್ರೂ ಬ್ಯಾಲನ್ಸ್‌ ಆ್ಯಪ್‌ನಲ್ಲಿ– ಮೊಬೈಲ್‌ನಲ್ಲಿನ ಕರೆಗಳಿಗೆ ಉಳಿದಿರುವ ಮೊತ್ತ ಮತ್ತು ದತ್ತಾಂಶದ ಬಳಕೆ ವಿವರ ಒದಗಿಸುವ ಮತ್ತು ಆಂಡ್ರಾಯ್ಡ್‌ ಬಳಕೆದಾರರಿಗೆ ಡೇಟಾ ಚಂದಾದಾರಿಕೆ ಬಗ್ಗೆ ಎಚ್ಚರಿಕೆಯ ಸಂದೇಶ ನೀಡುವ ಮತ್ತು ತುಂಬ ಸುಲಭವಾಗಿ ಡೇಟಾ ರೀಚಾರ್ಜ್ ಮಾಡುವ ಸೌಲಭ್ಯಗಳು ಇವೆ.

ಕಳೆದ ತಿಂಗಳು ಈ ಆ್ಯಪ್‌ಗೆ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ವ್ಯಾಪಕ ಪ್ರಮಾಣದಲ್ಲಿ ಬೇಡಿಕೆ ಕಂಡು ಬಂದಿತ್ತು. 3 ಕೋಟಿಗಳಷ್ಟು ಡೌನ್‌ಲೋಡ್‌ ಮಾಡಿಕೊಳ್ಳಲಾಗಿದೆ.  ಹೀಗಾಗಿ ಇದು  ಆ್ಯಪ್‌ಗಳ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿ ಇದೆ.

ಟ್ರೂ ಬ್ಯಾಲನ್ಸ್‌ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಪ್ರಿಪೇಯ್ಡ್‌ ಬಳಕೆದಾರರ ಒಂದು ಬಾರಿಯ ಸರಾಸರಿ ರೀಚಾರ್ಜ್‌್ ಪ್ರಮಾಣವು 2016ರ ಫೆಬ್ರುವರಿ ತಿಂಗಳಲ್ಲಿ 400 ಎಂಬಿ ಗಳಷ್ಟು ಇದ್ದದ್ದು, 2017ರ ಮಾರ್ಚ್‌ ತಿಂಗಳಲ್ಲಿ 1 ಜಿಬಿಗೆ ಏರಿಕೆಯಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ 150ರಷ್ಟು ಏರಿಕೆ ದಾಖಲಿಸಿದೆ.

ಒಟ್ಟಾರೆ ಡೇಟಾ ರೀಚಾರ್ಜ್‌ ಮೊತ್ತವು ಏರಿಕೆಯಾಗಿದ್ದರೂ, ಡೇಟಾ ಪ್ಯಾಕ್‌ ರೀಚಾರ್ಜ್‌, ಹಿಂದಿನ ವರ್ಷದ ಅಕ್ಟೋಬರ್‌ ತಿಂಗಳಲ್ಲಿ  ಗರಿಷ್ಠ ಮಟ್ಟ  ಎಂದರೆ 1.6 ಜಿಬಿಗೆ ತಲುಪಿತ್ತು.  ಪ್ರತಿ ದಿನದ ಡೇಟಾ ಬಳಕೆಯು 40 ಎಂಬಿಗಳಿಂದ 55 ಎಂಬಿಗಳಿಗೆ ಅಂದರೆ ಶೇ 37ರಷ್ಟು ಏರಿಕೆಯಾಗಿತ್ತು ಎಂಬುದು ವಿಶ್ಲೇಷಣೆಯಿಂದ ತಿಳಿದು ಬರುತ್ತದೆ.

ರಾತ್ರಿ ವೇಳೆಯ ಬಳಕೆಯೂ ಗಮನಾರ್ಹವಾಗಿ ಹೆಚ್ಚಳ ದಾಖಲಿಸಿದೆ.  ಬಳಕೆದಾರರು ರಾತ್ರಿ ಹೊತ್ತು 20 ಎಂಬಿಗಳಷ್ಟು ಡೇಟಾ ಬಳಸಿದ್ದಾರೆ. ಇದು ಪ್ರತಿ ದಿನದ ಸರಾಸರಿ ಬಳಕೆಯ ಅರ್ಧದಷ್ಟಿತ್ತು. ಮೊಬೈಲ್‌ ಸೇವಾ ಸಂಸ್ಥೆಗಳು ಪರಿಚಯಿಸಿರುವ ಹೊಸ ಅನಿಯಮಿತ ಯೋಜನೆಗಳು ಕೂಡ ಗ್ರಾಹಕರ ಡೇಟಾ ಬಳಕೆಯ ಪ್ರವೃತ್ತಿಯನ್ನು ಬದಲಿಸಿವೆ.

ರಿಲಯನ್ಸ್‌ ಜಿಯೊದ ಅನಿಯಮಿತ ಡೇಟಾ ಯೋಜನೆ ಪ್ರಕಟಗೊಂಡ ನಂತರ ಬಳಕೆದಾರರು ಇಂಟರ್‌ನೆಟ್‌ ಸಂಪರ್ಕ ಪಡೆಯುವ ಸಂಖ್ಯೆಯು 3.12 ರಿಂದ 2ಕ್ಕೆ ಇಳಿದಿತ್ತು.  ಆದರೆ, ಸರಾಸರಿ 6 ಬಾರಿ ಇಂಟರ್‌ನೆಟ್‌ ಸಂಪರ್ಕ ಪಡೆಯುವ ಹಗಲು ಹೊತ್ತಿನ ಬಳಕೆ ಪ್ರಮಾಣದಲ್ಲಿ ಮಾತ್ರ ಯಾವುದೇ ಬದಲಾವಣೆ ಕಂಡು ಬಂದಿಲ್ಲ.

‘ಈ ಮೊದಲು ಭಾರತದ ಬಳಕೆದಾರರು ಡೇಟಾ ಮಿತಿ ಮತ್ತು ಬೆಲೆ ಕಾರಣಕ್ಕೆ ತಮ್ಮ ಡೇಟಾ ಬಳಕೆಗೆ ಮಿತಿ ಹಾಕಿಕೊಂಡಿದ್ದರು. ಮೊಬೈಲ್‌ ಸೇವಾ ಸಂಸ್ಥೆಗಳು ಪ್ರಕಟಿಸಿದ ದರ ಯೋಜನೆ ಮತ್ತು  ಕರೆ ದರಗಳಲ್ಲಿನ ಭಾರಿ ಬದಲಾವಣೆಯ ಫಲವಾಗಿ ಬಳಕೆದಾರರ ಡೇಟಾ ಬಳಕೆ ಮತ್ತು ಆಸಕ್ತಿಯು ಇತ್ತೀಚಿನ ದಿನಗಳಲ್ಲಿ ಗಮನಾರ್ಹವಾಗಿ ಬದಲಾಗಿದೆ’ ಎಂದು ಟ್ರೂ ಬ್ಯಾಲನ್ಸ್‌ನ ನಿರ್ದೇಶಕ ಅಲೆಕ್ಸ್‌ ಸುಹ್‌ ಹೇಳುತ್ತಾರೆ.

*1 ಜಿಬಿ ದಾಟಿದ  ಡೇಟಾ ಪ್ಯಾಕ್‌ ರೀಚಾರ್ಜ್‌
*ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 150ರಷ್ಟು ಏರಿಕೆ
*ಪ್ರೀಪೇಯ್ಡ್‌ ಗ್ರಾಹಕರ ಸರಾಸರಿ ಡೇಟಾ ರೀಚಾರ್ಜ್‌ ಮೊತ್ತವು 2016ರ ಫೆಬ್ರುವರಿಯಲ್ಲಿ 400 ‘ಎಂಬಿ’ಗಳಷ್ಟಿತ್ತು. 2017ರ ಮಾರ್ಚ್‌ ಹೊತ್ತಿಗೆ ಅದು 1 ‘ಜಿಬಿ’ಗೆ    ಏರಿಕೆಯಾಗಿದೆ
*ಪ್ರತಿ ದಿನದ ಡೇಟಾ ಬಳಕೆಯೂ 55 ‘ಎಂಬಿ’ಗೆ ಅಂದರೆ  ಶೇ 37ರಷ್ಟು ಹೆಚ್ಚಳಗೊಂಡಿದೆ
*ದೂರಸಂಪರ್ಕ ಸೇವಾ ಸಂಸ್ಥೆಗಳ ಮಧ್ಯೆ ನಡೆಯುತ್ತಿರುವ ತೀವ್ರ ಪೈಪೋಟಿ ಫಲವಾಗಿ ದೇಶದಲ್ಲಿ ಡೇಟಾ ಬಳಕೆ ಹೆಚ್ಚಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT