ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಿನ ಮದುವೆಗೆ ಸಾಲ ಸೌಲಭ್ಯ

Last Updated 9 ಮೇ 2017, 19:30 IST
ಅಕ್ಷರ ಗಾತ್ರ

ಹಿಂದೆ ವಿಮಾನಯಾನ ಎನ್ನುವುದು  ಅನೇಕರ ಪಾಲಿಗೆ ಗಗನಕುಸುಮವಾಗಿತ್ತು.  ಕಡಿಮೆ ಆದಾಯ ಮತ್ತು ದುಬಾರಿ ಪ್ರಯಾಣ ದರದಿಂದ ವಿಮಾನ ಯಾನಕ್ಕೆ ಹಿಂದೇಟು ಹಾಕುತ್ತಿದ್ದರು. ಈಗ ಪರಿಸ್ಥಿತಿ ಬದಲಾಗುತ್ತಿದೆ. ಇಂದು ಶ್ರೀಸಾಮಾನ್ಯರೂ ತಮ್ಮ ವಿಮಾನಯಾನದ ಕನಸು ಈಡೇರಿಸಿಕೊಳ್ಳುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ವಿಮಾನ ಟಿಕೆಟ್‌ ಕಾಯ್ದಿರಿಸಬಹುದು. ಇದು ಅಂತರ್ಜಾಲದ ಪ್ರಭಾವ. ಎಲ್ಲವೂ ಕ್ಷಣಾರ್ಧದಲ್ಲಿ ಲಭ್ಯ.

80 ಮತ್ತು 90ರ ದಶಕದಲ್ಲಿ ಜನಿಸಿದ ಪೀಳಿಗೆಗೂ ಇತರರಿಗೂ ಅಪಾರ ವ್ಯತ್ಯಾಸವಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಈಗಿನ ಪೀಳಿಗೆಗೆ ಅಂತರ್ಜಾಲ ಅನಿವಾರ್ಯ ಮತ್ತು ಅಗತ್ಯ ಎನ್ನುವಂತಾಗಿದೆ. ಅಂತರ್ಜಾಲದಲ್ಲಿ ಸುಲಭವಾಗಿ ದೊರೆಯುವ ಮಾಹಿತಿ ಇದಕ್ಕೆ ಕಾರಣವಾಗಿದೆ. ಜತೆಗೆ ಬಹುತೇಕ ಕೆಲಸಗಳನ್ನು ಸುಲಭಗೊಳಿಸಿದೆ.

ಈಗಿನ ಪೀಳಿಗೆಯ ಆದಾಯವೂ ಹೆಚ್ಚಿದೆ. ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಯುವಜನತೆ ಯೋಚಿಸುತ್ತಿದ್ದಾರೆ. ಹೀಗಾಗಿ ಜೀವನಕ್ಕೆ ಬೇಕಾಗುವ ಅನುಕೂಲಗಳನ್ನು ಹೆಚ್ಚಿಸಿಕೊಳ್ಳುವ ಬಗ್ಗೆಯೂ ಚಿತ್ತ ಹರಿಸುತ್ತಿದ್ದಾರೆ. ಈಗಿನ ಪರಿಸ್ಥಿತಿ ತಕ್ಕಂತೆ ಅಗತ್ಯ ವಸ್ತುಗಳು ಸಹ ಸುಲಭವಾಗಿ ಸಿಗುತ್ತವೆ. ಏರ್‌ಲೈನ್ಸ್‌ ಟಿಕೆಟ್‌ ಇದಕ್ಕೆ ಉತ್ತಮ ಉದಾಹರಣೆ.

ಹೂಡಿಕೆ ರೀತಿಯಲ್ಲಿ ಜಾಣತನದಿಂದ ಖರ್ಚು ಮಾಡಬೇಕು. ಒಬ್ಬರು ಯಾವುದಾದರೂ ಯೋಜನೆ ಮೇಲೆ ಹೂಡಿಕೆ ಮಾಡಲು  ನೀಡುವ ಮಹತ್ವವು ಖರ್ಚು ಮಾಡುವುದಕ್ಕೂ ನೀಡಬೇಕಾಗುತ್ತದೆ. ಸದ್ಯಕ್ಕೆ ಬಡ್ಡಿ ದರಗಳು ಕಡಿಮೆ ಇವೆ. ಇದರಿಂದ ಆಸ್ತಿಗಳು ಸೇರಿದಂತೆ ಯಾವುದೇ ರೀತಿಯ ವಸ್ತುಗಳ ಖರೀದಿಗೆ ಅನುಕೂಲಕರವಾಗಿದೆ. ಹೀಗಾಗಿ ಸಾಲ ಪಡೆಯಲು ಪ್ರಸ್ತುತ ಅವಧಿ ಹೆಚ್ಚು ಪ್ರಾಶಸ್ತ್ಯ ಪಡೆದಿದೆ. ಉದಾಹರಣೆಗೆ ಮನೆ ಅಥವಾ ವಾಹನ ಖರೀದಿಸುವುದು ಸೂಕ್ತ. ಮದುವೆಗೂ ಸಹ ಇದು ಹೆಚ್ಚು ಸಕಾಲ.

2016ರಲ್ಲಿ ನಡೆದ ಸಮೀಕ್ಷೆ ಪ್ರಕಾರ ಯುವಕರು ಸರಳ ಮದುವೆಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ, ಮಧುಚಂದ್ರಕ್ಕೆ ಮಾತ್ರ ಆಕರ್ಷಕವಾದ ಮತ್ತು ಹೆಚ್ಚು ಜನಪ್ರಿಯತೆ ಪಡೆದ ಸ್ಥಳಗಳಿಗೆ ತೆರಳುತ್ತಿದ್ದಾರೆ. ಸಾಂಪ್ರದಾಯಿಕವಾಗಿ ಮದುವೆಗಿಂತ ಆತ್ಮೀಯ ಸ್ನೇಹಿತರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಲು ಯುವಕರು ಬಯಸುತ್ತಿದ್ದಾರೆ. ಇಂದಿನ ‘ಫೇಸ್‌ಬುಕ್‌’ ಪೀಳಿಗೆಗೆ ಕೆಲವು ಸಂಗತಿಗಳು ಅತಿ ಮುಖ್ಯವಾಗುತ್ತವೆ. ಇವುಗಳಲ್ಲಿ ಜೀವನದ ಅತಿ ಮುಖ್ಯ ಭಾಗವಾದ ಮದುವೆಯೂ ಒಂದು.

ಕಳೆದ ವರ್ಷ ನಡೆದ ಸಮೀಕ್ಷೆ ಇಂತಹ ವಿಷಯಗಳ ಬಗ್ಗೆ ಆಸಕ್ತಿದಾಯಕ ಮಾಹಿತಿ ನೀಡಿದೆ. ಶೇಕಡ 40ರಷ್ಟು ಯುವತಿಯರು ಮದುವೆಯ ಬಗ್ಗೆ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮದುವೆ ಸಮಾರಂಭಗಳು ಆತ್ಮೀಯವಾಗಿ, ಆಪ್ತವಾಗಿ ಮತ್ತು ಸ್ಟೈಲಿಷ್‌ ಆಗಿರಬೇಕು. ಇನ್ನು ಶೇಕಡ 20ರಷ್ಟು ತರುಣಿಯರು ಮದುವೆಗಳು ಅದ್ದೂರಿಯಾಗಿ ನಡೆಯಬೇಕು ಎಂದು ಬಯಸುತ್ತಾರೆ. ಇದೇ ಅಭಿಪ್ರಾಯವನ್ನು 26ರಿಂದ 30 ವಯಸ್ಸಿನ ಶೇಕಡ 57ರಷ್ಟು ಮಹಿಳೆಯರೂ ವ್ಯಕ್ತಪಡಿಸುತ್ತಾರೆ. ಶೇಕಡ 30ರಷ್ಟು ಮಂದಿ ತಮ್ಮ ಸ್ವಂತ ನಗರ ಅಥವಾ ಪಟ್ಟಣಗಳಲ್ಲೇ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಶೇಕಡ 50ರಷ್ಟು ಮಂದಿ ₹ 5ಲಕ್ಷದಿಂದ 15ಲಕ್ಷದವರೆಗೆ ಮದುವೆಗೆ ಖರ್ಚು ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ,  ಶೇಕಡ 25ರಿಂದ 30ರಷ್ಟು ಮಂದಿ ಮಾತ್ರ ತಾವು ಇಚ್ಛಿಸುವ ಮದುವೆ ಸಂಭ್ರಮವನ್ನು ಈಡೇರಿಸಿಕೊಳ್ಳಲು ಹಣವನ್ನು ಉಳಿತಾಯ ಮಾಡಿರುತ್ತಾರೆ ಎನ್ನುವುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಬಹುತೇಕ ಮಂದಿ  ₹ 1ರಿಂದ 5 ಲಕ್ಷದವರೆಗೆ ಮಾತ್ರ ಖರ್ಚು ಮಾಡುತ್ತಾರೆ.

‘ಕನಸಿನ ಮದುವೆ’ ಈಡೇರಿಸಿಕೊಳ್ಳಲು ಮದುವೆಗಾಗಿ ಪಡೆಯುವ ಸಾಲ ನೆರವಾಗುತ್ತದೆ. ಮದುವೆಗಾಗಿ ಪಡೆಯುವ ಸಾಲ ವೈಯಕ್ತಿಕ ಸಾಲವಾಗಿರುತ್ತದೆ. ಇದು ಮದುವೆಗೆ ಸಂಬಂಧಿಸಿದ ಖರ್ಚು ವೆಚ್ಚಗಳನ್ನು ನಿಭಾಯಿಸಲು ಅನುಕೂಲವಾಗುತ್ತದೆ. ಅನುಕೂಲವಾದಾಗ ಸಾಲವನ್ನು ಮರುಪಾವತಿಸಬಹುದು. ಸ್ಥಳೀಯ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳು, ಕ್ರೆಡಿಟ್‌ ಯೂನಿಯನ್‌ಗಳು, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಮತ್ತು  ಕೆಲವು ಆನ್‌ಲೈನ್‌ ಬ್ಯಾಂಕ್‌ಗಳು ಸೇರಿದಂತೆ ಬಹುತೇಕ ಹಣಕಾಸು ಸಂಸ್ಥೆಗಳು ಮದುವೆಗೆ ಸಾಲ ನೀಡುತ್ತವೆ.

ಯಾರೂ ಬೇಕಾದರೂ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇಲ್ಲಿ ಸಾಲ ಪಡೆಯುವವರ ‘ಸಾಲ ಮರು ಪಾವತಿಯ ಸಾಮರ್ಥ್ಯ, ಸಾಲದ ಇತಿಹಾಸ ಹಾಗೂ ಸಾಲ ಮತ್ತು ಆದಾಯದ ಅನುಪಾತ  ಮಾನದಂಡವಾಗುತ್ತವೆ. ಈ ಮೂರೂ ಅಂಶಗಳು ಸಮರ್ಪಕವಾಗಿದ್ದರೆ ಸಾಲ ನೀಡುವವರು ಯಾವುದೇ ರೀತಿಯ ತಕರಾರು ಇಲ್ಲದೆಯೇ  ಹಣಕಾಸು ನೆರವು ಒದಗಿಸುತ್ತಾರೆ.

ಆದರೆ, ಸಾಲ ಪಡೆಯುವಾಗ ಎಚ್ಚರವಹಿಸುವುದು ಸಹ ಮುಖ್ಯವಾಗುತ್ತದೆ. ಬಜೆಟ್‌ಗೆ ಅನುಗುಣವಾಗಿ ಸಾಲ ಪಡೆಯಬೇಕು. ವೈಯಕ್ತಿಕ ಆದಾಯ, ಖರ್ಚು–ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಸಾಲ ನೀಡುವ ಹಣಕಾಸು ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮರುಪಾವತಿಯ ಸಾಮರ್ಥ್ಯ, ಆದಾಯ ಮುಂತಾದ ಅಂಶಗಳನ್ನು ಪರಿಗಣಿಸಿ ಹಣಕಾಸು ಸಂಸ್ಥೆಗಳು ಸಾಲ ನೀಡುತ್ತವೆ. ಬಹುತೇಕ ಹಣಕಾಸು ಸಂಸ್ಥೆಗಳು ಕನಿಷ್ಠ 750 ‘ಸಿಐಬಿಐಎಲ್‌’ ಅಂಕಗಳಿದ್ದರೆ ಮಾತ್ರ ಸಾಲ ನೀಡುತ್ತವೆ. ಹೀಗಾಗಿ ಸಾಲ ಪಡೆಯುವ ಮುನ್ನ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಮದುವೆ ನಂತರ ಪ್ರತಿ ತಿಂಗಳು ಸಾಲ ಮರುಪಾವತಿಯ ಬಗ್ಗೆಯೂ ಸಾಲಗಾರರು ಗಮನದಲ್ಲಿಟ್ಟುಕೊಳ್ಳಬೇಕು. ಸಾಧಾರಣವಾಗಿ ಮೂರು ವರ್ಷಗಳಲ್ಲಿ ಸಾಲ ಮರುಪಾವತಿ ಮಾಡುವುದು ಹೆಚ್ಚು. ಮದುವೆಗೆಗಾಗಿ ಪಡೆಯುವ ಸಾಲ ಅಭದ್ರತೆಯಿಂದ ಇರುವುದರಿಂದ ಸಾಲ ನೀಡುವ ಹಣಕಾಸು ಸಂಸ್ಥೆಗಳು ಹೆಚ್ಚಿನ ದಾಖಲೆಗಳನ್ನು ಕೇಳುವುದು ಸಹಜ. ಬ್ಯಾಂಕ್‌ ವಿವರ, ಆದಾಯದ ದಾಖಲೆ, ಆದಾಯ ತೆರಿಗೆ ವಿವರ, ಮದುವೆ ಕಾರ್ಡ್‌ ಮುಂತಾದ ವಿವರಗಳನ್ನು ಕೇಳಬಹುದು.

ಕಡಿಮೆ ಬಡ್ಡಿದರದಲ್ಲಿ ಮದುವೆಗೆ ಪಡೆಯುವ ಸಾಲದಿಂದ ಮದುವೆಯ ಸಂಭ್ರಮವನ್ನು ಹೆಚ್ಚಿಸಬಹುದು. ಈ ಬಗ್ಗೆ ದಾಂಪತ್ಯ ಜೀವನಕ್ಕೆ ಕಾಲಿಡುವವರು ಅಗತ್ಯ ಮಾಹಿತಿ ಪಡೆಯಬೇಕು.

ಯುವತಿಯರ ಆದ್ಯತೆಗಳು

20%ಅದ್ಧೂರಿಗೆ ಆದ್ಯತೆ ನೀಡುವವರು

40%ಮದುವೆ ಸಮಾರಂಭ ಆಪ್ತವಾಗಿರಬೇಕು ಎನ್ನುವವರ ಸಂಖ್ಯೆ

50%₹ 4 ರಿಂದ ₹ 15 ಲಕ್ಷದವರೆಗೆ ವೆಚ್ಚ ಮಾಡಲು ಒಲವು ಹೊಂದಿದವರು

25-30%ಮದುವೆ ಸಂಭ್ರಮಕ್ಕೆ ವೆಚ್ಚ ಮಾಡಲು ಉಳಿತಾಯ ಮಾಡಿದವರು

ಗೋವಿಂದ ಶಂಕರನಾರಾಯಣನ್‌
(ಟಾಟಾ ಕ್ಯಾಪಿಟಲ್‌ನ ರಿಟೇಲ್‌ ಬಿಸಿನೆಸ್‌ ಮತ್ತು ಹೌಸಿಂಗ್ ಫೈನಾನ್ಸ್‌ನ ಮುಖ್ಯ ಕಾರ್ಯನಿರ್ವಹಣಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT