ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಅತ್ಯಾಚಾರಿಗಳಿಗೆ ಗಲ್ಲು

Last Updated 9 ಮೇ 2017, 20:13 IST
ಅಕ್ಷರ ಗಾತ್ರ

ಪುಣೆ: ಎಂಟು ವರ್ಷದ ಹಿಂದೆ ನಯನಾ ಪೂಜಾರಿ ಎಂಬ 28 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್‌ರನ್ನು ಅಪಹರಿಸಿ, ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ವಿಶೇಷ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ.

ಅಪರಾಧಿಗಳಾದ ಯೋಗೇಶ್ ರಾವತ್, ಮಹೇಶ್ ಠಾಕೂರ್ ಮತ್ತು ವಿಶ್ವಾಸ್ ಕದಂ ‘ತೀವ್ರ ಕ್ರೂರತೆಯನ್ನು ಪ್ರದರ್ಶಿಸಿದ್ದಾರೆ’ ಎಂದು ವಿಶೇಷ ನ್ಯಾಯಮೂರ್ತಿ ಎಲ್.ಎಲ್. ಯೆಂಕರ್ ಸೋಮವಾರ ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

‘ಅಪರಾಧಿಗಳು ಅತ್ಯಾಚಾರ ಮಾಡಿ ಕ್ರೂರವಾಗಿ ಹತ್ಯೆ ಮಾಡಿರುವ ಬಗ್ಗೆ ಎಲ್ಲ ಸಾಕ್ಷ್ಯಾಧಾರಗಳು ಸಾಬೀತಾಗಿವೆ. ಅವರ ಕೃತ್ಯಕ್ಕೆ ಸೂಕ್ತ ಶಿಕ್ಷೆ ನೀಡಲಾಗಿದೆ’ ಎಂದಿದ್ದಾರೆ. ಮೂವರಿಗೂ ತಲಾ ₹19,000 ದಂಡವನ್ನೂ ವಿಧಿಸಲಾಗಿದೆ.

ವಿಶಾಖಾ ಮಂಡಲ್ ಎಂಬುವವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲೂ ಈ ಮೂವರು ವಿಚಾರಣೆ ಎದುರಿಸುತ್ತಿದ್ದರು.

2009ರ ಅಕ್ಟೋಬರ್ 7ರ ಸಂಜೆ ಕೆಲಸ ಮುಗಿಸಿ ಮನೆಗೆ ಮರಳಲು ವಾಹನಕ್ಕಾಗಿ ಕಾಯುತ್ತಿದ್ದಾಗ ನಯನಾ ಅವರನ್ನು ಅಪಹರಿಸಲಾಗಿತ್ತು.
ಎರಡು ದಿನಗಳ ನಂತರ ಅರಣ್ಯ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.

ಪುಣೆ ಮತ್ತು ಸುತ್ತಮುತ್ತಲಿನ ಐಟಿ, ಬಿಪಿಒ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸೂಕ್ತ ಭದ್ರತೆ ಸಿಗುತ್ತಿಲ್ಲ ಎಂಬ ಚರ್ಚೆಯನ್ನೂ ಈ ಪ್ರಕರಣವು ಹುಟ್ಟುಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT