ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ವರ್ಷವೂ ‘ಉತ್ತಮ ಶಾಖೆ’ಗರಿ

Last Updated 10 ಮೇ 2017, 6:28 IST
ಅಕ್ಷರ ಗಾತ್ರ
ಚಿಕ್ಕಬಳ್ಳಾಪುರ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯು ತನ್ನ ಅತ್ಯುತ್ತಮ ಕಾರ್ಯ ನಿರ್ವಹಣೆಯಿಂದ ಸತತ ಮೂರನೇ ಬಾರಿ ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ ಉಳಿಸಿಕೊಂಡು, ರಾಜ್ಯಪಾಲರ ಪ್ರಶಸ್ತಿಗೆ ಭಾಜನವಾಗಿದೆ. 
 
ಇತ್ತೀಚೆಗೆ ಬೆಂಗಳೂರಿನ ರಾಜಭವನ ದಲ್ಲಿ ಆಯೋಜಿಸಿದ್ದ ‘ವಿಶ್ವ ರೆಡ್‌ಕ್ರಾಸ್ ದಿನಾಚರಣೆ’ ಮತ್ತು ಕರ್ನಾಟಕ ರಕ್ತನಿಧಿಯ ರಜತ ಮಹೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಜಿಲ್ಲಾ ಶಾಖೆ ಉಪಾ ಧ್ಯಕ್ಷ ಡಾ.ಕೆ.ಪಿ. ಶ್ರೀನಿವಾಸಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಮಂಜು ನಾಥ್, ಖಜಾಂಚಿ ಎಂ. ಜಯರಾಂ ಅವರು 2015–16ನೇ ಸಾಲಿನ ‘ಉತ್ತಮ ಜಿಲ್ಲಾ ಶಾಖೆ’ ಪ್ರಶಸ್ತಿ ಸ್ವೀಕರಿಸಿದರು. 
 
2008ರಲ್ಲಿ ಆರಂಭಗೊಂಡ ರೆಡ್‌ ಕ್ರಾಸ್ ಜಿಲ್ಲಾ ಶಾಖೆಯು ಆರಂಭದಲ್ಲಿ ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. 2012-11ನೇ ಸಾಲಿನಲ್ಲಿ ನಾರಾಯಣಾಚಾರ್ಯ ಅವರು ಕಾರ್ಯದರ್ಶಿಯಾದ ಬಳಿಕ  ಚಟುವಟಿಕೆ ಗಳನ್ನು  ವಿಸ್ತರಿಸಿತು.
 
ಇದೇ ಅವಧಿಯಲ್ಲಿ ₹ 25 ಲಕ್ಷ ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿಯೇ ಸುಸಜ್ಜಿತವಾದ ರಕ್ತನಿಧಿ ಕೇಂದ್ರ ಸ್ಥಾಪಿಸಲಾಯಿತು. 2012–13 ರಲ್ಲಿ ರಕ್ತ ಘಟಕಗಳ ವಿಭಜನೆ ವಿಭಾಗ ಆರಂಭಿಸುವ ಜತೆಗೆ ವೈದ್ಯರು, ಪ್ರಯೋ ಗಾಲಯ ತಜ್ಞರು, ಸಿಬ್ಬಂದಿ ನಿಯೋಜಿಸಲಾಯಿತು. 
 
ಪ್ರಸ್ತುತ  4,000 ಸದಸ್ಯರನ್ನು ಒಳ ಗೊಂಡಿರುವ ಸಂಸ್ಥೆ  ತಾಲ್ಲೂಕು ಆಸ್ಪತ್ರೆ ಯಲ್ಲಿ ರಕ್ತ ಸಂಗ್ರಹ ಘಟಕ ಹೊಂದಿದೆ.  ಪ್ರೌಢ ಶಾಲೆ ಹಂತದಲ್ಲಿ ಜೂನಿಯರ್ ರೆಡ್‌ಕ್ರಾಸ್ ಸೊಸೈಟಿ, ಕಾಲೇಜು ಹಂತದಲ್ಲಿ ಯುವ ರೆಡ್‌ಕ್ರಾಸ್ ಸೊಸೈಟಿ ಎಂಬ ಶಾಖೆಗಳನ್ನು ಆರಂಭಿಸಿದೆ. 
 
ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿರುವ ಶಾಖೆಯು 2013–14 ಮತ್ತು 2014–15ನೇ ಸಾಲಿನಲ್ಲಿ ಕೂಡ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಜಿಲ್ಲಾ ಶಾಖೆಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ. 
***
ರಕ್ತದಾನ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಜವಾಬ್ದಾರಿಯಿಂದ ಕೆಲಸ ಮಾಡುತ್ತಿವೆ. ಎಲ್ಲರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ.
ಜೆ. ಮಂಜುನಾಥ್, ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT