ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡುಕಾಟಿಯ ಐದು ಮಾದರಿ

Last Updated 10 ಮೇ 2017, 19:30 IST
ಅಕ್ಷರ ಗಾತ್ರ

2017ರಲ್ಲಿ ಡುಕಾಟಿ ತನ್ನ ಐದು ಮಾದರಿಯ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೇ ಜೂನ್–ಜುಲೈನಲ್ಲಿ ಈ ಸರಣಿಗಳು ಬಿಡುಗಡೆಗೊಳ್ಳಲಿವೆ. ಮಲ್ಟಿಸ್ಟ್ರಾಡಾ 950, ದಿ ಮಾನ್‌ಸ್ಟರ್ 797, ದಿ ಸ್ಕ್ರಾಂಬ್ಲರ್ ಡೆಸರ್ಟ್ ಸ್ಲೆಡ್, ಸ್ಕ್ರಾಂಬ್ಲರ್ ಕೆಫೆ ರೇಸರ್ ಮತ್ತು ಸೂಪರ್‌ ಸ್ಪೋರ್ಟ್ಸ್‌ ಎಂಬ ಐದು ಮಾದರಿಗಳನ್ನು ಪರಿಚಯಿಸಲಿದೆ.

ಮಲ್ಟಿಸ್ಟ್ರಾಡಾ 950, ದಿ ಮಾನ್‌ಸ್ಟರ್ 797, ಮಲ್ಟಿಸ್ಟ್ರಾಡಾ ಹಾಗೂ ಮಾನ್‌ಸ್ಟರ್‌ನ ಪ್ರವೇಶ ಹಂತದ ಬೈಕ್‌ಗಳಾಗಿವೆ. ದಿ ಮಾನ್‌ಸ್ಟರ್ 797, ದಿ ಸ್ಕ್ರಾಂಬ್ಲರ್ ಡೆಸರ್ಟ್ ಸ್ಲೆಡ್, ಸ್ಕ್ರಾಂಬ್ಲರ್ ಕೆಫೆ ರೇಸರ್, ಸ್ಕ್ರಾಂಬ್ಲರ್‌ನ ಸುಧಾರಿತ ಬೈಕ್ ಆಗಿವೆ. ಸ್ಕ್ರಾಂಬ್ಲರ್ ಡೆಸರ್ಟ್ ಸ್ಲೆಡ್ ಬೈಕ್, ಆಫ್‌ ರೋಡಿಂಗ್‌ಗೆ ವಿನ್ಯಾಸಗೊಂಡಿದ್ದರೆ,  ಕೆಫೆ ರೇಸರ್ ಅನ್ನು ನಗರದ ಓಡಾಟಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.

*


ಡಟ್ಸನ್ ರೆಡಿ ಗೋ ಹೊಸ ಅವತರಣಿಕೆ
ಡಟ್ಸನ್‌ನ ಪ್ರವೇಶ ಹಂತದ ಮಾದರಿ ಕಾರು, ರೆಡಿ ಗೋ 2016ರ ಜೂನ್‌ನಲ್ಲಿ ಬಿಡುಗಡೆಗೊಂಡಿದ್ದರೂ ನಿರೀಕ್ಷಿತ  ಮಾರಾಟ ಕಾಣಲಿಲ್ಲ. ಈ ಹ್ಯಾಚ್‌ಬ್ಯಾಕ್ ಸದ್ಯಕ್ಕೆ 54ಎಚ್‌ಪಿ 799 ಸಿಸಿ, ಮೂರು ಸಿಲಿಂಡರಿನ ಪೆಟ್ರೋಲ್ ಎಂಜಿನ್‌ನೊಂದಿಗೆ 5 ಸ್ಪೀಡ್ ಮ್ಯಾನ್ಯುಯಲ್ ಗಿಯರ್ ಬಾಕ್ಸ್‌ ಹೊಂದಿತ್ತು. ಇದೀಗ ಕಾರು ಮತ್ತಷ್ಟು ಶಕ್ತಿ ತುಂಬಿಕೊಂಡು ಬರಲು ಸಿದ್ಧವಾಗಿದೆ.

ಕೆಲವೇ ತಿಂಗಳುಗಳಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿರುವ ಈ ಕಾರಿನಲ್ಲಿ 1.0 ಲೀಟರ್ ಎಂಜಿನ್ ಇದ್ದು, 5 ಸ್ಪೀಡ್ ಮ್ಯಾನ್ಯುಯಲ್‌ನೊಂದಿಗೆ ‘ಎಎಂಟಿ’ ಆಟೊಮೆಟಿಕ್ ಗಿಯರ್‌ಬಾಕ್ಸ್ ಇರಲಿದೆ.

*


ಭಾರತಕ್ಕೆ ಕಿಯಾ ಕಂಪೆನಿ
ಕೊರಿಯಾದ ಕಾರು ತಯಾರಿಕಾ ಕಂಪೆನಿ ಕಿಯಾ ಮೋಟಾರ್ಸ್‌, ಭಾರತಕ್ಕೆ  ಬರುವುದಾಗಿ ಘೋಷಿಸಿದೆ. ಭಾರತೀಯ ಮಾರುಕಟ್ಟೆಗೆ ಪರಿಚಯಗೊಂಡ ನಂತರ ಶೇ 40ರಷ್ಟು ಕಿಯಾ ಕಾರುಗಳನ್ನು ‘ಲೋಕಲೈಸೇಷನ್’ ಮಾಡುವ ಯೋಜನೆಯನ್ನೂ ಹಾಕಿಕೊಂಡಿದೆ.

ಭಾರತದಲ್ಲಿ ಕಿಯಾ ಮಾದರಿಗಳ ಬಿಡುಗಡೆಯಲ್ಲಿ ಸ್ಪೋರ್ಟೇಜ್ ಎಸ್‌ಯುವಿ ಸದ್ಯಕ್ಕೆ ಮೊದಲಿದೆ. ಆ ನಂತರ ಪಿಕಾಂಟೊ, ರಿಯೊ ಹ್ಯಾಚ್‌ಬ್ಯಾಕ್‌ ಕಾರುಗಳು ಬಿಡುಗಡೆಗೊಳ್ಳಲಿವೆ. ಇತ್ತೀಚೆಗೆ  ಮಾರುಕಟ್ಟೆಗೆ ಬಂದಿದ್ದ ಕಿಯಾ ಸ್ಟಿಂಗರ್ ಸ್ಪೋರ್ಟ್ಸ್ ಸೆಡಾನ್ ಅನ್ನೂ ಇಲ್ಲಿಗೆ ಪರಿಚಯಿಸುವ ಯೋಜನೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT