ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳತೆ, ಶಿವಭಕ್ತಿಯಿಂದ ಸಮಸ್ಯೆಗೆ ಮುಕ್ತಿ

ನಗರದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ
Last Updated 11 ಮೇ 2017, 9:00 IST
ಅಕ್ಷರ ಗಾತ್ರ
ಮಡಿಕೇರಿ: ‘ಮಹನೀಯರ ಆದರ್ಶ ಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅ ಳವಡಿಸಿಕೊಂಡರೆ ಬದುಕಿನಲ್ಲಿ ಸಾರ್ಥ ಕತೆ ಕಾಣಬಹುದು’ ಎಂದು ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಹೇಳಿದರು.
 
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಕೋಟೆ ಹಳೇ ವಿಧಾನ ಸಭಾಂ ಗಣದಲ್ಲಿ ಬುಧವಾರ ಆಯೋ ಜಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂ ತ್ಯುತ್ಸವದಲ್ಲಿ ಅವರು ಮಾತನಾಡಿದರು. 
 
‘ಮಲ್ಲಮ್ಮ ಅವರ ಜೀವನ ಸರ್ವರಿಗೂ ಅನುಕರಣೀಯ; ಸಮಾಜದಲ್ಲಿನ ನಾನಾ ಸಮಸ್ಯೆಗಳನ್ನು ಸರಳತೆ, ಶಿವಭಕ್ತಿಯಿಂದಲೇ ಪರಿಹರಿಸಿದ್ದರು. ಇಂದಿನ ಎಲ್ಲ ಸಮಸ್ಯೆಗೂ ಈ ಎರಡು ಸೂತ್ರಗಳಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ’ ಎಂದು ಪ್ರತಿಪಾದಿಸಿದರು.
 
ಜಯಂತಿಗೆ ಚಾಲನೆ ನೀಡಿ ಮಾತ ನಾಡಿದ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ‘ಮಲ್ಲಮ್ಮ ಆಂಧ್ರಪ್ರದೇಶ ದಲ್ಲಿ ಜನಿಸಿ ಚನ್ನಮಲ್ಲಿಕಾರ್ಜುನ ಸ್ವಾಮಿಯ ಭಕ್ತೆಯಾಗಿದ್ದರು.
 
ದಾನ– ಧರ್ಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಭಗವಂತನನ್ನು ಕಂಡರು; ಸಮಾಜದಲ್ಲಿನ ಬಡತನ ಹೋಗಲಾಡಿ ಸಲು ಶ್ರಮಿಸಿದ್ದರು. ಆದ್ದರಿಂದ, ಉಳ್ಳ ವರು ಬಡವರಿಗೆ ದಾನ ಮಾಡಿದರೆ ಮತ್ತಷ್ಟು ಶ್ರೀಮಂತಿಕೆ ಬರಲಿದೆ’ ಎಂದು ಕರೆ ನೀಡಿದರು.
 
‘ಮಲ್ಲಮ್ಮ ಅವರು ಆಂಧ್ರಪ್ರದೇಶದ ಶ್ರೀಶೈಲದ ರಾಮಪುರದಲ್ಲಿ ರಾಮರೆಡ್ಡಿ – ಗೌರಮ್ಮ ದಂಪತಿಯ ಪುತ್ರಿ. ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನ ಮೂಡಿಪಾ ಗಿಟ್ಟು ಬಡವರ ಉದ್ಧಾರಕ್ಕೆ ಶ್ರಮಿಸಿದ್ದರು. ಸಮಾಜದಲ್ಲಿ ಅವರನ್ನು ಅನುಕರಣೆ ಮಾಡುವಂತಹ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು.
 
ಬಡವರು, ಭಿಕ್ಷುಕರಿಗೆ ದಾನ– ಧರ್ಮ ಮಾಡುವುದರಲ್ಲಿ ಮುಂದಿದ್ದ ಅವರು ಶಿವಭಕ್ತಿಯಿಂದ ಪ್ರಸಿದ್ಧಿಯಾಗಿದ್ದರು’ ಎಂದು ಕಾನ್‌ಬೈಲು ಪ್ರೌಢಶಾಲೆ ಶಿಕ್ಷಕಿ ಎನ್.ಕೆ. ಮಾಲಾದೇವಿ ಹೇಳಿದರು.
 
‘ಸಮಾಜದ ಪರಿವರ್ತನೆಗೆ ಮುನ್ನುಡಿ ಬರೆದವರಲ್ಲಿ ಮಲ್ಲಮ್ಮ ಅವರೂ ಒಬ್ಬರು’ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ಲೋಕೇಶ ಸಾಗರ್ ಹೇಳಿದರು. 
 
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಲ್.ಎನ್. ಕುಳ್ಳಯ್ಯ, ಮಂಜುನಾಥ್‌, ಶಿಕ್ಷಣ ಇಲಾಖೆ ಪರಿವೀಕ್ಷಕಿ ಸಾವಿತ್ರಿ, ಸತ್ಯನ್ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT