ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬದಲಿಸುವ ಮೊದಲು...

Last Updated 11 ಮೇ 2017, 19:30 IST
ಅಕ್ಷರ ಗಾತ್ರ

ಬಾಡಿಗೆ ಮನೆಯೆಂದರೆ ಅಲೆಮಾರಿಗಳಂತೆ ಒಂದು ಕಡೆಯಿಂದ ಇನ್ನೊಂದೆಡೆ ಹೋಗುವುದು ಅನಿವಾರ್ಯ. ಹೀಗೆಲ್ಲಾ ಪದೇಪದೆ ಮನೆ ಬದಲಿಸುವಾಗ ಸಾಮಾನು ಸಾಗಿಸುವುದೇ ದೊಡ್ಡ ತಲೆನೋವು. ಸೂಕ್ತ ಸಿದ್ಧತೆಯ ಮೂಲಕ ಆರಾಮಾಗಿ ಮನೆ ಬದಲಿಸುವ ಸರಳ ಮಾರ್ಗಗಳ ಬಗ್ಗೆ ಇಲ್ಲಿದೆ ಮಾಹಿತಿ.

*
ಸರಿಯಾಗಿ ಪ್ಯಾಕ್‌ ಮಾಡಿ
ವಿವಿಧ ಗಾತ್ರದ ಬಾಕ್ಸ್‌ಗಳನ್ನು ಮೊದಲೇ ತಂದಿಟ್ಟುಕೊಳ್ಳಿ. ಮನೆಯ ಸಾಮಾನುಗಳಿಗೆ ಅನುಗುಣವಾಗಿ ಬಾಕ್ಸ್‌ ಖರೀದಿಸಿ. ಹೆಚ್ಚಿದ್ದರೂ ಪರ್‍ವಾಗಿಲ್ಲ. ಕಡಿಮೆ ಬಾಕ್ಸ್‌ ಇದ್ದು, ಕಡೆ ಹಂತದಲ್ಲಿ ಪರದಾಡುವಂತೆ ಆಗಬಾರದು. ಮನೆ ಖಾಲಿ ಮಾಡುವ ಹದಿನೈದು ದಿನಗಳ ಮುಂಚೆಯೇ ಬಳಸದ ಸಾಮಗ್ರಿಗಳನ್ನು ಬಾಕ್ಸ್‌ನಲ್ಲಿಟ್ಟು ಪ್ಯಾಕ್‌ ಮಾಡಿ.  ಗಾಡಿಯಲ್ಲಿ ಎಷ್ಟು ಬಾಕ್ಸ್‌ ಇಡಲಾಗಿದೆ ಎಂಬುದನ್ನು ಲೆಕ್ಕ ಮಾಡಿ. ಸಾಗಿಸಿದ ನಂತರವೂ ಅಷ್ಟೇ ಬಾಕ್ಸ್‌ಗಳಿವೆಯೇ ಎಂಬುದನ್ನು   ಪರಿಶೀಲಿಸಿ.

*


ಗುರುತು ಬರೆದು ಅಂಟಿಸಿ
ಅಡುಗೆ ಸಾಮಗ್ರಿ, ಪುಸ್ತಕ, ಪೂಜಾ ಸಾಮಗ್ರಿ ಹೀಗೆ ಯಾವ್ಯಾವ ಬಾಕ್ಸ್‌ಗಳಲ್ಲಿ ಇರುವ ವಸ್ತುಗಳನ್ನು ಚೀಟಿಯ ಮೇಲೆ ಬರೆದು ಬಾಕ್ಸ್‌ಗೆ ಅಂಟಿಸಿ. ಮತ್ತೆ ಮನೆಯಲ್ಲಿ ಸಾಮಾನು ಜೋಡಿಸಿಕೊಳ್ಳುವಾಗ ಎಲ್ಲ ಬಾಕ್ಸ್‌ಗಳನ್ನೂ ತಡಕಾಡುವುದು ತಪ್ಪುತ್ತದೆ.

*
ಮತ್ತೊಮ್ಮೆ ಪರಿಶೀಲಿಸಿ
ಪೀಠೋಪಕರಣಗಳನ್ನೆಲ್ಲ ತೆಗೆದುಕೊಂಡು ಹೋದ ನಂತರ ಮತ್ತೊಮ್ಮೆ ಮನೆಯನ್ನು ಪರಿಶೀಲಿಸಿ, ಅವುಗಳ ಕೆಳಗೆ ಬಿದ್ದ ವಸ್ತುಗಳು ಅಲ್ಲಿಯೇ ಉಳಿದುಬಿಡುವ ಸಂಭವ ಇರುತ್ತದೆ.

*
ಮಕ್ಕಳ ಮನ ಅರಿಯಿರಿ
ಮನೆ ಬಿಟ್ಟು ಏಕೆ ಹೋಗುತ್ತಿ ರುವಿರಿ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿ. ಅಕ್ಕಪಕ್ಕದ ಮನೆಯ ಸ್ನೇಹಿತರನ್ನೆಲ್ಲ ಬಿಟ್ಟು ಹೋಗುವುದು ಅವರಿಗೆ ನೋವು ಉಂಟು ಮಾಡುವ ಸಂಭವವಿರುತ್ತದೆ. ಅವರನ್ನೂ ಹೊಸ ಮನೆಗೆ

*
ಸಾಗಣೆದಾರರಿಗೆ ನೆನಪಿಸಿ
ಸಾಮಾನುಗಳ ಸಾಗಣೆ ಮಾಡಲು ಪ್ಯಾಕರ್‍ ಅಂಡ್‌ ಮೂವರ್‍ಗೆ ಹೇಳುವುದಾದರೆ ಕೆಲ ದಿನಗಳ ಮುಂಚೆಯೇ ಫೋನ್‌ ಮಾಡಿ ಬುಕ್‌ ಮಾಡಿ. ಮನೆ ಖಾಲಿ ಮಾಡುವ ಬೆಳಿಗ್ಗೆಯೇ ಕರೆ ಮಾಡಿ ಅವರಿಗೊಮ್ಮೆ ನೆನಪಿಸಿ.

*
ಬೆಲೆಬಾಳುವ ವಸ್ತು ಜೊತೆಗಿರಲಿ
ಬೆಲೆಬಾಳುವ ವಸ್ತು ಮತ್ತು ಒಡೆಯುವಂತಹ ವಸ್ತುಗಳನ್ನು ಟ್ರಕ್‌ನಲ್ಲಿ ಹಾಕದೆ ನಿಮ್ಮ ಜೊತೆಗೆ ತೆಗೆದುಕೊಂಡು ಹೋಗಿ.

*


ಗ್ಯಾಸ್ ಅಥವಾ ಸ್ಟೌವ್‌ಗಳ ಬಗ್ಗೆ ನಿಗಾ ಇರಲಿ
ಗ್ಯಾಸ್ ಅಥವಾ ಸ್ಟೌಗಳನ್ನು ಸರಿಯಾಗಿ ಬಂದ್‌ ಮಾಡಿ. ಗಾಡಿಗೆ ಹಾಕುವ ಮೊದಲು ಇನ್ನೊಮ್ಮೆ ನೋಡಿಕೊಳ್ಳಿ. ಇಲ್ಲದೇ ಹೋದಲ್ಲಿ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು.

*


ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ
ಮನೆಯಿಂದ ಹೊರಡುವಾಗ ಮೇನ್‌ಸ್ವಿಚ್‌ ಆಫ್‌ ಮಾಡಿ. ಇದರಿಂದ ಅನವಶ್ಯಕವಾಗಿ ವಿದ್ಯುತ್‌ ಪೋಲಾಗುವುದನ್ನು ತಪ್ಪಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT