ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೊಲೊ ಫರ್ಟಿಲಿಟಿ ಸೆಂಟರ್ ಆರಂಭ

Last Updated 11 ಮೇ 2017, 20:12 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬ್ರೂಕ್‌ಫೀಲ್ಡ್‌ನಲ್ಲಿರುವ ಅಪೊಲೊ ಕ್ರೆಡಲ್‌ ಆಸ್ಪತ್ರೆಯ ಆವರಣದಲ್ಲಿ ಅಪೊಲೊ ಫರ್ಟಿಲಿಟಿ ಸೆಂಟರ್‌ ಆರಂಭಗೊಂಡಿದೆ.

ಕೇಂದ್ರವನ್ನು ಉದ್ಘಾಟಿಸಿದ ಅಪೊಲೊ ಹೆಲ್ತ್‌ ಅಂಡ್‌ ಲೈಫ್‌ಸ್ಟೈಲ್‌ನ ಸಿಇಒ ನೀರಜ್‌ ಗರ್ಗ್ ಮಾತನಾಡಿ, ‘ಇದು ಕಂಪೆನಿಯ 5ನೇ ಕೇಂದ್ರ. ಅಂತರರಾಷ್ಟ್ರೀಯ ಗುಣಮಟ್ಟದ ಸಂತಾನೋತ್ಪತ್ತಿಯ ಚಿಕಿತ್ಸೆ ನೀಡುವ ಗುರಿ ಇಟ್ಟುಕೊಂಡಿದೆ. ಕೈಗೆಟುಕುವ ದರಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ’ ಎಂದರು.

‘ತಡವಾಗಿ ವಿವಾಹವಾಗುವುದು, ದಂಪತಿ ಉದ್ಯೋಗಸ್ಥರಾಗಿರುವುದು, ಒತ್ತಡ, ಧೂಮಪಾನ ಮತ್ತು ಮದ್ಯಪಾನದ ಕಾರಣಗಳಿಂದ ಸಂತಾನೋತ್ಪತ್ತಿಯ ಸಮಸ್ಯೆಗಳು ಎದುರಾಗುತ್ತವೆ. ಇದಕ್ಕೆ ಆದಷ್ಟು ಬೇಗ ಚಿಕಿತ್ಸೆ ಪಡೆಯಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT