ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೌಮಿ ಮೊಬೈಲ್‌ ಮಳಿಗೆ ಆರಂಭ

Last Updated 11 ಮೇ 2017, 20:21 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿಯವರೆಗೆ ಆನ್‌ಲೈನ್‌ ಮತ್ತು ಇ–ಕಾಮರ್ಸ್‌ನಲ್ಲಿ ಮಾತ್ರ ವಹಿವಾಟು ನಡೆಸುತ್ತಿದ್ದ ಚೀನಾದ ಪ್ರಮುಖ  ತಂತ್ರಜ್ಞಾನ ಕಂಪೆನಿ ಷೌಮೀ (ಕ್ಸಿಯೋಮಿ) ಗುರುವಾರ ಬೆಂಗಳೂರಿನಲ್ಲಿ ತನ್ನ ಮೊದಲ ರಿಟೇಲ್‌ ಮಾರಾಟ ಮಳಿಗೆ (ಮೀ ಹೋಂ) ತೆರೆದಿದೆ.

‘ಷೌಮೀ ಮೊಬೈಲ್‌ ಹಾಗೂ ಇನ್ನಿತರ ಎಲ್ಲ ಉತ್ಪನ್ನಗಳನ್ನು ಗ್ರಾಹಕರು ನೇರವಾಗಿ ಈ ಮಳಿಗೆಯಿಂದ ಖರೀದಿಸಬಹುದು’ ಎಂದು ಮಳಿಗೆ ಉದ್ಘಾಟಿಸಿದ ಸಂಸ್ಥೆಯ ದೇಶೀಯ ಮುಖ್ಯಸ್ಥ  ಮನು ಜೈನ್‌  ತಿಳಿಸಿದರು.

‘ಷೌಮೀ ಮುಂದಿನ ಎರಡು ವರ್ಷಗಳಲ್ಲಿ ದೆಹಲಿ, ಮುಂಬೈ, ಹೈದರಾಬಾದ್, ಮತ್ತು ಚೆನ್ನೈಗಳಲ್ಲಿ 100  ರಿಟೇಲ್‌  ಮಳಿಗೆ ತೆರೆಯಲಿದೆ. ಚೀನಾದಲ್ಲಿ 70ಕ್ಕೂ ಹೆಚ್ಚು  ‘ಮೀ ಹೋಂ’ ಮಳಿಗೆಗಳನ್ನು ತೆರೆದಿದ್ದು  ಇವು ಭಾರಿ ಜನಪ್ರಿಯವಾಗಿವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT