ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಸರೋವರ ಶಾಲೆಗೆ 1.60 ಕೋಟಿ ದಂಡ

ಆರ್‌ಟಿಇ ಕಾಯ್ದೆ ಉಲ್ಲಂಘಿಸಿದ ಶಾಲೆಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ
Last Updated 12 ಮೇ 2017, 9:59 IST
ಅಕ್ಷರ ಗಾತ್ರ
ಮೈಸೂರು: ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿ ದಾಖಲಾತಿಗೆ ಅವಕಾಶ ನೀಡದ ಜ್ಞಾನಸರೋವರ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ₹ 1.60 ಕೋಟಿ ದಂಡ ವಿಧಿಸಿ, ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಐ) ಎಚ್‌.ಆರ್‌.ಬಸಪ್ಪ ಹೇಳಿದರು.
 
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನ ನೇತೃತ್ವದಲ್ಲಿ ಗುರುವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಆರ್‌ಟಿಇ ಕಾಯ್ದೆ ಉಲ್ಲಂಘಿಸುವ ಶಾಲೆಗಳ ವಿರುದ್ಧ ಪ್ರತಿದಿನ ₹ 10 ಸಾವಿರ ದಂಡ ವಿಧಿಸುವ ಅಧಿಕಾರ ಇದೆ.
 
ಜ್ಞಾನಸರೋವರ ಶಾಲೆ 2012–13 ರಿಂದ ಈವರೆಗೆ ಈ ಕಾಯ್ದೆಯಡಿ ಯಾವುದೇ ವಿದ್ಯಾರ್ಥಿಗೂ ಪ್ರವೇಶಾತಿ ನೀಡಿಲ್ಲ. ಆದ್ದರಿಂದ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
 
ಆರ್‌ಟಿಇ ಕಾಯ್ದೆ ಉಲ್ಲಂಘಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕು ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ದರು.
 
ಹಲವು ಶಾಲೆಗಳು ಆರ್‌ಟಿಇ ಕಾಯ್ದೆ ಯಡಿ ದಾಖಲಾತಿಗೆ ಅವಕಾಶ ನೀಡುತ್ತಿಲ್ಲ. ಖಾಸಗಿ ಶಾಲೆಗಳು ಹೆಚ್ಚು ಶುಲ್ಕ ವಸೂಲಿ ಮಾಡುತ್ತಿವೆ ಎಂದು ಆರೋಪಿಸಿದರು. ನಗರದ ಏಳು ಪ್ರತಿಷ್ಠಿತ ಶಾಲೆಗಳು ದಾಖಲಾತಿ ನಿರಾಕರಿಸುತ್ತಿವೆ ಎಂಬುದನ್ನು ಅವರು ಡಿಡಿಪಿಐ ಗಮನಕ್ಕೆ ತಂದರು.
 
ಆರೋಪಗಳಿಗೆ ಪ್ರತಿಕ್ರಿಯಿಸಿದ ಡಿಡಿಪಿಐ, ‘ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಈ ವಿಷಯವನ್ನು ಗಂಭೀರ ವಾಗಿ ಪರಿಗಣಿಸಿದ್ದಾರೆ. ಕೆಲವು ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ. ಅರ್ಹ ವಿದ್ಯಾರ್ಥಿ ಗಳಿಗೆ ಶಾಲೆಗಳಲ್ಲಿ ಪ್ರವೇಶ ದೊರಕಿಸಿ ಕೊಡಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದರು.
 
ದಾಖಲಾತಿಗೆ ಅವಕಾಶ ನಿರಾಕರಿ ಸುವ ಶಾಲೆಗಳ ವಿರುದ್ಧ ಸೆಕ್ಷನ್‌ 18 (5)ರ ಅನ್ವಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪಿ.ಶಿವಶಂಕರ್‌ ಅವರು ಡಿಡಿಪಿಐಗೆ ಸೂಚಿಸಿದರು. 
 
ಮೇ 10ರ ವರೆಗೆ ಒಟ್ಟು 3828 ಮಕ್ಕಳು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶಾತಿ ಕೋರಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 3021 ಮಕ್ಕಳು ಈಗಾಗಲೇ ವಿವಿಧ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ. ಅಂತಿಮ ಗಡುವಿನ ಒಳಗಾಗಿ ಇನ್ನುಳಿದ ವಿದ್ಯಾರ್ಥಿಗಳ ದಾಖಲಾತಿಗೆ ಕ್ರಮ ಕೈಗೊಳ್ಳಲಾಗು ವುದು ಎಂದು ಭರವಸೆ ನೀಡಿದರು. 
 
ಅತಿಥಿ ಶಿಕ್ಷಕರ ನೇಮಕದಲ್ಲಿ ವಿಳಂಬ ವಾಗುತ್ತಿದೆ ಎಂದು ಆರೋಪಿಸಿದ ಬಸವಣ್ಣ, ಜೂನ್‌ ಕೊನೆಯೊಳಗೆ ಅತಿಥಿ ಶಿಕ್ಷಕರನ್ನು ನೇಮಿಸುವಂತೆಯೂ ನಿರ್ದೇ ಶನ ನೀಡಿದರು. ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 326 ಮತ್ತು ಪ್ರೌಢಶಾಲೆಗ ಳಲ್ಲಿ 221 ಅತಿಥಿ ಶಿಕ್ಷಕರ ಹುದ್ದೆ ಖಾಲಿ ಯಿವೆ ಎಂದು ಬಸಪ್ಪ ಸಭೆಗೆ ಮಾಹಿತಿ ನೀಡಿದರು. 
 
ಸಮವಸ್ತ್ರ ವಿತರಣೆ ವಿಳಂಬ: ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆಯಲ್ಲಿ ಲೋಪ ಉಂಟಾಗುತ್ತಿದೆ ಎಂದು ನಯೀಮಾ ಸುಲ್ತಾನ ಆರೋಪಿಸಿದರು. ಕಳೆದ ಎರಡು ವರ್ಷಗಳಿಂದ ನಮ್ಮ ಮಕ್ಕಳಿಗೆ ಸಮವಸ್ತ್ರ ದೊರೆತಿಲ್ಲ ಎಂದು ಹಲವು ಪೋಷಕರು ದೂರಿದ್ದಾರೆ ಎಂದರು.
 
ಸಮವಸ್ತ್ರದಲ್ಲಿ ಯಾವುದೇ ಕೊರತೆ ಯಿಲ್ಲ. ಶಾಲೆಗಳ ಆರಂಭಕ್ಕೆ ಮುನ್ನ ಎಲ್ಲ ಮಕ್ಕಳಿಗೆ ಸಮವಸ್ತ್ರ ವಿತರಿಸಲು ಕ್ರಮ ಕೈ ಗೊಳುತ್ತೇವೆ ಎಂದು ಬಸಪ್ಪ ಹೇಳಿದರು. ಜಿ.ಪಂ.ಉಪಾಧ್ಯಕ್ಷ ಕೈಯಂಬಳ್ಳಿ ನಟರಾಜ್‌, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ ಮೂರ್ತಿ, ಯೋಜನಾಧಿ ಕಾರಿ ಪ್ರಭುಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT