ಕೆ.ಆರ್.ನಗರ

‘ಮೀಸಲಾತಿ ಬಳಸಿಕೊಂಡು ಮುಂದುವರಿಯಿರಿ’

ಅಂಬೇಡ್ಕರ್ ಎಂದರೆ ಕೇವಲ ದಲಿತರಿಗೆ ಎಂಬಂತೆ ಬಿಂಬಿಸಲಾಗುತ್ತಿದೆ. ಅವರು ಕೇವಲ ದಲಿತರಿಗೆ ಮೀಸಲಾತಿ ನೀಡಿಲಿಲ್ಲ, ತುಳಿತಕ್ಕೆ ಒಳಗಾದ ಎಲ್ಲ ಸಮಾಜದವರಿಗೂ ಮೀಸಲಾತಿ ಒದಗಿಸಿದ್ದಾರೆ.

ಕೆ.ಆರ್.ನಗರ: ದಲಿತರು ಕೇವಲ ಸರ್ಕಾರಿ ಸವಲತ್ತುಗಳಿಗಾಗಿ ಕಾಯದೇ ಸ್ವಯಂ ದುಡಿಮೆಯಿಂದ ಮುಂದೆ ಬರ ಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಯುತಾನಂದ ಸಲಹೆ ನೀಡಿದರು.
 
ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಅಂಬೇಡ್ಕರ್ ಅವರ 126ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ಅಂಬೇಡ್ಕರ್ ಎಂದರೆ ಕೇವಲ ದಲಿತರಿಗೆ ಎಂಬಂತೆ ಬಿಂಬಿಸಲಾಗುತ್ತಿದೆ. ಅವರು ಕೇವಲ ದಲಿತರಿಗೆ ಮೀಸಲಾತಿ ನೀಡಿಲಿಲ್ಲ, ತುಳಿತಕ್ಕೆ ಒಳಗಾದ ಎಲ್ಲ ಸಮಾಜದವರಿಗೂ ಮೀಸಲಾತಿ ಒದಗಿಸಿದ್ದಾರೆ. ತುಳಿತಕ್ಕೆ ಒಳಗಾದ ಇತರೆ ಜನಾಂಗದವರು ಬುದ್ಧಿವಂತಿಕೆಯಿಂದ ಮೀಸಲಾತಿ ಬಳಸಿಕೊಂಡು ಆರ್ಥಿಕ ವಾಗಿ ಸದೃಢರಾಗುತ್ತಿದ್ದಾರೆ. ಅವರಂತೆ ನಾವು ಕೂಡ ಮೀಸಲಾತಿ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
 
ಬಿಎ, ಎಂಎ ಮುಗಿಸಿದ ಶೇ 80ರಷ್ಟು ಯುವಜನರು ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ಊರುಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಸ್ವಯಂ ಉದ್ಯೋಗದ ಕಡೆ ಗಮನ ಹರಿಸಬೇಕು. ಯುವಕರು ಕೇವಲ ಸರ್ಕಾರಿ ನೌಕರಿಗಾಗಿ ಓದದೇ ಜ್ಞಾನಾರ್ಜನೆಗಾಗಿ ಓದಬೇಕು. ಮೀಸ ಲಾತಿ ಬಳಸಿಕೊಂಡು ಬದುಕು ರೂಪಿಸಿ ಕೊಳ್ಳದೇ ಹೋದಲ್ಲಿ ಅಂಬೇಡ್ಕರ್ ಅವರಿಗೆ ಅಗೌರವ ತೋರಿಸಿದಂತಾ ಗುತ್ತದೆ ಎಂದರು.
 
ವಿಭಾಗೀಯ ನಿಯಂತ್ರಣಾಧಿಕಾರಿ ಗಳಾದ ಎಂ. ಮಹೇಶ್, ಕಾರ್ಮಿಕ ಕಲ್ಯಾಣಾಧಿಕಾರಿ ಕೆ.ಕೆ.ಸೋಮಶೇಖರ್, ಮುಖ್ಯ ಭದ್ರತಾ ಅಧಿಕಾರಿ ಎನ್.ಎಸ್.ಶಿವರಾಜೇಗೌಡ, ಸಹಾಯಕ ಲೆಕ್ಕಾಧಿಕಾರಿ ಎಲ್.ಗಿರೀಶ್, ಸಮಿತಿಯ ಗೌರವಾಧ್ಯಕ್ಷ ಜೆ.ಗಂಗಾಧರ್, ನಿವೃತ್ತ ಉಗ್ರಾಣ ಪಾಲಕ ಎಂ.ಕೆ.ರೇವಣ್ಣ, ವಿಭಾಗೀಯ ಭದ್ರತಾ ನಿರೀಕ್ಷಕರಾದ ಎನ್.ರವೀಂದ್ರ, ಎಲ್.ರಮೇಶ್ ಬಾಬು, ಪರಿಶಿಷ್ಟ ಜಾತಿ, ಪಂಗಡಗಳ ಸಂಘದ ಅಧ್ಯಕ್ಷೆ ಚಂದ್ರಕಲಾ, ಎಂ.ಮೆಹಬೂಬ್ ಆಲಿ, ಎಂ.ಸುರೇಶ್ ಇತರರು ಇದ್ದರು.
 
Comments
ಈ ವಿಭಾಗದಿಂದ ಇನ್ನಷ್ಟು
60 ಮನೆ ಜಲಾವೃತ; 10 ಮನೆ ಕುಸಿತ

ನಂಜನಗೂಡು
60 ಮನೆ ಜಲಾವೃತ; 10 ಮನೆ ಕುಸಿತ

28 May, 2017

ಮೈಸೂರು
ಮದರಸಾ ರೆಹಮಾನಿಯಾ ಘಟಿಕೋತ್ಸವ

ಬೇಸಿಗೆ ಶಿಬಿರದ 150 ವಿದ್ಯಾರ್ಥಿಗಳಿಗೆ ಹಜರತ್‌ ಮೌಲಾನಾ ಇರ್ಷಾದ್‌ ಆಲಂ ಅಶ್ರಫಿ ಸಾಹೇಬ್‌, ಖತೀಬ್ ಮಸೀದಿ ರೆಹಮಾನಿಯಾ ಮತ್ತು ಹಾಫೀಜ್ ಹಜರತ್‌ ಸಾಹೇಬ್‌ ತರಬೇತಿ...

28 May, 2017

ಹುಣಸೂರು
ನದಿ ತ್ಯಾಜ್ಯಕ್ಕೆ ಸಿಗುವುದೆ ಮುಕ್ತಿ?

‘ರೆಫ್ರಿಜರೇಟರ್‌ ಬಳಕೆಯಿಂದ ಓಝೋನ್‌ ಪದರಕ್ಕೆ ಹಾನಿ ಆಗಲಿದೆ. ಆದರೆ, ತುಕ್ಕು ಹಿಡಿದ ರೆಫ್ರಿಜರೇಟರ್‌ರನ್ನೇ ನದಿಗೆ ಎಸೆಯುತ್ತಿರುವುದರಿಂದ  ಬೀರುವ ಅಡ್ಡ ಪರಿಣಾಮ ಊಹಿಸಲೂ ಅಸಾಧ್ಯ

28 May, 2017

ಮೈಸೂರು
‘ಡಿ’ ಗ್ರೂಪ್‌ ಸಿಬ್ಬಂದಿ ನೇಮಕಾತಿಗೆ ವಿರೋಧ

‘ಈ ಹಿಂದೆಯೂ ಎರಡು ಬಾರಿ ಸರ್ಕಾರ ನೇರ ನೇಮಕಾತಿಗೆ ಮುಂದಾಗಿತ್ತು. ಜನಪ್ರತಿನಿಧಿಗಳ ತೀವ್ರ ವಿರೋಧದ ಬಳಿಕ ಈ ಪ್ರಕ್ರಿಯೆ ಕೈಬಿಟ್ಟಿತ್ತು.

28 May, 2017

ಮೈಸೂರು
‘ಕಪ್ಪುಹಣ, ತೆರಿಗೆ ವಂಚನೆ ತಡೆಗೆ ನೋಟು ರದ್ದತಿ’

ಕಪ್ಪುಹಣವನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಜತೆಗೆ, ಭ್ರಷ್ಟಾಚಾರವನ್ನು ಪತ್ತೆ ಹಚ್ಚುವುದು ಕಷ್ಟ. ದೇಶದ ಆರ್ಥಿಕತೆಯನ್ನು ಕಾಡುತ್ತಿದ್ದ ಇವೆರಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರವು ನೋಟು...

28 May, 2017