ಎಚ್.ಡಿ.ಕೋಟೆಯಲ್ಲಿ ಸರ್ವಜ್ಞ ಜಯಂತಿ ಆಚರಣೆ

ಕುಂಬಾರರಿಗೆ ರಾಜಕೀಯ ಸ್ಥಾನಮಾನ ನೀಡಿ

‘ಸಮಾಜದ ಅಂಕು– ಡೊಂಕು ತಿದ್ದಲು ಅವರ ವಚನಗಳು ಅಗತ್ಯವಾ ಗಿವೆ. ಇಂಥ ಮಹನೀಯರು ಯಾವುದೇ ಜಾತಿಗೆ ಸೀಮಿತವಾಗದೆ ಸಮಾಜದ ಒಳಿತಿಗಾಗಿ ಶ್ರಮಿಸಿದರು.

ಎಚ್.ಡಿ.ಕೋಟೆ: ‘ವಚನಗಳ ಮೂಲಕ ಸಮಾಜ ಎಚ್ಚರಿಸುವ ಕೆಲಸ ಮಾಡಿದ ಮಹಾನ್ ದಾರ್ಶನಿಕ ಸರ್ವಜ್ಞ’ ಎಂದು ಶಾಸಕ ಎಸ್.ಚಿಕ್ಕಮಾದು ಬಣ್ಣಿಸಿದರು.
 
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಕುಂಬಾರ ಸಮಾಜ ತಾಲ್ಲೂಕು ಘಟಕದಿಂದ ಗುರುವಾರ ಏರ್ಪಡಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
‘ಸಮಾಜದ ಅಂಕು– ಡೊಂಕು ತಿದ್ದಲು ಅವರ ವಚನಗಳು ಅಗತ್ಯವಾ ಗಿವೆ. ಇಂಥ ಮಹನೀಯರು ಯಾವುದೇ ಜಾತಿಗೆ ಸೀಮಿತವಾಗದೆ ಸಮಾಜದ ಒಳಿತಿಗಾಗಿ ಶ್ರಮಿಸಿದರು. ಹೀಗಾಗಿ, ಎಲ್ಲರೂ ಅವರ ತತ್ವ– ಆದರ್ಶ ಅಳವಡಿ ಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
 
ಸಾಹಿತಿ ತಿಪ್ಪೂರು ಕೃಷ್ಣ, ‘16ನೇ ಶತಮಾನದಲ್ಲಿಯೇ ಸರ್ವಜ್ಞರು ವಚನ ಗಳಲ್ಲಿ ಶಿಕ್ಷಣದ ಮಹತ್ವ ಸಾರಿದವರು. ಸದಾ ಮೌನಿಯಾಗಿ, ಹಿತ ಮಿತಭಾಷಿ ಯಾಗಿ ಸಮಾಜದ ಒಳಿತಿಗೆ ತೊಡಗಿಸಿಕೊಂಡು ಬದಲಾವಣೆಗೆ ಕಾರಣರಾದರು. ಅವರ ವಚನಗಳು ಹೆಚ್ಚು ಪ್ರಸ್ತುತವಾಗಿದ್ದು, ಪಠ್ಯಗಳಲ್ಲಿ ಹೆಚ್ಚಾಗಿ ಅಳವಡಿಸಬೇಕು’ ಎಂದು ಮನವಿ ಮಾಡಿದರು.
 
‘ಕುಂಬಾರ ಸಮಾಜದವರಿಗೆ ರಾಜಕೀಯ ಸ್ಥಾನಮಾನ ನೀಡುವ ಅವಶ್ಯಕತೆ ಇದೆ. ಈ ಹಿಂದೆ ಚಿನ್ನಪ್ಪರೆಡ್ಡಿ ಆಯೋಗದ ವರದಿಯಲ್ಲಿ ಕುಂಬಾರ, ಉಪ್ಪಾರ, ಮಡಿವಾಳ ಸೇರಿದಂತೆ ಇತರೆ ಸಣ್ಣ ಸಮುದಾಯಗಳಿಗೆ ಮೀಸಲಾತಿ ನೀಡುವಂತೆ ಶಿಫಾರಸು ನೀಡಲಾಗಿತ್ತು. ಆದರೆ, ಇದು ಜಾರಿಯಾಗಲಿಲ್ಲ. ಈಗಲಾದರೂ ಸರ್ಕಾರ ಸಣ್ಣಸಣ್ಣ ಸಮಾಜಗಳ ಕಡೆಗೆ ಕಣ್ಣು ತೆರೆಯಲಿ’ ಎಂದು ಆಗ್ರಹಿಸಿದರು.
 
ಪಲ್ಲಕ್ಕಿ ವಾಹನದಲ್ಲಿ ಸರ್ವಜ್ಞರ ಭಾವಚಿತ್ರ ಇಟ್ಟು, ಮಂಗಳವಾದ್ಯ, ಪೂರ್ಣಕುಂಭ, ವೀರಭದ್ರ ಕುಣಿತ, ಸತ್ತಿಗೆ, ನಗಾರಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
 
ಪುರಸಭೆ ಅಧ್ಯಕ್ಷೆ ಮಂಜುಳಾ ಗೋವಿಂದಾಚಾರ್, ಸದಸ್ಯ ನರಸಿಂಹ ಮೂರ್ತಿ, ತಹಶೀಲ್ದಾರ್ ಎಂ. ನಂಜುಂಡಯ್ಯ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಂಭುಗೌಡ, ಸದಸ್ಯರಾದ ಟಿ.ಅಂಕನಾಯಕ, ಟಿ. ವೆಂಕಟೇಶ್, ಕುಂಬಾರ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಪ್ರಕಾಶ್, ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲ ಶೆಟ್ಟಿ, ಮುಖಂಡರಾದ ಮಲಾರ ಪುಟ್ಟಯ್ಯ, ಸುಂದರ್, ರಾಮಶೆಟ್ಟಿ, ಕನ್ನಡ ಪ್ರಮೋದ್, ನಾಗರಾಜು, ಮುದ್ದುಮಲ್ಲಯ್ಯ, ಶಿವಪ್ಪ, ಚೌಡಳ್ಳಿ ಜವರಯ್ಯ, ಟಿ.ಎಲ್.ಸ್ವಾಮಿ, ಸೋಮೇಶ್ ಇದ್ದರು.
Comments
ಈ ವಿಭಾಗದಿಂದ ಇನ್ನಷ್ಟು
ಈರುಳ್ಳಿ: ಸಗಟು, ಚಿಲ್ಲರೆ ದರದಲ್ಲಿ ಭಾರಿ ವ್ಯತ್ಯಾಸ

ಮೈಸೂರು
ಈರುಳ್ಳಿ: ಸಗಟು, ಚಿಲ್ಲರೆ ದರದಲ್ಲಿ ಭಾರಿ ವ್ಯತ್ಯಾಸ

18 Nov, 2017

ಮೈಸೂರು
ಟ್ರಿಣ್ ಟ್ರಿಣ್; ಮೊದಲ ಒಂದು ಗಂಟೆ ಮಾತ್ರ ಉಚಿತ

ದಿನದಲ್ಲಿ ಮೊದಲ ಬಾರಿ ಸೈಕಲ್ ತೆಗೆದು ಐದು ನಿಮಿಷ ಓಡಿಸಿದರೂ ಅದು ಒಂದು ಗಂಟೆಯೆಂದೇ ಪರಿಗಣಿಸಲಾಗುತ್ತದೆ. ಒಂದರಿಂದ 60 ನಿಮಿಷಗಳಷ್ಟು ಕಾಲ ದಿನದ ಮೊದಲ...

18 Nov, 2017
ಎಚ್.ಡಿ.ಕೋಟೆ; ಮತ್ತೆ ಕಾಣಿಸಿಕೊಂಡ ಹುಲಿ?

ಹಂಪಾಪುರ
ಎಚ್.ಡಿ.ಕೋಟೆ; ಮತ್ತೆ ಕಾಣಿಸಿಕೊಂಡ ಹುಲಿ?

17 Nov, 2017

ಮೈಸೂರು
ವಾಹನ ನೀಡಲು ಖಾಸಗಿ ಶಾಲೆಗಳು ಹಿಂದೇಟು

ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ಜಿಲ್ಲಾ ಘಟಕವು ಸುಮಾರು 150 ವಾಹನಗಳಿಗೆ ಬೇಡಿಕೆ ಇಟ್ಟಿದೆ. ಕೆಎಸ್‌ಆರ್‌ಟಿಸಿ ಬಸ್ಸೊಂದಕ್ಕೆ ದಿನಕ್ಕೆ ₹ 9,000 ಬಾಡಿಗೆ ನೀಡಬೇಕಿರುವುದರಿಂದ...

17 Nov, 2017
19ರಿಂದ ದ್ವಿಪಥ ರೈಲು ಸಂಚಾರ

ಮೈಸೂರು
19ರಿಂದ ದ್ವಿಪಥ ರೈಲು ಸಂಚಾರ

17 Nov, 2017