ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗುತ್ತಿಗೆ ನೌಕರರ ಅನಿರ್ದಿಷ್ಟಾವಧಿ ಧರಣಿ

ಪುನರ್ ನಿರ್ಮಾಣ ಮತ್ತು ಭೂಸ್ವಾಧೀನ ಇಲಾಖೆ ಆಯುಕ್ತರ ಕಚೇರಿ ಎದುರು ಪ್ರತಿಭಟನೆ; ಮುಧೋಳದಲ್ಲಿ ಶಾಸಕರಿಗೆ ಮನವಿ
Last Updated 12 ಮೇ 2017, 11:41 IST
ಅಕ್ಷರ ಗಾತ್ರ
ಬಾಗಲಕೋಟೆ:  ಕೃಷ್ಣಾ ಮೇಲ್ದಂಡೆ ಯೋಜನೆಯಡಿ ನಿರ್ಮಿಸಿದ್ದ ಪುನರ್ವಸತಿ ಕೇಂದ್ರಗಳನ್ನು ಆಯಾ ಗ್ರಾಮ ಪಂಚಾಯ್ತಿ ಆಯುಕ್ತರಿಗೆ ಹಸ್ತಾಂತರ ಮಾಡಿರುವುದನ್ನು ವಿರೋಧಿಸಿ ಗುರುವಾರ ಹೊರಗುತ್ತಿಗೆ ನೌಕರರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
 
 ಕರ್ನಾಟಕ ರಾಜ್ಯ ದಿನಗೂಲಿ ನೌಕರರ ಮಹಾಮಂಡಲದ ವತಿಯಿಂದ ಇಲ್ಲಿನ ಪುನರ್ವಸತಿ ಮತ್ತು ಪುನರ್ನಿರ್ಮಾಣ ಮತ್ತು ಭೂಸ್ವಾಧೀನ ಇಲಾಖೆ ಆಯುಕ್ತರ ಕಚೇರಿ ಎದುರು ಘೋಷಣೆ ಕೂಗಿದರು.
 
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ನಿರ್ಮಿಸಿದ್ದ ಪುನರ್ವಸತಿ ಕೇಂದ್ರವನ್ನು ಆಯಾ ಗ್ರಾಮ ಪಂಚಾಯ್ತಿ ಆಯುಕ್ತರಿಗೆ ಹಸ್ತಾಂತರ ಮಾಡಿರುವುದರಿಂದ ಕಳೆದ 15 ವರ್ಷಗಳಿಂದ ನೀರು ಪೂರೈಸುತ್ತಿದ್ದ ನೌಕರರನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾಗೊಳಿಸಲಾಗಿದೆ. ಕೂಡಲೇ ಆಯುಕ್ತರು ತಮ್ಮ ಆದೇಶವನ್ನು ಹಿಂಪಡೆಯಬೇಕು. ನೌಕರರ ಸೇವೆಯನ್ನು ಇಲಾಖೆ ನಿರಾತಂಕವಾಗಿ ಮುಂದುವರಿಸಿಕೊಂಡು ಹೋಗಲು ಅನುಮತಿಸಬೇಕು ಎಂದು ಒತ್ತಾಯ ಮಾಡಿದರು.
 
ಇದನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದೆವು. ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದರಿಂದ ನೋವಾಗಿದೆ. ಕೂಡಲೇ ಆದೇಶ ಹಿಂಪಡೆದು ಕೆಲಸಕ್ಕೆ ನಿಯೋಜಿಸಬೇಕು ಎಂದು ಶಿವಮ್ಮ ಬೀಳಗಿ ಅವರ ಹೇಳಿದರು.
 
ಪುನರ್ವಸತಿ ಆಯುಕ್ತರು ಕೂಡಲೇ ಸೂಕ್ತ ನಿರ್ಣಯ ಕೈಗೊಂಡು ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
 
ಪ್ರಮುಖರಾದ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರ ಸಾಳುಂಕೆ, ಮಹಾಂತಗೌಡ ಪಾಟೀಲ, ನಜೀರ್ ಅಹ್ಮದ್ ಚೌದರಿ, ಮಲ್ಲು ಬಿರಾದಾರ, ಯಮನಪ್ಪ ಬಪ್ಪಂಗಿ, ನವಾಜ್‌ಖಾನ್ ಪಠಾಣ, ಮುತ್ತು ನಿಜಪ್ಪನವರ, ಶಿವಮ್ಮ ಬೀಳಗಿ, ನವಲವ್ವ ಹುಂಡಿ, ರೇಖಾ ಚಿಮ್ಮನಕಟ್ಟಿ, ಈರಣ್ಣ ನಾಯಕ ಪ್ರತಿಭಟನೆಯಲ್ಲಿದ್ದರು.
 
ನೀರಾವರಿ ಕಾಮಗಾರಿ ತಡೆಗೆ ಆಗ್ರಹ
ಮುಧೋಳ:  ವೀರಭದ್ರೇಶ್ವರ ಏತ ನೀರಾವರಿ ಕಾಮಗಾರಿ ತಡೆಗೆ ಆಗ್ರಹಿಸಿ ಮುಧೋಳದಲ್ಲಿ ಘಟಪ್ರಭಾ ನದಿ ಪಾತ್ರದ ಜನರು ಶಾಸಕರಾದ ಗೋವಿಂದ ಕಾರಜೋಳ ಹಾಗೂ ಎಸ್.ಆರ್.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
 
‘ಹಿಂದಿನ ಪರಿಸ್ಥಿತಿಗಿಂತ ಸದ್ಯ ಸ್ಥಿತಿ ಗಂಭೀರವಾಗಿದೆ. ನಮಗೆ ನೀರು ಇಲ್ಲದಿರುವಾಗ ನೀರನ್ನು ಇನ್ನೊಂದು ಕಡೆ ಹರಿಸುವುದು ಬೇಡ’ ಎಂದು ಹಣಮಂತಗೌಡ ಬಿರಾದಾರಪಾಟೀಲ ಹೇಳಿದರು.
 
ಯಾವುದೇ ಕಾರಣಕ್ಕೂ ಈ ಕಾಮಗಾರಿಗೆ ಅವಕಾಶ ನೀಡುವುದಿಲ್ಲ. ಹೋರಾಟ ತೀವ್ರ ಸ್ವರೂಪ ಪಡೆಯುವ ಮುನ್ನ ತಾವು ಸರ್ಕಾರದ ಮನವೊಲಿಸಲು ವಿನಂತಿಸಿದರು.
 
ಮನವಿ ಸ್ವೀಕರಿಸಿದ ಶಾಸಕ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಮಾತನಾಡಿ, ‘ಮುಧೋಳ, ಜಮಖಂಡಿ, ಬೀಳಗಿ ಹಾಗೂ ಬಾಗಲಕೋಟೆಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಈ ಕುರಿತು ಸಚಿವರಿಗೆ ವಿವರಿಸುತ್ತೇನೆ’ ಎಂದು ಹೇಳಿದರು.
 
ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ, ಜಿಲ್ಲಾ ಪಂಚಾಯ್ತಿ ಸದಸ್ಯ ಭೀಮನಗೌಡ ಪಾಟೀಲ, ಧುರೀಣ ಗಡ್ಡೆಪ್ಪಣ್ಣ ಬಾರಕೇರ, ರುದ್ರಪ್ಪ ಅಡವಿ, ಯಮನಪ್ಪ ಬರಗಿ, ರಾಚಪ್ಪ, ವಿಠಲ ತುಂಬರಮಟ್ಟಿ, ಪ್ರಕಾಶ ಚಿತ್ತರಗಿ, ಹಣಮಂತ ಅಮಲಝರಿ, ಕೃಷ್ಣಾ ಕೊಪ್ಪದ, ರಾಜು ಪಾಟೀಲ, ಸುರೇಶಗೌಡ ಪಾಟೀಲ, ಮಂಜು ಪಾಟೀಲ, ಬಸು ಯಡಹಳ್ಳಿ, ಹೊಳೆಬಸು ದಂಡಿನ, ಆರ್.ಕೆ.ಪಾಟೀಲ, ಮಹಾಂತೇಶ ಕಮತಗಿ, ವೆಂಕಣ್ಣ ಪಾಟೀಲ, ರಮೇಶ ಪೂಜಾರ, ಶಂಭೂ ಹೊಂಗಲ, ಮಾರುತಿ ಕರೆಯನ್ನವರ, ಮಲ್ಲು ಗಡ್ಡಿ, ಚಿದಾನಂದ ಪಂಚಗಟ್ಟಿಮಠ ಮುಂತಾದವರು ಹಾಗೂ ಹಿರೆಆಲಗುಂಡಿ, ಭಂಟನೂರ, ಜುನ್ನೂರ, ಚಿಕ್ಕೂರ, ಚಿತ್ರಭಾನುಕೋಟೆ, ಹೆಬ್ಬಾಳ, ಮುದ್ದಾಪುರ ಜಂಬಗಿ ರೈತರು ಮನವಿ ಸಲ್ಲಿಸುವ ವೇಳೆಯಲ್ಲಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT