ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಾಂತರ, ಬಾಲಕಿಯರ ಉತ್ತಮ ಸಾಧನೆ

Last Updated 13 ಮೇ 2017, 8:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ಹೊಸಬರ ಪೈಕಿ ಶೇ 59.63 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಒಟ್ಟಾರೆ ಶೇ 52.76 ರಷ್ಟು ಫಲಿತಾಂಶ ದೊರೆತಿದೆ. ಈ ಮೂಲಕ ಜಿಲ್ಲೆ ರಾಜ್ಯಮಟ್ಟದಲ್ಲಿ 13ನೇ ಸ್ಥಾನ ಪಡೆದಿದೆ.

ಕಳೆದ ವರ್ಷ 14ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ಒಂದು ಹೆಜ್ಜೆ ಮುಂದೆ ಇಟ್ಟಿದೆಯಾದರೂ ಫಲಿತಾಂಶದಲ್ಲಿ ಮಾತ್ರ ಶೇ4.11 ರಷ್ಟು ಹಿಂದುಳಿದಿದೆ. ಒಟ್ಟಾರೆ ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಪಾಸಾದವರ ಪ್ರಮಾಣ ಶೇ57.98 ರಷ್ಟಿದೆ. ಶೇ 47.76 ಬಾಲಕರು ಮಾತ್ರ ಉತೀರ್ಣರಾಗಿದ್ದಾರೆ.

ಒಟ್ಟಾರೆ ಫಲಿತಾಂಶದಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು ಶೇ60.51 ರಷ್ಟು ‘ಹಳ್ಳಿಯ ಮಕ್ಕಳು’ ಗೆಲುವಿನ ನಗೆ ಬೀರಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳ ಪೈಕಿ ಶೇ 50.22 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  ಈ ಬಾರಿ ಖಾಸಗಿಯಾಗಿ ಪರೀಕ್ಷೆ ಬರೆದ 2.405 ವಿದ್ಯಾರ್ಥಿಗಳ ಪೈಕಿ 561 ಮತ್ತು ಮರು ಪರೀಕ್ಷೆ ಬರೆದ 397 ವಿದ್ಯಾರ್ಥಿಗಳಲ್ಲಿ ಕೇವಲ 48 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಶಿಡ್ಲಘಟ್ಟ ಉತ್ತಮ ಸಾಧನೆ
ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ ಶಿಡ್ಲಘಟ್ಟ ಉತ್ತಮ ಸಾಧನೆ (ಶೇ 65) ತೋರಿ ಮೊದಲ ಸ್ಥಾನದಲ್ಲಿದೆ. ಚಿಕ್ಕಬಳ್ಳಾಪುರ (ಶೇ 60) ಎರಡನೇ ಸ್ಥಾನದಲ್ಲಿದೆ. ಫಲಿತಾಂಶದಲ್ಲಿ ಶೇ37 ರಷ್ಟು ಪ್ರಗತಿ ಕಂಡಿರುವ ಗುಡಿಬಂಡೆ ಕೊನೆಯ ಸ್ಥಾನದಲ್ಲಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ (ಶೇ 63.53) ತೋರಿದ್ದು, ಕನ್ನಡ ಮಾಧ್ಯಮದವರಿಗಿಂತ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರು ಹೆಚ್ಚು (ಶೇ 62.94) ಉತ್ತೀರ್ಣರಾಗಿದ್ದಾರೆ.

ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 101 ಕಾಲೇಜುಗಳಿವೆ. ಈ ಪೈಕಿ ಗೌರಿಬಿದನೂರು ತಾಲ್ಲೂಕಿನ ಅಲೀಪುರದ ಜೈನಾಬಿಯಾ ಪಿಯು ಕಾಲೇಜು ಮತ್ತು ಬಾಗೇಪಲ್ಲಿ ವಿವೇಕಾನಂದ ಪಿಯು ಕಾಲೇಜು ಶೇ100 ರಷ್ಟು ಫಲಿತಾಂಶ ಪಡೆದಿವೆ. ಇನ್ನು ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಜ್ಯೋತಿ ಪಿಯು ಕಾಲೇಜಿನಲ್ಲಿದ್ದ 9 ವಿದ್ಯಾರ್ಥಿಗಳ ಪೈಕಿ ಎಲ್ಲರೂ ಫೇಲಾಗಿದ್ದು, ಕಾಲೇಜಿನ ಫಲಿತಾಂಶ ಶೂನ್ಯವಾಗಿದೆ.

ಯಾರಿಗೆ ಹೆಚ್ಚಿನ ಅಂಕ?
ವಿಜ್ಞಾನ ವಿಭಾಗದಲ್ಲಿ ಚಿಕ್ಕಬಳ್ಳಾಪುರದ ಬಿಜಿಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿನಿ ಕೆ.ನೇತ್ರಾ ಮತ್ತು ಗೌರಿಬಿದನೂರಿನ ಬಿಜಿಎಸ್ ಕಾಲೇಜಿನ ವಿದ್ಯಾರ್ಥಿನಿ ಕೆ.ಕಾವಶ್ರೀ ತಲಾ 589 ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಗೌರಿಬಿದನೂರಿನ ಲೀಡರ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿನಿ (578), ಕಲಾ ವಿಭಾಗದಲ್ಲಿ ಗೌರಿಬಿದನೂರು ತಾಲ್ಲೂಕಿನ ಜೈನಾಬಿಯಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಸೈಯದಾ ಮೋಆಶಿರ್ ಜೇಹ್ರಾ (569) ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು

ಕಲಾ ವಿಭಾಗ
ಗೌರಿಬಿದನೂರು ತಾಲ್ಲೂಕು ಅಲೀಪುರದ ಜೈನಾಬಿಯಾ ಪಿಯು ಕಾಲೇಜಿನ ಸೈಯದಾ ಮೋಆಶಿರ್ ಜೇಹ್ರಾ 569  (ಶೇ 94.83) ಪ್ರಥಮ ಸ್ಥಾನ ಪಡೆದರೆ, ಶಿಡ್ಲಘಟ್ಟ ತಾಲ್ಲೂಕಿನ ಡಿಪಿನಾಯಕನಹಳ್ಳಿಯ ಕಪಿಲಮ್ಮ ಪಿಯು ಕಾಲೇಜಿನ ಜೆ.ಎ.ಆರ್ಶಿಯಾ 568 (ಶೇ 94.66) ದ್ವಿತೀಯ ಮತ್ತು ಚಿಕ್ಕಬಳ್ಳಾಪುರದ ಸತ್ಯಸಾಯಿ ಪ್ರಶಾಂತಿ ನಿಕೇತನಂ ಬಾಲಕಿಯರ ಪಿಯು ಕಾಲೇಜಿನ ಜವಳಿ ಬಟ್ಟು 563 (ಶೇ 93.83) ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗ
ಗೌರಿಬಿದನೂರಿನ ಯಶಸ್ವಿನಿ ಲೀಡರ್ ಪಿಯು ಕಾಲೇಜಿನ 576 (ಶೇ 96) ಪ್ರಥಮ ಸ್ಥಾನ ಪಡೆದಿದ್ದಾರೆ.  ಶಿಡ್ಲಘಟ್ಟದ ಡಾಲ್ಫಿನ್ ಪಿಯು ಕಾಲೇಜಿನ ನೂರ್‌ವುಲ್‌ ಮಿಸ್ಬಾ 576 (ಶೇ 96) ದ್ವಿತೀಯ, ಗೌರಿಬಿದನೂರಿನ ಬಿಜಿಎಸ್‌ ಪಿಯು ಕಾಲೇಜಿನ ಫಾಯ್ಜಾಬಾನು 575 (ಶೇ 95.83), ಚಿಕ್ಕಬಳ್ಳಾಪುರದ ಸುಮಿತ್ರಾ ವಿಷ್ಣುಪ್ರಿಯ ಪಿಯು ಕಾಲೇಜಿನ 575 (ಶೇ 95.83) ಮೂರನೇ ಸ್ಥಾನ ಗಳಿಸಿದ್ದಾರೆ.

ವಿಜ್ಞಾನ ವಿಭಾಗ
ಚಿಕ್ಕಬಳ್ಳಾಪುರ ತಾಲ್ಲೂಕಿನ ಅಗಲ ಗುರ್ಕಿಯ ಬಿಜಿಎಸ್‌ ಪಿಯು ಕಾಲೇಜಿನ   ಕೆ.ನೇತ್ರಾ 589 (ಶೇ 98) ಪ್ರಥಮ ಸ್ಥಾನ,  ಗೌರಿ ಬಿದನೂರಿನ ಬಿಜಿಎಸ್ ಪಿಯು ಕಾಲೇಜಿನ  ಕೆ. ಕಾವ್ಯಶ್ರೀ 589  (ಶೇ 98), ಮುದ್ದೇನಹಳ್ಳಿಯ ಸತ್ಯಸಾಯಿ ಲೋಕ ಸೇವಾ ಪಿಯು ಕಾಲೇಜಿನ ಸಿದ್ದಾರ್ಥ ಸಾಯಿ 586 (ಶೇ 97.66) ಮತ್ತು ಅಲೀಪುರದ ಜೆಮ್ ಇಂಟರ್‌ ನ್ಯಾಷನಲ್ ಪಿಯು ಕಾಲೇಜಿನ ಸೈಯದಾ ತಸ್ಮೀರ್‌ 583 (ಶೇ 97.16) ನಂತರದ ಸ್ಥಾನ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT