ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲ: ಸಿಡಿಲು ಬಡಿದೀತು ಎಚ್ಚರ!

Last Updated 13 ಮೇ 2017, 10:03 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲ್ಲೂಕಿನ ಗೊಲ್ಲರಹಟ್ಟಿ ಗ್ರಾಮದಿಂದ ಕೊಂಚ ದೂರದ ಕಣದಲ್ಲಿದ್ದ ಹುಲ್ಲನ್ನು ತರಲು ಗುರುವಾರ ಸಂಜೆ ಹೋಗಿದ್ದ ಬಾಲಕ ರಿಬ್ಬರಿಗೆ ಸಿಡಿಲು ಬಡಿದು ತಾವು ಸಾವಿಗೀಡಾಗುತ್ತೇವೆ ಎಂಬ ಕಲ್ಪನೆಯೇ ಇರಲಿಲ್ಲ.

ಆವರು ಹುಲ್ಲನ್ನು ತರುವ ವೇಳೆಗೆ ಶುರುವಾದ ಮಳೆಯ ಜೊತೆಗೆ ಸಿಡಿಲು ಬಡಿದು ಇಬ್ಬರೂ ಮೃತಪಟ್ಟರು. ಅವರ ಸಹೋದರಿ ಮಾತ್ರ ಪಾರಾದಳು. ಆಘಾ ತಕ್ಕೆ ಒಳಗಾದ ಆಕೆ ಕೂಡ್ಲಿಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ.

‘ಆಸ್ಪತ್ರೆಗೆ ಕರೆತಂದಾಗ ಆಕೆ ಪ್ರಜ್ಞಾ ಹೀನಳಾಗಿದ್ದಳು. ಹೃದಯ ಬಡಿತ ಏರು ಪೇರಾಗಿತ್ತು. ಈಗ ಚೇತರಿಸಿಕೊಂಡಿ ದ್ದಾಳೆ’ ಎಂದು ವೈದ್ಯ ಪ್ರದೀಪ್‌ ತಿಳಿಸಿ ದ್ದಾರೆ. ಆದರೆ ಬಾಲಕಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಈ ನಡುವೆ ಆಕೆಯ ಇಡೀ ಕುಟುಂಬಕ್ಕೆ ಸಿಡಿಲು ಶೋಕದ ಮಳೆಯನ್ನೂ ತಂದಿದೆ.

ಜಿಲ್ಲೆಯಲ್ಲಿ ಬರಗಾಲದ ನಡುವೆಯೇ ಬಂದಿರುವ ಮಳೆ ಸಂತಸವನ್ನೇನೂ ತಂದಿಲ್ಲ. ಗುಡುಗು–ಸಿಡಿಲು, ಬಿರುಗಾಳಿ ಮತ್ತು ಆಲಿಕಲ್ಲು ಸಹಿತ ಮಳೆಯು ಬರ ಗಾಲದ ನಷ್ಟದ ಜೊತೆಗೆ ಇನ್ನಷ್ಟು ನಷ್ಟ ವನ್ನು ಸೇರಿಸಿದೆ. ಮನುಷ್ಯರೊಂದಿಗೆ ಆಡು, ಕುರಿ, ಎಮ್ಮೆಗಳೂ ಸಾವಿಗೀಡಾ ಗಿವೆ. ಮಳೆಗಿಂತ ಸಿಡಿಲು ಮಾರಣಾಂತಿಕ ವಾಗಿ ಪರಿಣಮಿಸಿದೆ. ರೈತ ಸಮುದಾಯ ಈಗ ಸಿಡಿಲಿನಿಂದ ಬಚಾವಾಗುವ ಮುನ್ನೆ ಚ್ಚರಿಕೆ ಹುಡುಕಿಕೊಳ್ಳುವಂತಾಗಿದೆ.

ಸಿಡಿಲಿಗೆ ಬಲಿ ಆದವರು
* ಹಡಗಲಿ ತಾಲ್ಲೂಕಿನ ಅಲ್ಲಿಪುರ ಗ್ರಾಮದ ಕಿಳೆಕ್ಯಾತರ ಗುಂಡಪ್ಪ
* ಸಂಡೂರು ತಾಲ್ಲೂಕಿನ ಗೊಲ್ಲರಹಟ್ಟಿ ಗ್ರಾಮದ ಬಾಲಕರಾದ ಆಕಾಶ ಮತ್ತು ಪುಟ್ಟರಾಜು
* ಬಾಲಕರ ಸಹೋದರಿ ಯಶೋದಾಗೆ ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
* ಹೊಸಪೇಟೆ ತಾಲ್ಲೂಕಿನ ಹೊಸಪೇಟೆ ಗ್ರಾಮದ ಚೆನ್ನಮಾರೆಣ್ಣ ಸಿಮೆಂಟ್ ಶೀಟ್ ತಲೆ ಮೇಲೆ ಬಿದ್ದು ಸಾವು

ಸಿಡಿಲಿನಿಂದ ಪಾರಾಗುವ ದಾರಿಗಳು

l ಹವಾಮಾನ, ಬಿರುಗಾಳಿ, ಮೋಡ ಕವಿದರೆ ಎಚ್ಚೆತ್ತುಕೊಳ್ಳಿ
l ನೀವು ನಿಂತ ಸ್ಥಳದಲ್ಲಿ ಗುಡುಗಿನ ಸದ್ದು ಕೇಳಿಸಿತೆ? ಹಾಗಾದರೆ ನೀವು ಅಪಾಯದಲ್ಲಿದ್ದೀರಿ ಎಂದೇ ಅರ್ಥ
l ಗುಡುಗು–ಸಿಡಿಲಿನಿಂದ ಕೂಡಿದ ಮಳೆ ಬರುವಾಗ ಮನೆಯಿಂದ ಹೊರಗೆ ಹೋಗಬಾರದು
l ಭಾರೀ ಮಳೆ ಬೀಳುವ ಪ್ರದೇಶದಲ್ಲಿ ಸಿಡಿಲಿನ ತೀವ್ರತೆ ಹೆಚ್ಚು. ಮಳೆ ಬೀಳುವ ಪ್ರದೇಶದ 10 ಮೈಲಿ ಸುತ್ತ ಸಿಡಿಲು ಕಾಣಿಸಿಕೊಳತ್ತದೆ
l ಮಳೆ ಬರುವ ಮುನ್ನ ಮಾಡಲೇಬೇಕಾದ ಕೆಲಸಗಳ ಪಟ್ಟಿ ತಯಾರಿಸಿ
l ನಿಗದಿತ ಸಮಯದೊಳಗೆ ಕೆಲಸ ಮುಗಿಸಿ ಮನೆ ಸೇರಿಕೊಳ್ಳಿ
l ಕೆಲಸ ಮುಗಿಯದಿದ್ದರೆ ಮುಂದೂಡುವುದು ಒಳಿತು
l ಗುಡುಗು–ಸಿಡಿಲು ಕಂಡುಬಂದಾಗ ಭದ್ರ ಜಾಗ ಸೇರಿಕೊಳ್ಳಿ. ಸಮರ್ಪಕವಾಗಿ ವಿದ್ಯುತ್‌ ವೈರಿಂಗ್‌ ಆಗಿರುವ ಸ್ಥಳ ಕ್ಷೇಮ
l ಗುಡಿಸಲು, ಟೆಂಟ್‌ಗಳು, ನಿಲ್ದಾಣ, ಮರ, ಕಚ್ಚಾಮನೆಗಳು ಅಸುರಕ್ಷಿತ
l ನೀರಿನ ಪೈಪ್‌ಗಳ ಮೂಲಕವೂ ಸಿಡಿಲು ಹರಿಯುವ ಸಾಧ್ಯತೆ ಇರುವುದರಿಂದ ಮಳೆ ಬರುವಾಗ ಸ್ನಾನ ಮಾಡಬಾರದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT