ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಅಲ್ಲ: ಕಾರಜೋಳ

Last Updated 13 ಮೇ 2017, 10:08 IST
ಅಕ್ಷರ ಗಾತ್ರ

ಮುಧೋಳ: ‘ಕಾಂಗ್ರೆಸ್ ಪಕ್ಷ 70 ವರ್ಷಗಳಿಂದ ಅಲ್ಪಸಂಖ್ಯಾತರು, ದಲಿತರನ್ನು ಭಯದ ವಾತಾವರಣದಲ್ಲಿರಿಸಿ ಅವರನ್ನು ಓಟ್‌ ಬ್ಯಾಂಕ್‌ ಅನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಬಿಜಿಪಿ ಅಲ್ಪಸಂಖ್ಯಾತರ ವಿರೋಧಿ ಎಂದು ಬಿಂಬಿಸುತ್ತಾ ರಾಜಕೀಯ ಲಾಭ ಪಡೆಯುತ್ತಿದ್ದಾರೆ’ ಎಂದು  ಶಾಸಕ ಗೋವಿಂದ ಕಾರಜೋಳ ಆರೋಪಿಸಿದರು.

ನಗರದ ಅಂಜುಮನ್- ಎ-ಇಸ್ಲಾಂ ಕಮೀಟಿ ಉಪಾಧ್ಯಕ್ಷ ಮುನ್ನಾ ಆಸಂಗಿ, ಹಜರತಸಾಬ್ ಚೌಧರಿ, ಫಾರುಕ್ ಮಕಾನದಾರ, ರಫೀಕ್ ಮಕಾನದಾರ, ಅಬ್ದುಲ್ ಜರ್ಮನ್, ಬಿಲಾಲ್ ಆಸಂಗಿ, ಸದ್ದಾಮ ಆಸಂಗಿ, ಅಲ್ತಾಫ್ ಜಮಾದಾರ, ಈರಫಾನ್ ಆಸಂಗಿ ಸೇರಿ ಸುಮಾರು 30 ಜನ ಅಲ್ಪಸಂಖ್ಯಾತರ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆರ್.ಮಾಚಪ್ಪನವರ ಹಾಗೂ ಬಿಜೆಪಿ ನಗರ ಅಧ್ಯಕ್ಷ ಗುರುರಾಜ ಕಟ್ಟಿ, ಜಿಲ್ಲಾ ಉಪಾಧ್ಯಕ್ಷ ಬಿ.ಎಚ್.ಪಂಚಗಾವಿ ಕಲ್ಲಪ್ಪಣ್ಣ ಸಬರದ ಮಾತನಾಡಿದರು.

ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ  ಅನಂತರಾವ ಘೋರ್ಪಡೆ, ಮಾಜಿ ನಿರ್ದೇಶಕ ಉದಯ ಸಾರವಾಡ, ಜಿ.ಪಂ. ಸದಸ್ಯ ಭೀಮನಗೌಡ ಪಾಟೀಲ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಹೆಚ್.ಎನ್.ವಜ್ರಮಟ್ಟಿ, ಎಪಿಎಂಸಿ ನಿರ್ದೇಶಕ ಅಪ್ಪಾಸಾಹೇಬ ಪವಾರ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ನಾಗಪ್ಪ ಅಂಬಿ, ಬಸವರಾಜ ಮಾನೆ,  ಪ್ರಧಾನ ಕಾರ್ಯದರ್ಶಿ ಕುಮಾರ ಹುಲ ಕುಂದ,  ಪ್ರಕಾಶ ಚಿತ್ತರಗಿ, ಬಂಡುರಾವ ಘಾಟಗೆ, ಬಸವರಾಜ ಮಾನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT