ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಹೊಸ ಪ್ರಯೋಗದ ಯಶಸ್ಸು

Last Updated 13 ಮೇ 2017, 10:35 IST
ಅಕ್ಷರ ಗಾತ್ರ

ಮಡಿಕೇರಿ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಾಫಿ ನಾಡು ಕೊಡಗು ಉತ್ತಮ ಸಾಧನೆ ತೋರಿದೆ. ಶಿಕ್ಷಕರು, ಅಧಿಕಾರಿಗಳ ಪರಿ ಶ್ರಮ, ವಿಶೇಷ ತರಗತಿ ನಡೆಸಿದ ಪರಿಣಾಮ ಫಲಿತಾಂಶದಲ್ಲಿ ಕಾಣಿಸುತ್ತಿದೆ ಎಂಬ ಮೆಚ್ಚುಗೆಯ ಮಾತುಗಳು ಜಿಲ್ಲೆ ಯಲ್ಲಿ ವ್ಯಕ್ತವಾಗುತ್ತಿವೆ.

ಕಳೆದ ಶೈಕ್ಷಣಿಕ ವರ್ಷ 18ನೇ ಸ್ಥಾನ ಪಡೆದಿದ್ದ ಜಿಲ್ಲೆ, ಈ ಬಾರಿ 9ನೇ ಸ್ಥಾನ ಪಡೆದಿದೆ. ಒಟ್ಟು 7,456 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಶೇ 77.09 ಫಲಿತಾಂಶ ಬಂದಿದೆ. ಕಳೆದ ಸಾಲಿನಲ್ಲಿ ಶೇ 79.12 ಫಲಿ ತಾಂಶ ದಾಖಲಿಸಿತ್ತು. ಶೇ 2.03 ಫಲಿ ತಾಂಶ ಕುಸಿದಿದೆ. ಕಳೆದ ಎರಡು ಶೈಕ್ಷಣಿಕ ಅವಧಿಯಲ್ಲಿ 18ನೇ ಸ್ಥಾನದಲ್ಲಿ ಜಿಲ್ಲೆಯಿತ್ತು.

ಹೊಸ ಪ್ರಯೋಗ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಸಾಕಷ್ಟು ಕ್ರಮ ತೆಗೆದುಕೊಳ್ಳಲಾಗಿತ್ತು. ಸುಧಾರಣಾ ಕ್ರಮ ಗಳು ಈ ಬಾರಿ ಕೈಹಿಡಿದಿವೆ. ‘ಶಾಲಾ ಪ್ರಾರಂಭದ ವೇಳೆಯೇ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರನ್ನು ಕರೆಸಿ ಶಿಕ್ಷಕರಿಗೆ ಎರಡು ದಿನಗಳ ಕಾಲ ತರಬೇತಿ ನೀಡಲಾಗಿತ್ತು.

ಪಠ್ಯವನ್ನು ಸರಳವಾಗಿ ಹೇಗೆ ಹೇಳಿಕೊಡಲು ಸಾಧ್ಯವೇ ಎಂಬುದರ ಬಗ್ಗೆಯೂ ಶಿಕ್ಷಕರಿಗೇ ತರಬೇತಿ ನೀಡಲಾ ಗಿತ್ತು. ಅಷ್ಟು ಮಾತ್ರವಲ್ಲದೇ ಮೂರು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿ, ಕಡಿಮೆ ಅಂಕಗಳಿಸಿದವರಿಗೆ ರಾತ್ರಿ ತರಗತಿಗಳನ್ನು ನಡೆಸಲಾಗಿತ್ತು’ ಎಂದು ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಮಲ್ಲೇಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾಧಿಕಾರಿ, ಸಿಇಒ ಹಲವು ಬಾರಿ ಸಭೆ ನಡೆಸಿ ಸಲಹೆ ಸೂಚನೆ ನೀಡಿದ್ದರು. ಎಲ್ಲ ಶಾಲೆಗಳಿಗೂ ಪತ್ರ ಬರೆದು ಈ ಸೂಚನೆ ಪಾಲಿಸಲು ತಿಳಿಸಲಾಗಿತ್ತು. ಪರೀಕ್ಷೆ ಭಯವನ್ನು ಹೋಗಲಾಡಿಸು ವುದು ಹೇಗೆ ಎಂಬುದರ ಬಗ್ಗೆಯೂ ಮೂರು ತಾಲ್ಲೂಕಿನಲ್ಲೂ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನೀಡಲಾಗಿತ್ತು.‘ಅದರ ಪ್ರತಿಫಲ ಫಲಿತಾಂಶದಲ್ಲಿ ಕಂಡಿದೆ. 9 ಸ್ಥಾನ ಮೇಲೇರಿರುವುದು ಸಂತಸವಾಗಿದೆ’ ಎಂದೂ ಅವರು ಹೇಳಿದರು.

ಶೇ.100 ಫಲಿತಾಂಶ
ಸೋಮವಾರಪೇಟೆ: ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಇಲ್ಲಿನ ಒಎಲ್‌ವಿ ಪ್ರೌಢ ಶಾಲೆ ಹಾಗೂ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆ ಶೇ 100 ಫಲಿತಾಂಶ ಪಡೆದಿವೆ.ಒಎಲ್‌ವಿ ಶಾಲೆ ಯಲ್ಲಿ 28 ಮಂದಿ ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದು, ಎಂ.ವಿ. ಛಾಯಾ 625ಕ್ಕೆ 600 ಅಂಕ ಪಡೆದು ಶೇ 96ರ ಸಾಧನೆ ಮಾಡಿ ದ್ದಾರೆ.

ಕುವೆಂಪು ಶಾಲೆಯ 24 ವಿದ್ಯಾ ರ್ಥಿಗಳು ಉತ್ತೀರ್ಣ ರಾಗಿದ್ದು, ವಿದ್ಯಾರ್ಥಿನಿ ಮೌನಾನಂದ 594 ಅಂಕ ಪಡೆದು ಶೇ 95ರ ಸಾಧನೆ ಮಾಡಿದ್ದಾರೆ. ಐಗೂರು ಪ್ರೌಢಶಾಲೆ ಶೇ 55.08 ಫಲಿತಾಂಶ ಪಡೆದಿದೆ. 43 ವಿದ್ಯಾರ್ಥಿ ಗಳಲ್ಲಿ 24 ಮಂದಿ ತೇರ್ಗಡೆ ಹೊಂದಿ ದ್ದಾರೆ. ಕೆ.ಆರ್.ದರ್ಶನ್ 572 ಅಂಕ ಪಡೆದು ಉನ್ನತ ಶ್ರೇಣಿ ಗಳಿಸಿದ್ದಾರೆ.

ಶಾಂತಿನಿಕೇತನ ಶೇ 100 ಫಲಿತಾಂಶ
ಸುಂಟಿಕೊಪ್ಪ: ಎಸ್‌ಎಸ್ಎಲ್‌ಸಿ ಪರೀಕ್ಷೆ ಯಲ್ಲಿ ಸಮೀಪದ ಕೊಡಗರಹಳ್ಳಿ  ಶಾಂತಿ ನಿಕೇತನ ಶಾಲೆಯು ಶೇ 100 ಫಲಿತಾಂಶ ಪಡೆದಿದೆ. 77 ವಿದ್ಯಾರ್ಥಿಗಳಲ್ಲಿ 28 ಮಂದಿ ಪ್ರಥಮಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದು, 49 ಮಂದಿ ಪ್ರಥಮಸ್ಥಾನ ಪಡೆದಿದ್ದಾರೆ.ವಚನ ಸುಬ್ಬಯ್ಯ 601 ಅಂಕ ಪಡೆದು ಶಾಲೆಗೆ ಮೊದಲಿಗಳಾಗಿದ್ದಾಳೆ.

ಇಲ್ಲಿನ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯು ಶೇ 90 ಫಲಿತಾಂಶ ಪಡೆದಿದೆ. 116 ಮಂದಿ ಉತ್ತೀರ್ಣರಾಗಿ ದ್ದಾರೆ. 19 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಹ್ಯಾನೀಸಾ 598 ಅಂಕ ಪಡೆದಿದ್ದಾರೆ. 

ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆ ಯಲ್ಲಿ ಶೇ 48 ಫಲಿತಾಂಶ ಬಂದಿದ್ದು, ಲಿಖಿತಾ  590 ಅಂಕ ಪಡೆದು ಶಾಲೆಗೆ ಪ್ರಥಮಸ್ಥಾನ ಗಳಿಸಿದ್ದಾಳೆ. ಈಕೆ ಕನ್ನಡ ದಲ್ಲಿ ಶೇ 100 ಅಂಕಗಳಿಸಿದ್ದಾಳೆ.
ಸಾಯಿ ಶಂಕರ ಶಾಲೆ ಶೇ 100

ಗೋಣಿಕೊಪ್ಪಲು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆ ಶೇ 100ರಷ್ಟು ಫಲಿತಾಂಶ ಪಡೆದಿದೆ.  19 ವಿದ್ಯಾರ್ಥಿ ಗಳಲ್ಲಿ 3 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಪೊನ್ನಂಪೇಟೆ ಸೇಂಟ್‌ ಆಂಥೋಣಿ ಪ್ರೌಢಶಾಲೆಗೆ ಶೇ 97ರಷ್ಟು ಫಲಿತಾಂಶ ಲಭಿಸಿದೆ. ಅಂಜನಾ ಅಕ್ಕಮ್ಮ ಶೇ 95.5 ರಷ್ಟು ಅಂಕಗಳಿಸಿದ್ದಾರೆ.ಕನ್ನಡ 120, ಇಂಗ್ಲಿಷ್‌ 96, ಹಿಂದಿ 98, ಗಣಿತ 91, ವಿಜ್ಞಾನ 96, ಸಮಾಜ ವಿಜ್ಞಾನದಲ್ಲಿ 96 ಅಂಕಗಳಿಸಿದ್ದಾರೆ. 15 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅರುವತ್ತೊಕ್ಕಲು ಸರ್ವದೈವತಾ ಪ್ರೌಢಶಾಲೆಗೆ ಶೇ 98, ಅಪ್ಪಚ್ಚಕವಿ ವಿದ್ಯಾಲಯಕ್ಕೆ ಶೇ 98 ರಷ್ಟು ಫಲಿತಾಂಶ  ಬಂದಿದೆ.

ವಿರಾಜಪೇಟೆ: ಉತ್ತಮ ಫಲಿತಾಂಶ


ವಿರಾಜಪೇಟೆ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಪಟ್ಟಣದ ಸಂತ ಅನ್ನಮ್ಮ ಪ್ರೌಢಶಾಲೆಯ ಮಹಮದ್ ಜಹೀದ್‌ ಶೇ 98.4 ರಷ್ಟು ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಮಹಮದ್ ಜಹೀದ್ ಕನ್ನಡ 121, ಇಂಗ್ಲಿಷ್ 99, ಹಿಂದಿ 100, ವಿಜ್ಞಾನ 100, ಸಮಾಜ ಶಾಸ್ತ್ರ 100, ಗಣಿತದಲ್ಲಿ 95 ಅಂಕ ಗಳಿಸಿದ್ದಾರೆ. ಒಟ್ಟು ಅಂಕ 615.

ದೀಕ್ಷಿತಾ ಜೈನ್ 608 ಅಂಕ ಗಳಿಸಿ ಶಾಲೆಗೆ ಎರಡನೇ ಸ್ಥಾನ ಗಳಿಸಿದ್ದಾರೆ. ಶಾಲೆಯಿಂದ 251 ವಿದ್ಯಾರ್ಥಿಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದು, 202 ಮಂದಿ ತೇರ್ಗಡೆಯಾಗಿದ್ದಾರೆ.35 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಪಟ್ಟಣದ ಪ್ರಗತಿ ಶಾಲೆಯಿಂದ 35 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು 32 ಮಂದಿ ಉತ್ತೀರ್ಣ ರಾಗಿದ್ದಾರೆ. ಶಾಲೆಗೆ ಶೇ 91.4 ರಷ್ಟು ಫಲಿತಾಂಶ ದೊರೆತಿದೆ. ಇಬ್ಬರು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಶೇ  92.6 ರಷ್ಟು ಅಂಕಗಳಿಸಿ ಯಶಸ್ವಿನಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಇಲ್ಲಿನ ವಿದ್ಯಾನಗರದ ಬ್ರೈಟ್ ಶಾಲೆ ಶೇ 76 ರಷ್ಟು ಫಲಿತಾಂಶ ಪಡೆದಿದೆ. ಶಾಲೆಯ 21 ವಿದ್ಯಾರ್ಥಿ ಗಳು ಪರೀಕ್ಷೆಗೆ ಹಾಜರಾಗಿದ್ದು 16 ಮಂದಿ ಉತ್ತೀರ್ಣರಾಗಿದ್ದಾರೆ. ಇಬ್ಬರು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಯಾಗಿದ್ದಾರೆ.

ಮೌಂಟೇನ್ ವ್ಯೂ ಶಾಲೆಯ 15 ವಿದ್ಯಾರ್ಥಿಗಳಲ್ಲಿ 6 ಮಂದಿ ತೇರ್ಗಡೆಯಾಗಿದ್ದು, ಶಾಲೆಗೆ ಶೇ 40 ಫಲಿತಾಂಶ ಬಂದಿರುತ್ತದೆ. ಪಟ್ಟಣದ ತೆಲುಗರ ಬೀದಿಯ ಕೂರ್ಗ್‌ ವ್ಯಾಲಿ ಶಾಲೆಯ 25 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 92 ಫಲಿತಾಂಶ ಪಡೆದುಕೊಂಡಿದೆ. ಶಾಲೆಯ 8 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT