ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರಿಂದ ‘ಕೌಶಲ ಕರ್ನಾಟಕ’ ಆರಂಭ

Last Updated 13 ಮೇ 2017, 10:37 IST
ಅಕ್ಷರ ಗಾತ್ರ

ಸೋಮವಾರಪೇಟೆ: ‘ಕೌಶಲ ಕರ್ನಾಟಕ’ ಯೋಜನೆ ಮೇ 15ರಿಂದ ಆರಂಭಗೊಳ್ಳ ಲಿದ್ದು, ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು’  ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಗನ್ನಾಥ್ ತಿಳಿಸಿದರು.

ಶುಕ್ರವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್‌ ಕೃಷ್ಣ  ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ರಾಜ್ಯದಾದ್ಯಂತ ಯೋಜನೆ ಮೇ 15ರಂದು ಜಾರಿಗೆ ಬರಲಿದೆ. ಉಸ್ತು ವಾರಿ ಸಚಿವರು, ತಾಲ್ಲೂಕು ಕೇಂದ್ರ ಗಳಲ್ಲಿ ಶಾಸಕರು ಚಾಲನೆ ನೀಡುವರು. ಅಂದು   ಮಧ್ಯಾಹ್ನ 12ಕ್ಕೆ ತಾಲ್ಲೂಕು ಕಚೇರಿ ಆವರಣದ ಸ್ತ್ರೀಶಕ್ತಿ ಭವನದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಚಾಲನೆ ನೀಡುವರು.

ಜಿಲ್ಲಾ, ತಾಲ್ಲೂಕು, ಪಟ್ಟಣ ಪಂಚಾ ಯಿತಿ, ಗ್ರಾಮ ಪಂಚಾಯಿತಿಯ ಜನಪ್ರತಿ ನಿಧಿಗಳು ಭಾಗವಹಿಸಲಿದ್ದಾರೆ ಎಂದರು.ವಿವಿಧ ಇಲಾಖೆಗಳ ಸಹಯೋಗ ದಲ್ಲಿ ಕೌಶಲ ಕರ್ನಾಟಕ ಯೋಜನೆ ಜಾರಿಗೆ ಬರಲಿದೆ. ಪರಿಶಿಷ್ಟ ಜಾತಿಗೆ ಶೇ 20, ಪಂಗಡಕ್ಕೆ 7, ಅಂಗವಿಕಲರಿಗೆ 3, ಅಲ್ಪಸಂಖ್ಯಾತರಿಗೆ 15, ಮಹಿಳೆಯರಿಗೆ ಶೇ 33 ಮೀಸಲು ನಿಗದಿಯಾಗಿದೆ. ಆದ್ದರಿಂದ ಎಲ್ಲಾ ಇಲಾಖೆಯ ಅಧಿಕಾರಿ ಗಳು ಸಹಕರಿಸಬೇಕೆಂದು ತಿಳಿಸಿದರು.ತಾ.ಪಂ ಪ್ರಭಾರ ಕಾರ್ಯ ನಿರ್ವಹ ಣಾಧಿಕಾರಿ ಸುನೀಲ್, ಪಟ್ಟಣ ಪಂಚಾ ಯಿತಿ ಮುಖ್ಯಾಧಿಕಾರಿ ನಾಚಪ್ಪ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT