ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ಆಗ್ರಹಿಸಿ ಗ್ರಾ.ಪಂ ಕಚೇರಿಗೆ ಮುತ್ತಿಗೆ

Last Updated 14 ಮೇ 2017, 8:35 IST
ಅಕ್ಷರ ಗಾತ್ರ

ಮುದಗಲ್: ಸಮೀಪದ ತಿಮ್ಮಾಪುರ ಗ್ರಾಮದ ದಲಿತ ಕಾಲೊನಿಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಕಾಲೊನಿ ನಿವಾಸಿಗಳು ಹಾಗೂ ಮುದಗಲ್ ದಲಿತ ಸಂಘದ ಪದಾಧಿ ಕಾರಿಗಳು ಕನ್ನಾಳ ಗ್ರಾಮ ಪಂಚಾಯಿತಿಗೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

‘ಗ್ರಾಮದ ದಲಿತ ಕಾಲೊನಿಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜನರು ಕುಡಿಯುವ ನೀರಿಗಾಗಿ ಪರ ದಾಡುವಂತಾಗಿದೆ. ನೀರಿನ ಸೌಲಭ್ಯ ಕಲ್ಪಿಸುವಂತೆ ಹಲವು ಬಾರಿ ಜನ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮ ಸ್ಥರು ದೂರಿದರು.   ವಾರದ ಒಳಗಡೆ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಚನ್ನಮಲ್ಲಯ್ಯ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಕನ್ನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಗಡಿ ಭಾಗ್ಯಲಕ್ಷ್ಮೀ, ಮುದಗಲ್ ದಲಿತ ಸಂಘರ್ಷ ಸಮಿತಿ ಸಂಚಾಲಕ ಬಸವ ರಾಜ ಬಂಕದ ಮನಿ, ಶರಣಪ್ಪ , ವರ್ಮ ಪೇಂಟರ್, ಪ್ರತಾಪ ಹಿರೇಮನಿ, ಹುಲಗಪ್ಪ ಕನ್ನಾಪುರಹಟ್ಟಿ, ರಮೇಶ ತಿಮ್ಮಾಪುರ, ಹುಸೇನಪ್ಪ ತಿಮ್ಮಾಪುರ, ಹನಮಂತ ಓಣಿ, ಲಕ್ಷ್ಮಮ್ಮ ತಿಮ್ಮಾಪುರ, ಹುಗಮ್ಮ, ಗಂಗಮ್ಮ,  ಲಕ್ಷ್ಮಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT