ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲೂ ಬಾಲಕಿಯರೇ ಮುಂದು

Last Updated 14 ಮೇ 2017, 9:07 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲೆಯ ಎಸ್ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಪರೀಕ್ಷೆ ಕುಳಿತ ಬಾಲಕಿಯರಲ್ಲಿ ಶೇ 89.45 %ರಷ್ಟು ಪಾಸಾಗಿದ್ದರೆ, ಬಾಲಕರಲ್ಲಿ 72.33ರಷ್ಟು ಉತ್ತೀರ್ಣ­ರಾಗಿದ್ದಾರೆ. ನಗರದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ವಿದ್ಯಾರ್ಥಿಗಳು ಮುಂದೆ ಇದ್ದಾರೆ. 74.88ರಷ್ಟು ನಗರ ವಿದ್ಯಾರ್ಥಿ­ಗಳು ಪಾಸಾಗಿದ್ದರೆ, ಶೇ 81.19ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಪಾಸಾಗಿದ್ದಾರೆ. 

ಹೊಸಬರು (ರೆಗ್ಯುಲರ್‌) ವಿದ್ಯಾ­ರ್ಥಿ­ಗಳಲ್ಲಿ ಶೇ 72.29, ಪುನರಾವರ್ತಿತ ಅಭ್ಯರ್ಥಿಗಳಲ್ಲಿ 41.11 ಫಲಿತಾಂಶ ಬಂದಿದೆ.ಸಂಸ್ಥೆವಾರು ಫಲಿತಾಂಶದಲ್ಲಿ ಅನು­ದಾನ ರಹಿತ ಶಾಲೆ ಶೇ 8-0.88, ಸರ್ಕಾರಿ ಶಾಲೆಗಳು ಶೇ 78.08 ಮತ್ತು ಅನುದಾನಿತ ಶಾಲೆಗಳಿಗೆ ಶೇ 74.57ರಷ್ಟು ಸಾಧನೆ ಮಾಡಿವೆ. ಒಟ್ಟಾರೆ ಅನುದಾನ ರಹಿತ ಶಾಲೆಗಳೇ ಹೆಚ್ಚಿನ ಸಾಧನೆ ಮಾಡಿವೆ. ಸರ್ಕಾರಿ ಶಾಲೆ ದ್ವಿತೀಯ ಸ್ಥಾನದಲ್ಲಿದೆ.

100ಕ್ಕೆ 100ರಷ್ಟು ಫಲಿತಾಂಶ ಸಾಧಿಸಿದ ಶಾಲೆಗಳು ಒಟ್ಟು  22 ಇವೆ. ಮಾಧ್ಯಮವಾರು ಫಲಿತಾಂಶದಲ್ಲಿ ಇಂಗ್ಲಿಷ್‌ ಮಾಧ್ಯಮದ ವಿದ್ಯಾರ್ಥಿಗಳು ಶೇ 88.20ರಷ್ಟು ಉತ್ತೀರ್ಣರಾಗಿದ್ದಾರೆ. 6,975 ವಿದ್ಯಾರ್ಥಿಗಳಲ್ಲಿ 6,152 ಮಕ್ಕಳು ಉತ್ತೀರ್ಣರಾಗಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಶೇ 74.27ರಷ್ಟು ಸಾಧನೆಯಾಗಿದೆ. 16,966 ಮಕ್ಕಳಲ್ಲಿ 12,600 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಉರ್ದು ಮಾಧ್ಯಮದಲ್ಲಿ ಶೇ 65.56, ಹಿಂದಿ ಮಾಧ್ಯಮ ಶೇ 85.71ರಷ್ಟು ಫಲಿತಾಂಶ ಬಂದಿದೆ.

ವಿಶೇಷ ವಿದ್ಯಾರ್ಥಿಗಳ ಫಲಿತಾಂಶ: ಸಾಮಾನ್ಯ ಮಕ್ಕಳು ಶೇ 77.30, ಅಂಗವೈಕಲ್ಯ ಶೇ 76.47, ಕಿವುಡ ಮತ್ತು ಮೂಗ ಶೇ 62.06, ದೃಷ್ಟಿಮಾಂದ್ಯರು ಶೇ 100, ಬುದ್ಧಿಮಾಂದ್ಯರಲ್ಲಿ  ಶೇ 33.33, ಕಲಿಕಾ ನ್ಯೂನತೆಯುಳ್ಳ ಮಕ್ಕಳಲ್ಲಿ 100ರಷ್ಟು ಉತ್ತೀರ್ಣರಾಗಿದ್ದಾರೆ.

ಎಸ್ಎಸ್ಎಲ್‌ಸಿ  ಫಲಿತಾಂಶದ ಅಂಕಿ ಅಂಶ 

26,129 ಪರೀಕ್ಷೆಗೆ ಬರೆದ ವಿದ್ಯಾರ್ಥಿಗಳು

20,196 ಉತ್ತೀರ್ಣರಾದವರು

22 ಶೇ 100 ಫಲಿತಾಂಶ ದಾಖಲಿಸಿದ ಶಾಲೆಗಳ ಸಂಖ್ಯೆ

74.27% ಕನ್ನಡ ಮಾಧ್ಯಮದಲ್ಲಿ ಬಂದ ಫಲಿತಾಂಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT