ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ನೆಲಸಮ: ನಿವಾಸಿಗಳ ಆಕ್ರೋಶ

Last Updated 14 ಮೇ 2017, 9:02 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ಇಲ್ಲಿನ ಚಂದನ ಕಾಲೊನಿ ಯಲ್ಲಿನ ಬಡವರ ಮನೆಗಳನ್ನು ನೆಲಸಮ ಮಾಡಿರುವವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಶನಿವಾರ ಪ್ರತಿಭಟ ನಾಕಾರರು ಹಳೇ ಹುಬ್ಬಳ್ಳಿ ಠಾಣೆಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮಹಿಳೆ ಯೊಬ್ಬರು ಪೊಲೀಸರ ಎದುರೇ ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.

ದಕ್ಷಿಣ ಉಪವಿಭಾಗ ಎಸಿಪಿ ಬಿ.ಬಿ. ಪಾಟೀಲ ಮತ್ತು ಇನ್‌ಸ್ಪೆಕ್ಟರ್‌ ಶ್ರೀಪಾದ ಜಲ್ದೆ ಅವರ ಮುಂದೆ ಚಂದನ ಕಾಲೊನಿ ಯಲ್ಲಿ ಮನೆಗಳನ್ನು ಕಳೆದುಕೊಂಡ ನಿರಾ ಶ್ರಿತರು ಅಳಲು ತೋಡಿಕೊಳ್ಳುತ್ತಿದ್ದರು. ಈ ವೇಳೆ ವೈಜಯಂತಿ ಪವಾರ ಎಂಬು ವವರು ಬಾಟಲಿಯಲ್ಲಿ ತಂದಿದ್ದ ಡೀಸೆಲ್‌ ಅನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಳ್ಳಲು ಮುಂದಾದರು. ಇದರಿಂದ ಪೊಲೀಸರು ಗಲಿಬಿಲಿ ಗೊಂಡರು. ಸ್ಥಳದಲ್ಲಿದ್ದ ಸಿಬ್ಬಂದಿ ಕೂಡಲೇ ಡೀಸೆಲ್‌ ಬಾಟಲಿಯನ್ನು ಕಿತ್ತು ಕೊಂಡು ಮಹಿಳೆಯನ್ನು ಸಮಾಧಾನ ಮಾಡಿ ಠಾಣೆಗೆ ಕರೆದೊಯ್ದರು.

ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ ವಾಗಿತ್ತು. ಗುಡಿಸಲು, ಮನೆಗಳನ್ನು ನೆಲಸಮಗೊಳಿಸಿದವರನ್ನು ಪೊಲೀಸರು ಈ ಕೂಡಲೇ ಬಂಧಿಸಬೇಕು. ಇಲ್ಲವಾ ದಲ್ಲಿ, ಎಲ್ಲರೂ ಠಾಣೆ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

‘ಹಳೇ ಹುಬ್ಬಳ್ಳಿ ಆನಂದನಗರದ ಚಂದನ ಕಾಲೊನಿಯಲ್ಲಿ 2000ನೇ ಸಾಲಿನಲ್ಲಿ ಅಂದಾಜು 140 ಕುಟುಂಬ ಗಳು 20x30 ಅಳತೆಯ ನಿವೇಶನ ಗಳನ್ನು ಖರೀದಿ ಮಾಡಿ ಗುಡಿಸಲು, ಮನೆ ನಿರ್ಮಿಸಿಕೊಂಡಿದ್ದೆವು. ಪಾಲಿಕೆಗೆ ತೆರಿಗೆಯನ್ನೂ ಪಾವತಿಸುತ್ತಿದ್ದೇವೆ. ಇದೀಗ ಭೂ ಮಾಫಿಯಾದವರು ಜಾಗ ನಮ್ಮದೆಂದು ಹೇಳಿಕೊಂಡು ಮನೆ–ಗುಡಿಸಲುಗಳನ್ನು ನೆಲಸಮ ಮಾಡಿದ್ದಾರೆ ಎಂದು ದೂರಿದರು.

‘ಬಹುತೇಕ ಮಂದಿ ಕೂಲಿ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದೇವೆ. ಇದೀಗ ನಮ್ಮ ಬದುಕು ಬೀದಿಗೆ ಬಿದ್ದಿದೆ. ಹತ್ತಿರದಲ್ಲೇ ಇರುವ ಸ್ಮಶಾನದಲ್ಲಿ ಅಡುಗೆ ಮಾಡಿಕೊಂಡು ದಿನದೂಡುತ್ತಿ ದ್ದೇವೆ’ ಎಂದು ಪ್ರತಿಭಟನಾನಿರತ  ಮಹಿಳೆಯರು ಅಳಲು ತೋಡಿಕೊಂಡರು.ಪ್ರತಿಭಟನೆಯ ಬಳಿಕ ತಹಶೀಲ್ದಾರ್‌ ಕಚೇರಿಗೆ ತೆರಳಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT