ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನಸ್ಸು ಪ್ರಶಾಂತವಾಗಿರಲು ಏಕಾಗ್ರತೆ ಅತ್ಯಗತ್ಯ’

Last Updated 14 ಮೇ 2017, 9:57 IST
ಅಕ್ಷರ ಗಾತ್ರ

ಅಂಕೋಲಾ: ‘ಪ್ರತಿಯೊಬ್ಬರೂ ದೇವ ರನ್ನು ನಂಬಿ ನಡೆದರೆ ಸಮಾಜದಲ್ಲಿ ನಡೆಯುವ ಘಾತುಕ ಕೃತ್ಯಗಳನ್ನು ತಡೆ ಗಟ್ಟಲು ಸಾಧ್ಯ. ಮನಸ್ಸು ಪ್ರಶಾಂತವಾಗಿರ ಬೇಕಾದರೆ ಏಕಾಗ್ರತೆ ಅತ್ಯಗತ್ಯ. ದೇವಾಲ ಯಗಳು ಮತ್ತು ದೇವರ ಕುರಿತ ಧ್ಯಾನ ಏಕಾಗ್ರತೆಗೆ ಪೂರಕವಾಗಲಿದೆ. ಇಂದಿನ ಯುವಜನರು ಕೂಡ ಇನ್ನಿತರ ಹವ್ಯಾಸ ಗಳತ್ತ ಆಸಕ್ತಿ ವಹಿಸದೆ ಶಿಕ್ಷಣ ಮತ್ತು ಅಧ್ಯಾತ್ಮದ ಕಡೆಗೆ ಒಲವು ತೋರಿಸಬೇಕು’ ಎಂದು ಶಿಕ್ಷಕ ಹೊನ್ನಪ್ಪ ಪಟಗಾರ ಅಭಿಪ್ರಾಯಪಟ್ಟರು.

ಪಟ್ಟಣದ ಕೇಣಿ ರಸ್ತೆಗೆ ಹೊಂದಿ ಕೊಂಡಿರುವ ಸಾಯಿ ಮಂದಿರದಲ್ಲಿ ಭಗವಾನ ಸತ್ಯಸಾಯಿ ಸೇವಾ ಸಮಿತಿ, ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರ ಇವರ ಆಶ್ರಯದಲ್ಲಿ ಶನಿವಾರ ನಡೆದ 12ನೇ ಪ್ರವೇಶೋತ್ಸವ ಮತ್ತು 49ನೇ ವಾರ್ಷಿ ಕೋತ್ಸವ ಉದ್ಘಾಟಿಸಿ  ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಹಿರಿಯ ಸಾಯಿ ಭಕ್ತರಾದ ಪಾಂಡುರಂಗ ಕೇಣಿಕರ ಮಾತನಾಡಿ, ಭಗವಂತನನ್ನು ನಂಬಿ ಯಾರೂ ಕೆಟ್ಟವರಿಲ್ಲ. ತಮ್ಮ ತಮ್ಮ ಕೆಲಸ ಕಾರ್ಯಗಳ ಮಧ್ಯದಲ್ಲಿಯೇ ದೇವರ ಸೇವೆ, ಧ್ಯಾನ ಮಾಡುವ ಮೂಲಕ ಮನುಷ್ಯನ ಸಮಸ್ಯೆಗಳಿಂದ ಮುಕ್ತರಾ ಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪ್ರತಿ ಯೊಬ್ಬರೂ ದೇವರ ಮೇಲೆ ನಂಬಿಕೆ ಹೊಂದಬೇಕು ಎಂದರು.

ಸಾಯಿ ಭಕ್ತರಾದ ಎನ್.ಡಿ. ಅಂಕೋಲೆಕರ ಇದ್ದರು. ಶಕುಂತಲಾ, ಜಯಶ್ರೀ ಪ್ರಾರ್ಥನೆ ಹಾಡಿದರು. ಸಂಚಾಲಕ ಡಾ. ವೆಂಕಟೇಶ ಕೇಣಿಕರ ಸ್ವಾಗತಿಸಿದರು. ಉಪನ್ಯಾಸಕ ಸೂರ್ಯ ಕಾಂತ ಶೆಟ್ಟಿ ನಿರೂಪಿಸಿದರು. ನಂತರ ಭಜನೆ ನಡೆಯಿತು.  ಸಾಯಿ ಭಕ್ತರಾದ ಶಿವಬಾಬಾ ನಾಯ್ಕ, ವಸಂತ ಹೆಗಡೆಕಟ್ಟೆ, ಟಿ. ಶೋಭಾ, ನೀಲಾ ಶಿವರಾಮ ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT