ವೈರಲ್‌ ವಿಡಿಯೊ

ಅಮೆರಿಕ:  ಹಿಜಾಬ್ ಧರಿಸಿದ ಮುಸ್ಲಿಂ ಮಹಿಳೆ ಹೊರಹಾಕಿದ ಬ್ಯಾಂಕ್ ಸಿಬ್ಬಂದಿ

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ  ಸಂಬಂಧ ಬ್ಯಾಂಕ್ ಅಧಿಕಾರಿಗಳು ಜಮೇಲಾ ಮೊಹಮ್ಮದ್ ಅವರಲ್ಲಿ ಕ್ಷಮೆಯಾಚಿಸಿದ್ದಾರೆ

ಅಮೆರಿಕ:  ಹಿಜಾಬ್ ಧರಿಸಿದ ಮುಸ್ಲಿಂ ಮಹಿಳೆ ಹೊರಹಾಕಿದ ಬ್ಯಾಂಕ್ ಸಿಬ್ಬಂದಿ
ನ್ಯೂಯಾರ್ಕ್: ಬ್ಯಾಂಕ್‌ಗೆ ಹಿಜಾಬ್ ಧರಿಸಿ ಬಂದ ಮುಸ್ಲಿಂ ಮಹಿಳೆಯನ್ನು ಬ್ಯಾಂಕಿನಿಂದ ಹೊರಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
 
ಜಮೇಲಾ ಮೊಹಮ್ಮದ್ ಎಂಬ  ಮಹಿಳೆ ವಾಷಿಂಗ್ಟನ್‌ನಲ್ಲಿರುವ ಸೌಂಡ್ ಕ್ರೆಡಿಟ್ ಯೂನಿಯನ್ ಬ್ಯಾಂಕ್‌ಗೆ ಹಿಜಾಬ್ ಧರಿಸಿ ಹೋಗಿದ್ದರು. ಈ ವೇಳೆ ಬ್ಯಾಂಕ್‌ ಸಿಬ್ಬಂದಿ  ಹಿಜಾಬ್ ಧರಿಸಿದ್ದಕ್ಕೆ ಹೊರ ಹಾಕಿದ್ದಾರೆ ಎಂದು  ಆ ನೊಂದ ಮಹಿಳೆ ವಿಡಿಯೊದಲ್ಲಿ ತಿಳಿಸಿದ್ದಾರೆ.   
 
ಶುಕ್ರವಾರ ಪ್ರಾರ್ಥನಾ ದಿನವಾಗಿದ್ದರಿಂದ ಶ್ವೆಟ್ಟರ್ ಹಾಗೂ ಹಿಜಾಬ್ ಧರಿಸಿ ಮಧ್ಯಾಹ್ನ ಬ್ಯಾಂಕ್‌ಗೆ ಹೋಗಿದ್ದೆ. ಆಗ ಅಲ್ಲಿನ ಸಿಬ್ಬಂದಿ ನನಗೆ ಹಿಜಾಬ್ ತೆಗೆಯುವಂತೆ ಹೇಳಿದ್ದಾರೆ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
 

ಬ್ಯಾಂಕ್‌ ನಿಯಮದ ಪ್ರಕಾರ ಸನ್‌ಗ್ಲಾಸ್, ಟೋಪಿ ಧರಿಸಿ ಬ್ಯಾಂಕ್‌ ಒಳಗೆ ಬರುವಂತಿಲ್ಲ. ಆದರೆ ಅಲ್ಲಿಯೇ ಇದ್ದ ಮೂವರು ಟೋಪಿ ಧರಿಸಿದ್ದರು. ಆದರೆ   ಅಲ್ಲಿನ ಸಿಬ್ಬಂದಿ ಅವರಿಗೆ ಯಾವುದೇ ರೀತಿಯ ನಿರ್ಬಂಧ ಹೇರಲಿಲ್ಲ. ನನಗೆ ಮಾತ್ರ ಹಿಜಾಬ್ ತೆಗೆಯುವಂತೆ ಹೇಳಿದ್ದಾರೆ ಎಂದು ಜಮೇಲಾ ಮೊಹಮ್ಮದ್ ತಿಳಿಸಿದ್ದಾರೆ.
 
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ  ಸಂಬಂಧ ಬ್ಯಾಂಕ್ ಅಧಿಕಾರಿಗಳು ಜಮೇಲಾ ಮೊಹಮ್ಮದ್ ಅವರಲ್ಲಿ ಕ್ಷಮೆಯಾಚಿಸಿದ್ದಾರೆ 
 
Comments
ಈ ವಿಭಾಗದಿಂದ ಇನ್ನಷ್ಟು
ಐಸಿಜೆ ನ್ಯಾಯಮೂರ್ತಿಯಾಗಿ ಭಾರತದ ದಲ್ವೀರ್ ಭಂಡಾರಿ ಪುನರಾಯ್ಕೆ

ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದ ಬ್ರಿಟನ್
ಐಸಿಜೆ ನ್ಯಾಯಮೂರ್ತಿಯಾಗಿ ಭಾರತದ ದಲ್ವೀರ್ ಭಂಡಾರಿ ಪುನರಾಯ್ಕೆ

21 Nov, 2017

ಗಡುವಿಗೂ ಬಗ್ಗದ ಜಿಂಬಾಬ್ವೆ ಅಧ್ಯಕ್ಷ
ಮುಗಾಬೆ ವಾಗ್ದಂಡನೆಗೆ ಸಿದ್ಧತೆ

ಜಿಂಬಾಬ್ವೆ ಅಧ್ಯಕ್ಷ ಹುದ್ದೆ ತೊರೆಯಲು ನಿರಾಕರಿಸಿರುವ ರಾಬರ್ಟ್ ಮುಗಾಬೆ ವಿರುದ್ಧ ಮಂಗಳವಾರದಿಂದ ವಾಗ್ದಂಡನೆ ಪ್ರಕ್ರಿಯೆ ಆರಂಭವಾಗಲಿದೆ. ಅದರ ಟಿಪ್ಪಣಿಯೂ ಸಿದ್ಧವಾಗಿದೆ.

21 Nov, 2017
ಡಿ.4ರಿಂದ ಮಲ್ಯ ವಿಚಾರಣೆ

ಭಾರತಕ್ಕೆ ಹಸ್ತಾಂತರ ವಿಚಾರ
ಡಿ.4ರಿಂದ ಮಲ್ಯ ವಿಚಾರಣೆ

21 Nov, 2017

ಅಧ್ಯಯನ
‘ಚರ್ನೋಬಿಲ್ ದುರಂತಕ್ಕೆ ಪರಮಾಣು ಸ್ಫೋಟವೇ ಮುಖ್ಯ ಕಾರಣ’

1986ರ ಏಪ್ರಿಲ್ 26ರಂದು ಉಕ್ರೇನ್‌ನಲ್ಲಿ ನಡೆದ ಭೀಕರ ಚರ್ನೋಬಿಲ್ ದುರಂತಕ್ಕೆ ಪರಮಾಣು ಸ್ಫೋಟವೇ ಮುಖ್ಯ ಕಾರಣ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಹಬೆ ಕೊಳವೆ...

21 Nov, 2017

ಬೀಜಿಂಗ್‌
ರಾಷ್ಟ್ರಪತಿ ಕೋವಿಂದ್‌ ಅರುಣಾಚಲ ಪ್ರದೇಶ ಭೇಟಿಗೆ ಚೀನಾ ಆಕ್ಷೇಪ

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದನ್ನು ಚೀನಾ ಬಲವಾಗಿ ಆಕ್ಷೇಪಿಸಿದೆ. ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಈ ಸಂದರ್ಭದಲ್ಲಿ ಭಾರತವು ಗಡಿ...

21 Nov, 2017