ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನುಭವ ಮಂಟಪವೇ ಸಂಸತ್‌್’

Last Updated 15 ಮೇ 2017, 5:31 IST
ಅಕ್ಷರ ಗಾತ್ರ

ಧಾರವಾಡ: ‘ಪ್ರಜಾಪ್ರಭುತ್ವದ ಪರಿಕಲ್ಪನೆ ಮೂಡಿಸಿದ ವಿಶ್ವ ಗುರು ಬಸವಣ್ಣನವರ ಅನುಭವ ಮಂಟಪವು ದೇಶದ ಮೊದಲ ಸಂಸತ್ತು ಎಂದೆ ಬಿಂಬಿತವಾಗಿದೆ. ಈ ಬಗ್ಗೆ ಕನ್ನಡಿಗರು ಹೆಮ್ಮೆ ಪಡಬೇಕು’ ಎಂದು ಅಜ್ಜಪ್ಪ ಹೊರಕೇರಿ ಹೇಳಿದರು.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅಕ್ಕಮಹಾದೇವಿ ಅನುಭಾವ ಪೀಠ ಆಯೋಜಿಸಿದ್ದ 8ನೇ ಶರಣೋತ್ಸವದಲ್ಲಿ ‘ಜಗತ್ತಿನ ಪ್ರಥಮ ಪಾರ್ಲಿಮೆಂಟ್–ಅನುಭವ ಮಂಟಪ’ ಎಂಬ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ‘ಜಗತ್ತಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಾರಿದ ಅನುಭವ ಮಂಟಪದ ಕಾರ್ಯ ಶ್ಲಾಘನೀಯ’ ಎಂದರು. 

‘ಅನೇಕ ಮಹಾತ್ಮರು, ಸಾಧು, ಸಂತರು, ಶರಣರು ಹುಟ್ಟಿದ ಈ ನಾಡಿನಲ್ಲಿ ಇನ್ನೂ ಜಾತೀಯತೆ, ಲಿಂಗ ತಾರತಮ್ಯ ಇದೆ. ಇಂಥ ಅನಿಷ್ಠ ನಿರ್ಮೂಲನೆಯಾಗಬೇಕಾದರೆ ಶರಣರ ಬದುಕು ಮತ್ತು ಸಂದೇಶ ಅರಿತು ನಡೆಯಬೇಕು’ ಎಂದರು.

ದೆಹಲಿ ಬಸವ ಮಂಟಪದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ‘ಬಸವಣ್ಣನವರು ಜಾತಿ, ಮತ, ಧರ್ಮಗಳ ಸೀಮಿತ ಗೋಡೆಗಳನ್ನು ಮೀರಿ ಬೆಳೆದ ಮಹಾತ್ಮರು. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗಬೇಕು.

ಅಂದಿನ ಅನುಭವ ಮಂಟಪದಲ್ಲಿ ಜಾತಿ, ಮತ ಧರ್ಮ ಬೇಧ ಭಾವವಿಲ್ಲದೆ ಎಲ್ಲರಿಗೂ ಅವಕಾಶ ನೀಡಲಾಗಿತ್ತು ಇಂದಿನ ಸಂಸತ್ತು ಅದೇ ಮಾದರಿಯಲ್ಲಿ ರೂಪುಗೊಂಡಿದೆ. ಆದರೆ ಈಚೆಗೆ  ಅಲ್ಲಿಯೂ ಜಾತೀಯತೆ ತಲೆ ಎತ್ತಿದೆ’ ಎಂದು ವಿಷಾದಿಸಿದರು.

ತೆಲಂಗಾಣದ ರಾಷ್ಟ್ರೀಯ ಬಸವದಳ ಅಧ್ಯಕ್ಷ ಧಜರಾಜ ಜೀರಗಿ ಮಾತನಾಡಿ, ‘ಕಲ್ಯಾಣ ಕ್ರಾಂತಿ ಮಾಡಿದ ವಿಶ್ವಗುರು ಬಸವಣ್ಣನವರ ತತ್ವವನ್ನು ಕರ್ನಾಟಕದಲ್ಲಿ ಹತ್ತಿಕ್ಕುವ ಕೆಲಸ ನಡೆಯಿತು. ಆದರೆ ಅಂತಹ ವ್ಯಕ್ತಿಗೆ ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳು ಗೌರವ ನೀಡಿದವು. ಇದೀಗ ರಾಜ್ಯ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಂಡು ಎಲ್ಲ ಸರ್ಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಹಾಕಬೇಕು ಎನ್ನುವ ನಿಯಮ ರೂಪಿಸಿದೆ’ ಎಂದರು.

ಮಾತೆ ಗಂಗಾದೇವಿ, ಮಾತೆ ಜ್ಞಾನೇಶ್ವರಿ, ಮಾತೆ ಸತ್ಯಾದೇವಿ, ಪ್ರಭುಲಿಂಗ ಸ್ವಾಮಿಜಿ, ಸಿದ್ದಣ್ಣ ನಟೇಗಲ್‌, ಮಲ್ಲೇಶಪ್ಪ ಕುಸುಗಲ್ಲ ಹಾಜರಿದ್ದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದವರನ್ನು ಇದೇ ವೇಳೆ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT