ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರ ಕಡೆಗಣನೆ: ಕಂದಕೂರು

ಸೈದಾಪುರದಲ್ಲಿ ನಾಳೆ ಪಾದಯಾತ್ರೆ ಸಮಾರೋಪ, ಜೆಡಿಎಸ್ ಸಮಾವೇಶ
Last Updated 15 ಮೇ 2017, 5:49 IST
ಅಕ್ಷರ ಗಾತ್ರ
ಯಾದಗಿರಿ: ‘ಮತಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಲ್ಪಸಂಖ್ಯಾತರನ್ನು ಕೇವಲ ಮತಗಳಿಕೆಗೆ ಮಾತ್ರ ಬಳಕೆ ಮಾಡಿಕೊಂಡಿವೆ. ಆದರೆ, ಪಕ್ಷದಲ್ಲಿ ಅಲ್ಪಸಂಖ್ಯಾತ ಮುಖಂಡರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ’ ಎಂದು ಜೆಡಿಎಸ್ ಯುವ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರು ಆರೋಪಿಸಿದರು.
 
ಗುರಮಠಕಲ್ ಮತಕ್ಷೇತ್ರದ ಸಮಗ್ರ ಬದಲಾವಣೆಗಾಗಿ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ‘ಜೆಡಿಎಸ್ ನಡಿಗೆ-ಬದಲಾವಣೆಕಡೆಗೆ’ ಪಾದ ಯಾತ್ರೆಯ 16ನೇ ದಿನ ದುಪ್ಪಲ್ಲಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನರೊಂದಿಗೆ ಸಂವಾದದಲ್ಲಿ ಅವರು ಮಾತನಾಡಿದರು.
 
‘ಜೆಡಿಎಸ್‌ ನಿಜವಾದ ಜಾತ್ಯತೀತ ನಿಲುವು ಮತ್ತು ಸಿದ್ಧಾಂತ ಒಳಗೊಂಡಿರುವ ಪಕ್ಷ. ಎಲ್ಲಾ ಜಾತಿ, ಧರ್ಮ ದವರಿಗೂ ಸಮಾಜ ಸ್ಥಾನಮಾನ ಕಲ್ಪಿಸಲಾಗಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತರು ಜೆಡಿಎಸ್ ಬೆಂಬಲಿಸಿ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಬೇಕು’ ಎಂದು ಮನವಿ ಮಾಡಿದರು. 
 
ಭಾನುವಾರ ದುಪ್ಪಲ್ಲಿ ಗ್ರಾಮದ ಜನ ಶರಣಗೌಡರನ್ನು ಅತ್ಯಂತ ಉತ್ಸಾಹದಿಂದ ಭಾಜಾ ಭಜಂತ್ರಿ ಡೊಳ್ಳು ಕುಣಿತದ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.
 
ಶೇಖರಪ್ಪಗೌಡ ದುಪ್ಪಲ್ಲಿ, ನರಸಪ್ಪ ಬದ್ದೇಪಲ್ಲಿ, ಚನ್ನಪ್ಪ ಕಡೇಚೂರು, ವೀರೇಶ ಸಜ್ಜನ್, ಇಬ್ರಾಹಿಂ ಚಂದಾಪೂರ, ಶಕೀಲ್ ಚಂದಾಪೂರ, ನಿಜಾಂ ಬಾಲಚೇಡ, ಮಲ್ಲರೆಡ್ಡಿ ಬದ್ದೇಪಲ್ಲಿ ಚಂದ್ರಶೇಖರ ಬದ್ದೇಪಲ್ಲಿ, ಹುಸೇನಪ್ಪ ದುಪ್ಪಲ್ಲಿ, ಹೇಮರೆಡ್ಡಿ, ರಿಯಾಜ್ ದುಪ್ಪಲ್ಲಿ ಮತ್ತು ಅಜಯರೆಡ್ಡಿ ಎಲೇರಿ, ಮಸೀಯುದ್ದೀನ್ ಆಸೀಮ್, ನಿರಂಜನ ರೆಡ್ಡಿ ನಿರಂಜನರೆಡ್ಡಿ, ಎಲೇರಿ, ಸುಭಾಷ್ ಹೊನಗೇರಾ ಮತ್ತಿತರರು ಇದ್ದರು. 
****
ಸೈದಾಪುರದಲ್ಲಿ ನಾಳೆ ಸಮಾರೋಪ
ಮೇ 16ರಂದು ಸೈದಾಪುರದಲ್ಲಿ ಪಾದಯಾತ್ರೆಯ ಸಮಾರೋಪ ಹಾಗೂ ಜೆಡಿಎಸ್ ಬೃಹತ್‌ ಸಮಾವೇಶ ನಡೆಯಲಿದೆ. ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಭರದ ಸಿದ್ಧತೆ: ಸಮಾವೇಶಕ್ಕಾಗಿ ಕೂಡ್ಲೂರು ಕ್ರಾಸ್ ಹತ್ತಿರ ಬೃಹತ್ ಪೆಂಡಾಲ್ ಹಾಕುವ ಸಿದ್ಧತೆ ನಡೆದಿದೆ. ಸುಮಾರು 50 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂಬುದು ಪಕ್ಷದ ನಿರೀಕ್ಷೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT