ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ನೇತ್ರ ತಪಾಸಣಾ ಶಿಬಿರ

Last Updated 15 ಮೇ 2017, 6:26 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ದೇಶದಲ್ಲಿ ಲಕ್ಷಾಂತರ ಜನರು ಕಣ್ಣಗಳಿಲ್ಲದೇ ಬದುಕು ಸಾಗಿಸುತ್ತಿದ್ದಾರೆ. ಅಂಥವರ ಪಾಲಿಗೆ ನೇತ್ರ ದಾನದ ಮೂಲಕ ಬೆಳಕು ನೀಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಾವಿನ ಬಳಿಕ ಕಣ್ಣು ದಾನ ಮಾಡಲು ಮುಂದಾಗಬೇಕು’ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ನಾಗರಾಜ ಮಾಕನೂರ ಹೇಳಿದರು.

ತಾಲ್ಲೂಕಿನ ಆರೇಮಲ್ಲಾಪುರ ಗ್ರಾಮದ ಕರಿಯಮ್ಮ ದೇವಿ ದೇವಸ್ಥಾನದ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಹಾಗೂ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯ ಆಶ್ರಯದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. 

ತಾಲ್ಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮರಿಯಪ್ಪ ಹಲವಾಗಲ ಮಾತನಾಡಿ, ‘ಜೀವನದಲ್ಲಿ ಹುಟ್ಟು ಮತ್ತು ಸಾವು ಖಚಿತವಾಗಿದ್ದರೂ ನಾವುಗಳು ಜೀವನದಲ್ಲಿ ಸುಖ, ಸಂಪತ್ತು,
ಆಸ್ತಿ, ಅಂತಸ್ತು ಹುಡುಕುವುದರಲ್ಲಿ ಹಾಗಳು ಗಳಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದೇವೆ.  ಪರೋಪಕಾರ ಎಂಬುದು ಗೌಣವಾಗಿವಾಗಿದೆ’ ಎಂದು ವಿಷಾದಿಸಿದರು.

ಶಿಬಿರದಲ್ಲಿ 400ಕ್ಕೂ ಅಧಿಕ ಜನರ ನೇತ್ರಗಳನ್ನು ವೈದ್ಯರು ತಪಾಸಣೆ ಮಾಡಿದರು. 162 ಜನರನ್ನು ಶಸ್ತ್ರ ಚಿಕಿತ್ಸೆಗೆ ಸೂಚಿಸಲಾಯಿತು. ನೇತ್ರ ತಜ್ಞ ಡಾ.ದೀಪು, ಡಾ.ನಾಗರಾಜ ಹಾಗೂ ಸಿಬ್ಬಂದಿ ನೇತ್ರ ತಪಾಸಣೆ ಮಾಡಿದರು. ತಾಲ್ಲೂಕಿನ ವಿವಿಧ ಭಾಗಗಳಿಂದ ನೇತ್ರ ತಪಾಸಣೆಗೆ ಜನರು ಆಗಮಿಸಿದ್ದರು.

ಗ್ರಾಮ ಪಂಚಾಯ್ತಿ ಅಧ್ಯೆಕ್ಷೆ ಹೊನ್ನಮ್ಮ ಓಲೇಕಾರ, ಸದಸ್ಯ ರಾಜ ಸುರ್ವೆ,ಜಿಲ್ಲಾ ಗವರ್ನರ್ ವಿ.ಆರ್. ಹಿರೇಗೌಡರ ಮಾತನಾಡಿದರು. ಅಶೋಕಕುಮಾರ ನಾಯಕ, ಅಶೋಕ ಸಂಕಣ್ಣನವರ, ಡಾ.ರಾಜು ಶಿರೂರ, ಡಾ.ನಾಗರಾಜ ಎಸ್.ಕೆ, ಬಸಪ್ಪ ಸುರ್ವೆ, ವಿದ್ಯಾ ಮಾಕನೂರ, ಡಾ.ಶಿವಪುತ್ರಯ್ಯ ಸಂದಿಮನಿ, ಡಾ ಬಸವರಾಜ ಪವಾರ, ಮನೋಜ ನಿಟ್ಟೂರ, ಮುದುಕನಗೌಡ ಬಸನಗೌಡ್ರ, ರುಕ್ಮಿಣಿ ಕಳಸದ, ಮೇಘರಾಜ ಪವಾರ, ಎನ್.ಎಸ್.ಪಾಟೀಲ, ನಾಗರಾಜ ನಲವಾಗಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT