ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಅಭಿವೃದ್ಧಿಗೆ ಶ್ರಮಿಸಿ: ಉಮಾಶ್ರೀ

Last Updated 15 ಮೇ 2017, 6:51 IST
ಅಕ್ಷರ ಗಾತ್ರ

ಜಮಖಂಡಿ: ನೌಕರರು ತಮ್ಮ ಆಡಳಿತಾತ್ಮಕ ಜ್ಞಾನವನ್ನು ಸಮಾಜಕ್ಕಾಗಿ ಉಪಯೋಗಿಸುವುದಾದರೆ ಹಾಗೂ ಸಮಾಜಕ್ಕೆ ಮಾರ್ಗದರ್ಶನ ಕೊಡುವುದಾದರೆ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದರು.

ಇಲ್ಲಿನ ಬಸವ ಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಅಖಿಲ ಕರ್ನಾಟಕ ಜೈನ ಅಲ್ಪಸಂಖ್ಯಾತರ ನೌಕರರ ಸಂಘದ ಬಾಗಲಕೋಟೆ ಜಿಲ್ಲಾ ಘಟಕ ಹಾಗೂ ಜಮಖಂಡಿ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರಿಗೂ ಸಮಪಾಲು ಎಲ್ಲರಿಗೂ ಸಮಬಾಳು ಎಂಬ ಸಂವಿಧಾನದ ಆಶಯದಂತೆ ಪ್ರತಿ ವರ್ಗದ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಿ ಪ್ರತಿಯೊಂದು ಸಮುದಾಯದ ಏಳಿಗೆಗೆ ಅಳಿಲು ಸೇವೆ ಸಲ್ಲಿಸಬೇಕು ಎಂದರು. ಶಾಸಕ ಸಿದ್ದು ನ್ಯಾಮಗೌಡ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಬಿಎಲ್‌ಡಿಇ ಸಂಸ್ಥೆಯ ನಿರ್ದೇಶಕ ಅರುಣಕುಮಾರ ಶಹಾ, ಧಾರವಾಡ ಕೃಷಿ ವಿವಿ ಸಿಂಡಿಕೇಟ್‌ ಸದಸ್ಯ ಸುಶೀಲಕುಮಾರ ಬೆಳಗಲಿ, ಭರತೇಶ ಕುಲಕರ್ಣಿ ಮಾತನಾಡಿದರು. ಅಖಂಡ ವಿಜಯಪುರ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ.ಎ. ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಬಿ.ಪಿ. ನ್ಯಾಮಗೌಡ ಸಂಘಟನೆ ಮತ್ತು ಧರ್ಮ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಭೂಸೇನಾ ನಿಗಮದ ಮಾಜಿ ಅಧ್ಯಕ್ಷ ಶ್ರೀಶೈಲ ದಳವಾಯಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಅಭಯಕುಮಾರ ನಾಂದ್ರೇಕರ, ಧರೆಪ್ಪ ಆಲಗೂರ, ರಾಚವಿ ಸಿಂಡಿಕೇಟ್‌ ಸದಸ್ಯ ಸಂದೀಪ ಬೆಳಗಲಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಲಲಿತಾ ನಂದೆಪ್ಪನವರ, ಪಾಸಗೌಡ ಪಾಟೀಲ, ಕೆಎಚ್‌ಡಿಸಿ ನಿರ್ದೇಶಕ ಪ್ರವೀಣ ನಾಡಗೌಡ, ಸತೀಶ ಹಜಾರೆ, ನಿರಾಣಿ ಶುಗರ್‌್್ಸನ ಸಂಗಮೇಶ ನಿರಾಣಿ, ಮಹಾಬಲ ಸದಲಗಿ, ದೇವಲ ದೇಸಾಯಿ, ದಯಾನಂದ ಶಿರಗಾರ, ಸಾತಪ್ಪ ಗೊಂಗಡಿ, ತಾ.ಪಂ. ಸದಸ್ಯ ಚಂದು ನರಸಗೊಂಡ  ಇದ್ದರು.

ಕುಂಚನೂರ ಭಜನಾ ಮಂಡಳಿ ಕಲಾವಿದರು ಪ್ರಾರ್ಥನೆ ಗೀತೆ ಹಾಡಿದರು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎ.ಬಿ.ಪಡನಾಡ ಸ್ವಾಗತಿಸಿದರು.ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಧನ್ಯಕುಮಾರ ಕುಸನಾಳ ಪ್ರಾಸ್ತಾವಿಕ ವಾಗಿ ಮಾತನಾಡಿದರು.ನೇಮಿನಾಥ ನ್ಯಾಮಗೌಡ, ಭರತೇಶ ಲೋಕಾಪುರ ನಿರೂಪಿಸಿದರು. ಸಂಘಟನೆಯ ದಾನಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT