ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲಾತಿಯ ಏಕರೂಪ ನೀತಿಗೆ ಒತ್ತಾಯ

Last Updated 15 ಮೇ 2017, 6:58 IST
ಅಕ್ಷರ ಗಾತ್ರ

ಶಿರಸಿ: ಜೈವಿಕ ಸಂಪನ್ಮೂಲಗಳ ಬಳಕೆ ಮತ್ತು ದಾಖಲಾತಿಯಲ್ಲಿ ಏಕರೂಪತೆ ಉಳಿಸಿಕೊಳ್ಳಲು ಇಡೀ ದೇಶಕ್ಕೆ ಅನ್ವಯ ವಾಗುವ ಏಕನೀತಿ ಜಾರಿಗೊಳಿಸಬೇಕು ಎಂದು ‘ಜೈವಿಕ ಸಂಪನ್ಮೂಲ ಸದ್ಬಳಕೆ ಮತ್ತು ಸಂರಕ್ಷಣೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಒತ್ತಾಯಿಸಿದೆ.

ಭಾನುವಾರ ಇಲ್ಲಿ ಮುಕ್ತಾಯಗೊಂಡ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ವಿವಿಧ ವಿಷಯ ಗಳನ್ನು ಚರ್ಚಿಸಲಾಯಿತು. ಜೈವಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ವಿಸ್ತರಣೆಯ ಉದ್ದೇಶದಿಂದ ಜೈವಿಕ ಸಂಪನ್ಮೂಲಗಳ ನಕಾಶೆ ತಯಾರಿ ಮತ್ತು ದಾಖಲಾತಿ ಮಾಡಬೇಕು. ಹಿಮಾಲಯ ದಂತೆ ಪಶ್ಚಿಮಘಟ್ಟ ಸಹ ಜೀವ ವೈವಿಧ್ಯತೆಯ ವಿಶೇಷ ತಾಣವಾಗಿದೆ.

ಜೀವವೈವಿಧ್ಯತೆ ಅವಸಾನದತ್ತ ಸಾಗು ತ್ತಿರುವ ಕಾಲಘಟ್ಟದಲ್ಲಿ ಇದರ ಸಂರಕ್ಷಣೆ ಅಗತ್ಯವಿದೆ. ಈ ದೃಷ್ಟಿಯಿಂದ ಕಂಪ್ಯೂಟರ್ ಹಾಗೂ ಬಾಹ್ಯಾಕಾಶ ವಿಜ್ಞಾನ ವ್ಯವಸ್ಥೆ ಬಳಸಿಕೊಂಡು ಜೈವಿಕ ಸಂಪನ್ಮೂಲಗಳ ನಕಾಶೆಯನ್ನು ವೇಗವಾಗಿ ತಯಾರಿಸಬೇಕು ಎಂದು ತಜ್ಞರು ಒತ್ತಾಯಿಸಿದರು. ಪಶ್ಚಿಮಘಟ್ಟದ ಜೀವವೈವಿಧ್ಯ ಸಂರಕ್ಷಣೆ, ಸಂಪನ್ಮೂಲ ಗಳ ನಕ್ಷೆ ತಯಾರಿ, ಸದ್ಬಳಕೆ ಮಾಡುವ ಸಂಬಂಧ ಶಿರಸಿಯಲ್ಲಿ ಸಂಶೋಧನಾ ಕೇಂದ್ರದ ಅಗತ್ಯವಿದೆ ಎಂದು ಸ್ಥಳೀಯ ಪ್ರಮುಖರು ತಿಳಿಸಿದರು.

ಜೈವಿಕ ಸಂಪನ್ಮೂಲ ಬಳಕೆ ಮತ್ತು ದಾಖಲಾತಿಯಲ್ಲಿ ಪ್ರಸ್ತುತ ವಿವಿಧ ರಾಜ್ಯಗಳಲ್ಲಿ ಪ್ರತ್ಯೇಕ ನೀತಿ, ನಿಯಮಾವಳಿಗಳು ಚಾಲ್ತಿಯಲ್ಲಿವೆ. ಇದರಲ್ಲಿ ಏಕರೂಪತೆ ತಂದರೆ ಸಂಪನ್ಮೂಲಗಳ ಸಂರಕ್ಷಣೆಗೆ ಸಹಾಯವಾಗುತ್ತದೆ. ಔಷಧ ಸಸ್ಯಗಳ ಉತ್ಪಾದನೆ, ಮಾರಾಟ ಕುರಿತಂತೆ ತಳಮಟ್ಟದ ಜನರಿಗೆ ಲಾಭಾಂಶ ಕಡಿಮೆಯಾಗುತ್ತಿದೆ.

ಈ ಉದ್ದೇಶದಿಂದ ಸ್ಥಳೀಯ ಜನರಿಗೆ ಲಾಭಾಂಶ ನೀಡುವ ಅಗತ್ಯವಿದೆ. ವನ್ಯ ಸಂಪನ್ಮೂಲ, ಕೃಷಿ ಸಂಬಂಧಿ ಸಂಪನ್ಮೂಲ, ಕೀಟ ಮತ್ತು ಸೂಕ್ಷ್ಮಾಣು ಜೀವಿ ಸಂಪನ್ಮೂಲಗಳನ್ನು ಒಳಗೊಂಡ ಜೈವಿಕ ಸಂಪನ್ಮೂಲದ ಉಪಯೋಗ ಮತ್ತು ಅವುಗಳ ಸ್ಥಿತಿಗತಿಗಳ ಕುರಿತು ತಜ್ಞರು ಎರಡು ದಿನಗಳ ಕಾಲ ಚರ್ಚಿಸಿದರು.

ಅಸ್ಸಾಂ, ಮಿಜೋರಾಂ, ಮೇಘಾಲಯ, ರಾಜಸ್ತಾನ, ಗುಜರಾತ್, ಕೇರಳ, ತಮಿಳುನಾಡು, ಉತ್ತರಾಖಂಡ, ಸೇರಿದಂತೆ 15 ರಾಜ್ಯಗಳ 104 ವಿಜ್ಞಾನಿಗಳು ಭಾಗವಹಿಸಿದ್ದರು. ಅಮೆರಿಕ ಟೆಕ್ಸಾಸ್‌ನ ಎ ಆ್ಯಂಡ್ ಎಂ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಬಿ.ಎಸ್. ಪಾಟೀಲ್, ವಿಜ್ಞಾನಿ ಡಾ.ಎನ್.ಕೆ. ಕೃಷ್ಣಕುಮಾರ್, ಪ್ರಗತಿಪರ ಕೃಷಿಕ ದೇವೇಂದ್ರಪ್ಪ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಿ.ಎಂ. ಸಾಲಿಮಠ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಿ.ಪಿ.ಬಿರಾದಾರ, ಕಾರ್ಯಕ್ರಮ ಸಂಘಟಕ ಆರ್.ವಾಸುದೇವ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT