ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ’

Last Updated 15 ಮೇ 2017, 7:08 IST
ಅಕ್ಷರ ಗಾತ್ರ

ಬೈಲಹೊಂಗಲ: ‘ಪಟ್ಟಣದ ಎಲ್ಲ ವಾರ್ಡಿಗಳಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ’ ಎಂದು ಪುರಸಭೆ ಅಧ್ಯಕ್ಷ ರಾಜು ಜನ್ಮಟ್ಟಿ ಹೇಳಿದರು. ಪಟ್ಟಣದ 8ನೇ ವಾರ್ಡ್‌ನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.‌

‘ಪುರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳ ಎಲ್ಲ ಓಣಿಗಳಲ್ಲಿ ರಸ್ತೆ ಡಾಂಬರೀಕರಣ, ಕುಡಿಯುವ ನೀರು, ಬೆಳಕಿನ ವ್ಯವಸ್ಥೆ, ಸ್ವಚ್ಛತಾ ಕಾರ್ಯ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಹಗಲಿರುಳು ಶ್ರಮಿಸಲಾಗುತ್ತಿದೆ. ಗುತ್ತಿಗೆ ದಾರರು ಗುಣಮಟ್ಟದ ರಸ್ತೆ ನಿರ್ಮಿಸ ಬೇಕು’ ಎಂದರು.

ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಪರಿಸರ ಎಂಜಿನಿಯರ್ ಸತೀಶ ಕಜ್ಜಿಡೋಣಿ, ಎಂಜಿನಿಯರ್ ಎಸ್.ಬಿ.ಪಾಟೀಲ, ಗುತ್ತಿಗೆದಾರ ಉಮೇಶ ರಾಚನ್ನವರ, ಪುರಸಭೆ ಸದಸ್ಯೆ ಸುಶೀಲಾ ಹೊಂಗಲ, ಮಹಾಂತೇಶ ಮತ್ತಿಕೊಪ್ಪ, ಆನಂದ ಕುಲಕರ್ಣಿ, ಈಶ್ವರಗೌಡ ಇನಾಮದಾರ, ಎಸ್.ಕೆ. ಸಿದ್ಧನಾಯ್ಕರ, ನಿಂಗಪ್ಪ ಚಿಕ್ಕಬಾಗೇ ವಾಡಿ, ಶಿವಾನಂದ ಸೊಲಬಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT