ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಕೋಟೆಗೆ ಸಿಸಿಟಿವಿ ಕಣ್ಗಾವಲು

ಅಕ್ಷರ ಗಾತ್ರ

ಬಳ್ಳಾರಿ: ಇಲ್ಲಿನ ಬಳ್ಳಾರಿ ಕೋಟೆಯಲ್ಲಿ ನಡೆಯುವ ಪ್ರತಿಯೊಂದು ಚಲನವಲನ ಗಳ ಮೇಲೆ ಹದ್ದಿನ ಕಣ್ಣಿಡಲು ಅತ್ಯಾಧು ನಿಕ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳ ವಡಿಸಲಾಗಿದೆ.
ಕೋಟೆಯ ಟಿಕೆಟ್‌ ಕೌಂಟರ್‌ ಮುಂಭಾಗ, ಅದರ ಎಡಬದಿಯಲ್ಲಿ, ಮುಖ್ಯ ಪ್ರವೇಶ ದ್ವಾರ ಹಾಗೂ ಕೋಟೆ ಹತ್ತುವ ಮಾರ್ಗ ಮಧ್ಯದಲ್ಲಿ ಹೀಗೆ ಒಟ್ಟು ನಾಲ್ಕು ಕಡೆಗಳಲ್ಲಿ ಕ್ಯಾಮೆರಾಗಳನ್ನು ಹಾಕಲಾಗಿದೆ. 

ಇಡೀ ಕೋಟೆಯಲ್ಲಿ ಒಬ್ಬ ಗೃಹರಕ್ಷಕ ದಳದ ಸಿಬ್ಬಂದಿ ಬಿಟ್ಟರೆ ಬೇರೆ ಯಾರೂ ಇಲ್ಲ. ಕೋಟೆಯ ಮೇಲ್ಭಾಗದಲ್ಲಿ ಒಂದು ಕಡೆ ಕ್ಯಾಮೆರಾ ಇತ್ತು. ಆದರೆ, ಅದು ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ.

ಕೋಟೆಯ ಯಾವ ಭಾಗದಲ್ಲಿ ಏನು ನಡೆಯುತ್ತಿದೆ ಎನ್ನುವುದು ಗೊತ್ತಾಗು ತ್ತಿರಲಿಲ್ಲ. ಸಾರ್ವಜನಿಕರ ಸುರಕ್ಷತೆ ಹಾಗೂ ಅಕ್ರಮ ತಡೆಯುವ ಉದ್ದೇಶ ದಿಂದ ಭಾರತೀಯ ಪುರಾತತ್ವ ಸರ್ವೇ ಕ್ಷಣ ಇಲಾಖೆಯು ವಾರದ ಹಿಂದೆಯಷ್ಟೇ ಕ್ಯಾಮೆರಾಗಳನ್ನು ಅಳವಡಿಸಿದೆ. ಕೋಟೆ ಯಲ್ಲಿ ಕ್ಯಾಮೆರಾಗಳನ್ನು ಹಾಕಿ, ನಿಗಾ ಇಡುವ ವ್ಯವಸ್ಥೆ ಆಗಬೇಕೆಂದು ಈ ಹಿಂದೆ ಹಲ ಸಂಘಟನೆಗಳು ಒತ್ತಾಯಿಸಿದ್ದವು.

‘ಕೋಟೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಗಳನ್ನು ಅಳವಡಿಸಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿತ್ತು. ಹಾಗಾಗಿ, ವಾರದ ಹಿಂದೆ ಕ್ಯಾಮೆರಾ ಅಳವಡಿಸಿದ್ದೇವೆ. ವಿಶಾಲವಾದ ಕೋಟೆ ಯಲ್ಲಿ ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗೃಹರಕ್ಷಕ ಸಿಬ್ಬಂದಿ ಇದ್ದಾರೆ. ಎಲ್ಲಿ ಏನಾಗುತ್ತಿದೆ ಎಂದು ನೋಡಲು ಅಷ್ಟು ಜನಕ್ಕೆ ಆಗುತ್ತಿರಲಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹಿರಿಯ ಅಧಿ ಕಾರಿ ಭಾನುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋಟೆಗೆ ಸೇರಿದ ಜಾಗ ಒತ್ತುವರಿ ಯಾಗದಂತೆ ಕ್ರಮ ತೆಗೆದುಕೊಳ್ಳ ಬೇಕೆಂದು ಸಂಸದ ಬಿ. ಶ್ರೀರಾಮುಲು ಅವರು ಇಲಾಖೆಗೆ ತಿಳಿಸಿದ್ದಾರೆ. ಹಾಗಾಗಿ ಕೋಟೆಯ ಸುತ್ತಲೂ ಕಾಂಪೌಂಡ್‌ ನಿರ್ಮಿ ಸುವ ಯೋಜನೆ ಇದೆ. ಅದಕ್ಕಾಗಿ ಶೀಘ್ರದಲ್ಲೇ ಪ್ರಸ್ತಾವ ಕಳುಹಿಸಿಕೊಡ ಲಾಗುವುದು’ ಎಂದರು.

‘ನಗರದಲ್ಲಿ ಅಪರೂಪದ ಪ್ರವಾಸಿ ಸ್ಥಳ ಆಗಿರುವುದರಿಂದ ಕೋಟೆಗೆ ವಿವಿಧ ಕಡೆಗಳಿಂದ ನಿತ್ಯ ಪ್ರವಾಸಿಗರು ಬರು ತ್ತಾರೆ. ಅಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಮಾಹಿತಿ ಕೇಂದ್ರ ತೆರೆಯುವ ಯೋಚನೆಯೂ ಇದೆ’ ಎಂದರು.

‘ಕೋಟೆಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಗಳನ್ನು ಅಳವಡಿಸಿರುವುದು ಸ್ವಾಗ ತಾರ್ಹ. ಈ ಕೆಲಸ ಎಂದೋ ಆಗ ಬೇಕಿತ್ತು. ತಡವಾಗಿಯಾದರೂ ಇಲಾಖೆ ಎಚ್ಚೆತ್ತುಕೊಂಡಿದ್ದು ಒಳ್ಳೆಯದು’ ಎನ್ನು ತ್ತಾರೆ ಸ್ಥಳೀಯ ನಿವಾಸಿ ಪಂಪನಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT