ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ ಕೆರೆ; ರೈತರಿಂದ ಹೂಳು ಸಾಗಣೆ

Last Updated 15 ಮೇ 2017, 7:18 IST
ಅಕ್ಷರ ಗಾತ್ರ

ಹೊಸಪೇಟೆ: ಭಾನುವಾರ ಸತತ ಎರ ಡನೇ ದಿನವೂ ರೈತರು ತಾಲ್ಲೂಕಿನ ಕಮಲಾಪುರ ಕೆರೆಯಿಂದ ಹೂಳು ಕೊಂಡೊಯ್ದರು. ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡಿರುವ 476 ಎಕರೆ ಪ್ರದೇಶ ವಿಸ್ತೀರ್ಣದ ಕೆರೆಗೆ ಸೇರಿದ ಜಾಗ ಒತ್ತುವರಿಯಾಗಿತ್ತು. ಜನ ಸಂಗ್ರಾಮ ಪರಿಷತ್ತು ನೀಡಿದ ದೂರಿನ ಮೇರೆಗೆ ಜಿಲ್ಲಾಧಿಕಾರಿ ಕೆರೆಯ ಸರ್ವೇ ನಡೆಸುವಂತೆ ಸೂಚಿಸಿದ್ದರು.

ಅದರಂತೆ ಇತ್ತೀಚೆಗೆ ಕೆರೆಯ ಸಮೀಕ್ಷೆ ನಡೆಸಿ, ಒತ್ತುವರಿ ತೆರವುಗೊಳಿಸ ಲಾಗಿತ್ತು. ಅಷ್ಟೇ ಅಲ್ಲ, ಕೆರೆಯ ಸುತ್ತಲೂ ಗಡಿ ಗುರುತು ಕಲ್ಲುಗಳನ್ನು ನೆಡಲಾಗಿತ್ತು. ಕೆರೆಯ ಸುತ್ತ ಕಂದಕ ನಿರ್ಮಿಸಿ, ಸಸಿಗಳನ್ನು ನೆಡುವಂತೆ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರು ಇತ್ತೀಚೆಗೆ ನಡೆದ ಸಭೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿ ಗಳಿಗೆ ಸೂಚನೆ ಕೊಟ್ಟಿದ್ದರು.

ಕೆರೆ ಸಂಪೂರ್ಣ ಬತ್ತಿ ಹೋಗಿರು ವುದರಿಂದ ರೈತರು ಕೆರೆಯಲ್ಲಿ ಜೆ.ಸಿ.ಬಿ ಯಂತ್ರಗಳ ಸಹಾಯದಿಂದ ಟ್ರ್ಯಾಕ್ಟರ್‌ ಗಳ ಮೂಲಕ ಮಣ್ಣು ಕೊಂಡೊಯ್ಯು ತ್ತಿದ್ದಾರೆ. ಕೆರೆಯಲ್ಲಿ ನಾಲ್ಕರಿಂದ ಐದು ಅಡಿಗಳಷ್ಟು ಹೂಳು ತುಂಬಿದೆ.

ತಮ್ಮ ಹೊಲಗಳಿಗೆ ಹೂಳು ಕೊಂಡೊಯ್ಯಲು ಅನುಮತಿ ನೀಡ ಬೇಕೆಂದು ಇತ್ತೀಚೆಗೆ ರೈತರು ನೀರಾ ವರಿ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ, ಇಲಾಖೆಯಿಂದ ಅನುಮತಿ ಸಿಕ್ಕಿದೆಯೋ ಇಲ್ಲವೋ ಗೊತ್ತಾಗಿಲ್ಲ. ಈ ಕುರಿತು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರನ್ನು ಸಂಪರ್ಕಿಸಿದರೆ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT