ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಸ್ಪತ್ರೆ: ಜೆನರಿಕ್‌ ಔಷಧ ಮಳಿಗೆ ಶೀಘ್ರ

Last Updated 15 ಮೇ 2017, 7:28 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲಾ ಆಸ್ಪತ್ರೆಗೆ ಬರುವ ಬಡ ಜನರಿಗೆ ಜೆನೆರಿಕ್‌ ಔಷಧ ಮಳಿಗೆ, ರಿಯಾಯಿತಿ ದರದಲ್ಲಿ ಉಪಾಹಾರ–ಊಟ ವ್ಯವಸ್ಥೆಯುಳ್ಳ ಕ್ಯಾಂಟೀನ್‌ ಸೌಲಭ್ಯ, ಹಣ್ಣಿನಂಗಡಿ ಇನ್ನು ಒಂದೇ ಸೂರಿನಡಿ ದೊರಕಲಿದೆ.

ಕರ್ನಾಟಕ ಆರೋಗ್ಯ ವ್ಯವಸ್ಥೆ ಸುಧಾರಣೆ ಮತ್ತು ಅಭಿವೃದ್ಧಿ ಯೋಜನೆ (ಕೆಎಚ್‌ಎಸ್‌ ಆರ್‌ಡಿಪಿ: ಕರ್ನಾಟಕ ಹೆಲ್ತ್‌ ಸಿಸ್ಟಂ ರಿಫಾರ್ಮ್ಸ್ ಅಂಡ್‌ ಡೆವಲಪ್‌ಮೆಂಟ್‌ ಪ್ರಾಜೆಕ್ಟ್‌) ಅಡಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯಾ ಆರಂಭಗೊಂಡಿದ್ದು, ಔಷಧಿ ಮತ್ತು ಉಪಾಹಾರಕ್ಕಾಗಿ ಆಸ್ಪತ್ರೆಯ ಹೊರಗಿನ ಔಷಧ ಅಂಗಡಿ ಮತ್ತು ಹೋಟೆಲ್‌ಗಳ ಮೇಲಿನ ಅವಲಂಬನೆ ತಪ್ಪಲಿದೆ,

₹ 37 ಲಕ್ಷ: ಯೋಜನೆ ಅಡಿ ₹ 37 ಲಕ್ಷ ವೆಚ್ಚದಲ್ಲಿ ಔಷಧ ಮಳಿಗೆ, ಕ್ಯಾಂಟೀನ್‌ ಮತ್ತು ಶೌಚಾಲಯ ವನ್ನು ಒಂದೇ ಸೂರಿನಡಿ ನಿರ್ಮಾಣ ಮಾಡಲಾ ಗುತ್ತಿದ್ದು, ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಏನಿದು ಯೋಜನೆ: ವಿಶ್ವಬ್ಯಾಂಕ್‌ ಅನುದಾನದ ಅಡಿಯಲ್ಲಿ 2007ರಲ್ಲಿ ಆರಂಭವಾದ ಯೋಜನೆ ರಾಜ್ಯದ ನಿರ್ಲಕ್ಷ್ಯಿತ ಜನಸಮುದಾಯಕ್ಕೆ ಆರೋಗ್ಯ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸುವಂತಂಥ ವಾತಾವರಣ ನಿರ್ಮಿಸುವ ಉದ್ದೇಶ ಹೊಂದಿದೆ. ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಹಣಕಾಸು ಪೂರೈಸಿ ಆರೋಗ್ಯ ಸೇವೆಗಳ ವಿಲೇವಾರಿ ಪದ್ಧತಿ ಯನ್ನು ಸುಧಾರಿಸುವ ಉದ್ದೇಶವಿದೆ ಎಂದರು.

ಆಸ್ಪತ್ರೆಯಲ್ಲಿ ನಾಲ್ಕು ಸ್ನಾತಕೋತ್ತರ ಕೋರ್ಸ್‌ ಗಳನ್ನು ಆರಂಭಿಸುವ ಸಲುವಾಗಿ ಮೂಲಸೌಕರ್ಯ ಗಳ ಪರಿಶೀಲನೆ ಕಾರ್ಯ ಈಗಾಗಲೇ ನಡೆದಿದೆ. ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಸದಸ್ಯೆಯೊ ಬ್ಬರು ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದರು.  ಅದರ ಬೆನ್ನಿಗೇ, ಔಷಧ ಮಳಿಗೆ ಕಾರ್ಯವೂ ಆರಂಭವಾಗಿರುವುದರಿಂದ, ಏಕಕಾಲಕ್ಕೆ ವಿದ್ಯಾ ರ್ಥಿಗಳಿಗೆ ಮತ್ತು ರೋಗಿಗಳಿಗೆ ಅನುಕೂಲಕರ ವಾದ ವಾತಾವರಣ ನಿರ್ಮಾಣವಾಗಲಿದೆ ಎಂದು ಬಸರೆಡ್ಡಿ ಅಭಿಪ್ರಾಯಪಟ್ಟರು.

‘ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಕುಟುಂಬದವರು ಹೊರಗೆ ಸಿಗುವ ತಳ್ಳುಬಂಡಿ ಹೋಟೆಲ್‌ಗಳ ಗುಣಮಟ್ಟವಿಲ್ಲದ ಆಹಾರವನ್ನೇ ಅವಲಂಬಿಸಬೇಕಿದೆ. ಆಸ್ಪತ್ರೆ ಆವರಣದಲ್ಲೇ ಕ್ಯಾಂಟಿನ್‌ ನಿರ್ಮಾಣವಾದರೆ ಹೆಚ್ಚಿನ ಅನುಕೂಲ ವಾಗುತ್ತದೆ. ಔಷಧಗಳು ಕಡಿಮೆ ದರದಲ್ಲಿ ದೊರ ಕುವುದರಿಂದ ಬಡವರ ಖರ್ಚು ಕಡಿಮೆಯಾಗು ತ್ತದೆ’ ಎಂದು ಗಾಂಧಿನಗರದ ಮಂಜುನಾಥ ಅಭಿಪ್ರಾಯಪಟ್ಟರು.

*

ರಾಷ್ಟ್ರಮಟ್ಟದಲ್ಲಿ ಅಧಿಕೃತ ಗೊಳಿಸಿರುವ ಔಷಧಗಳ ಪಟ್ಟಿಯಲ್ಲಿ ಇರುವ ಔಷಧಗಳು ಗರಿಷ್ಠ ಮಾರಾಟ ದರ ಕ್ಕಿಂತ ಕಡಿಮೆ ದರದಲ್ಲಿ ಜನರಿಗೆ ದೊರಕಲಿವೆ
ಡಾ.ಬಸರೆಡ್ಡಿ
ಜಿಲ್ಲಾ ಶಸ್ತ್ರಚಿಕಿತ್ಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT