ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಸಾಲ ಬಡ್ಡಿದರ ಶೇ 0.3ರಷ್ಟು ಕಡಿತಗೊಳಿಸಿದ ಐಸಿಐಸಿಐ, ಎಚ್‌ಡಿಎಫ್‌ಸಿ

Last Updated 15 ಮೇ 2017, 17:07 IST
ಅಕ್ಷರ ಗಾತ್ರ

ಮುಂಬೈ: ಕಡಿಮೆ ಬೆಲೆಯ ಮನೆ ಖರೀದಿಗೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಗೃಹ ಸಾಲದ ಬಡ್ಡಿದರದಲ್ಲಿ ಕಡಿತ ಮಾಡಿದ ಬೆನ್ನಲ್ಲೇ ಐಸಿಐಸಿಐ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಸೋಮವಾರ ಶೇಕಡಾ 0.3ರಷ್ಟು ಬಡ್ಡಿದರ ಕಡಿತ ಮಾಡಿವೆ.

₹30 ಲಕ್ಷದ ವರೆಗಿನ ನೂತನ ಗೃಹ ಸಾಲದ ಬಡ್ಡಿದರ ಮಹಿಳೆಯರಿಗೆ ಶೇ 8.35ಕ್ಕೆ, ಇತರರಿಗೆ ಶೇ 8.40ಕ್ಕೆ ಇಳಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ ತಿಳಿಸಿದೆ. 

ಎಲ್ಲಾ ವರ್ಗದವರ ₹30 ಲಕ್ಷದಿಂದ ₹75 ಲಕ್ಷ ವರೆಗಿನ ಗೃಹ ಸಾಲದ ಮೇಲಿನ ಬಡ್ಡಿದರ(ಶೇ 8.50)ದಲ್ಲಿ ಯಾವುದೇ ಬದಲಾವಣೆ ಇಲ್ಲ. ₹75 ಲಕ್ಷಕ್ಕೂ ಮೇಲ್ಪಟ್ಟ ಗೃಹ ಸಾಲದ ಬಡ್ಡಿದರ ಶೇ8.75ರಿಂದ ಶೇ 8.55ಕ್ಕೆ ಇಳಿಕೆಯಾಗಿದೆ ಎಂದು ಬ್ಯಾಂಕ್ ಹೇಳಿದೆ.

ಹೊಸ ದರಗಳು ಸೋಮವಾರದಿಂದಲೇ ಅನ್ವಯವಾಗಲಿವೆ ಎಂದು ತಿಳಿಸಿದೆ.

ಇದಕ್ಕೂ ಮುನ್ನ ರಾಷ್ಟ್ರದ ಮುಂಚೂಣಿ ಬ್ಯಾಂಕ್ ಐಸಿಐಸಿಐ ಬ್ಯಾಂಕ್‌  ₹ 30 ಲಕ್ಷ ವರೆಗಿನ ಗೃಹ ಸಾಲದ ಮೇಲಿನ ಬಡ್ಡಿದರದಲ್ಲಿ ಶೇ 0.3ರಷ್ಟು ಕಡಿತ ಮಾಡಿದೆ.

ಮಹಿಳಾ ಗ್ರಾಹಕರು ಶೇ 8.35ರಷ್ಟು ಬಡ್ಡಿದರ ಹಾಗೂ ಇತರರು ಶೇ 8.40ರಷ್ಟು ಬಡ್ಡಿದರಲ್ಲಿ ಗೃಹಸಾಲ ಪಡೆಯಲಿದ್ದಾರೆ ಎಂದು ಬ್ಯಾಂಕ್‌ ಹೇಳಿದೆ.

ಪರಿಷ್ಕೃತ ಬಡ್ಡಿದರ ಸದ್ಯ ಮಾರುಕಟ್ಟೆಯಲ್ಲಿ ಗೃಹ ಸಾಲಕ್ಕೆ ಇರುವ ಖಾಸಗಿ ಬ್ಯಾಂಕ್‌ಗಳಲ್ಲಿಯೇ ಅತ್ಯಂತ ಕನಿಷ್ಠ ಬಡ್ಡಿದರ ಇದಾಗಿದೆ ಎಂದು ವಿಶ್ಲೇಷಿಸಿದ್ದಾರೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಕಡಿಮೆ ಬೆಲೆಯ ಮನೆ ಖರೀದಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈಚೆಗಷ್ಟೇ ಗೃಹ ಸಾಲದ ಬಡ್ಡಿದರದಲ್ಲಿ ಶೇ 0.25 ರಷ್ಟು ಕಡಿತ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT