ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್ಸಿಡಿ ಸಕ್ಕರೆ ಮತ್ತೆ ಜಾರಿ

ಕೇಂದ್ರ ಸಚಿವ ಸಂಪುಟದ ಮಹತ್ವದ ನಿರ್ಧಾರ: ಪಾಸ್ವಾನ್‌
Last Updated 15 ಮೇ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಅಂತ್ಯೋದಯ ಅನ್ನ ಯೋಜನೆ(ಎಎವೈ) ವ್ಯಾಪ್ತಿಗೆ ಬರುವ ಬಡವಾತಿ ಬಡವರಿಗೆ ಸಾರ್ವಜನಿಕ ಪಡಿತರ ಅಂಗಡಿಗಳ ಮೂಲಕ ಅಗ್ಗದ ದರದಲ್ಲಿ 1 ಕೆ.ಜಿ. ಸಕ್ಕರೆ ವಿತರಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಮರು ಜಾರಿಗೊಳಿಸಲು ನಿರ್ಧರಿಸಿದೆ.

ಪಡಿತರ ಅಂಗಡಿಗಳ ಮೂಲಕ ₹ 13.50ರ ದರದಲ್ಲಿ 1 ಕೆ. ಜಿ ಸಕ್ಕರೆ ವಿತರಿಸಲಾಗುವುದು. ಈ ಉದ್ದೇಶಕ್ಕೆ ರಾಜ್ಯ ಸರ್ಕಾರಗಳು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸುವ ಪ್ರತಿ ಕೆ.ಜಿ ಸಕ್ಕರೆಗೆ ಕೇಂದ್ರ ಸರ್ಕಾರವು ₹ 18.50ರಷ್ಟು ಸಬ್ಸಿಡಿ ನೀಡಲಿದೆ.

ಬಡವಾತಿ ಬಡವರು ಮತ್ತು ಇತರ ಫಲಾನುಭವಿಗಳಿಗೆ ಪಡಿತರ ಮೂಲಕ ವಿತರಿಸುವ ಸಕ್ಕರೆ ಸಬ್ಸಿಡಿ ಸೌಲಭ್ಯವನ್ನು ಈ ವರ್ಷದ ಮಾರ್ಚ್‌ ತಿಂಗಳಿನಿಂದ ನಿಲ್ಲಿಸಲಾಗಿತ್ತು. ಆದರೆ, ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಮತ್ತು ಕೆಲ ರಾಜ್ಯ ಸರ್ಕಾರಗಳು ಈ ಯೋಜನೆ ಮುಂದುವರೆಸಲು ಆಸಕ್ತಿ ತೋರಿಸಿದ್ದವು.

‘ಈ ಸಂಬಂಧ ಕೇಂದ್ರ ಸಚಿವ ಸಂಪುಟವು ನಿರ್ಧಾರ ಕೈಗೊಂಡಿದೆ’ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT