ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಉದ್ಯಮಿಯಿಂದ ಹುಟ್ಟೂರಿಗೆ ಕೊಡುಗೆ

Last Updated 16 ಮೇ 2017, 5:44 IST
ಅಕ್ಷರ ಗಾತ್ರ

ಹೆಬ್ರಿ: ಅನ್ನ ಅಕ್ಷರ ಆರೋಗ್ಯ ದಾಸೋಹದ ಮೂಲಕ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರ ದಲ್ಲಿ  ಸಮಾಜ ಸೇವೆ ಮಾಡುತ್ತಿರುವ ಮುಂಬೈ ಉದ್ಯಮಿ ಮುದ್ರಾಡಿ ಸಿರಿ ಬೀಡು ದಿವಾಕರ ಶೆಟ್ಟಿಯವರಿಗೆ ಸಿರಿಬೀಡಿನಲ್ಲಿ ಭಾನುವಾರ ಷಷ್ಟ್ಯಬ್ದ ಅಭಿನಂದನಾ ಸಮಾರಂಭ ನಡೆಯಿತು.

ಮುದ್ರಾಡಿ ಗಣಪತಿ ದೇವಸ್ಥಾನ ದಿಂದ ಸಿರಿಬೀಡಿನ ಕಾರ್ಯಕ್ರಮ ವೇದಿಕೆ ವರೆಗೆ ಶೆಟ್ಟಿ ದಂಪತಿಯನ್ನು ವಾದ್ಯ ಘೋಷಗಳಿಂದ ಕರೆತರಲಾಯಿತು.

ಕೋಡಿ ಮಠಾಧೀಶರ ಸಹಿತ 12 ಸ್ವಾಮೀಜಿಗಳು ಮೆರವಣಿಗೆಗೆ ವಿಶೇಷ ಧಾರ್ಮಿಕ ವೈಭವ ನೀಡಿದರು. ಶೆಟ್ಟಿ ದಂಪತಿಯನ್ನು ಹುಟ್ಟೂರು ಮತ್ತು ಮುಂಬೈ ಅಭಿಮಾನಿಗಳು, ವಿವಿಧ ಮಠಾಧೀಶರು, ಮುದ್ರಾಡಿ ಪ್ರೌಢಶಾಲೆ, ಪರಿಸರದ ಸರ್ಕಾರಿ ಶಾಲೆ, ಸಂಘ ಸಂಸ್ಥೆಗಳು ಮತ್ತು ಅಭಿಮಾನಿಗಳು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ದಿವಾಕರ ಶೆಟ್ಟಿ ವಿಶೇಷ ಕಾರ್ಯಕ್ರಮ ಏರ್ಪಡಿಸಿದ ಸಮಿತಿಗೆ ಅಭಿನಂದನೆ ಸಲ್ಲಿಸಿ, ‘ಉದ್ಯಮ ಮುಂಬೈನಲ್ಲಿದ್ದರೂ ಹುಟ್ಟೂರು ಮುದ್ರಾಡಿಯೊಂದಿಗೆ ನನಗೆ 4 ಪೀಳಿಗೆಯ ನಂಟು ಇದೆ, ಹುಟ್ಟೂರಿನ ಋಣ ತೀರಿಸುವುದು ನನ್ನ ಕರ್ತವ್ಯ, ಹಾಗಾಗಿ ಷಷ್ಟ್ಯಬ್ದದ ಸ್ಮರಣೆಗಾಗಿ ಮುದ್ರಾಡಿಯ 8ಮಠ, 2 ದೇವಸ್ಥಾನಗಳ ಜೀರ್ಣೋದ್ಧಾರ, 2017 ಮೇ 14 ರಿಂದ ಮುದ್ರಾಡಿ ಗ್ರಾಮದಲ್ಲಿ ಜನಿಸುವ ಒಟ್ಟು 60 ಹೆಣ್ಣು ಮಕ್ಕಳ ಹೆಸರಲ್ಲಿ ತಲಾ ₹10 ಸಾವಿರ ಠೇವಣಿ, ಮುದ್ರಾಡಿಯಲ್ಲಿ ಸಕಲ ವ್ಯವಸ್ಥೆಯ ಆಸ್ಪತ್ರೆ ನಿರ್ಮಾಣ, ಪ್ರೌಢ ಶಾಲೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗ ಸ್ಥಾಪನೆ ಮತ್ತು ಮುದ್ರಾಡಿ ಗ್ರಾಮವನ್ನು ಆದರ್ಶ ಗ್ರಾಮವಾಗಿ ರೂಪಿಸಲು ಗರಿಷ್ಠ ಮಟ್ಟದ ನೆರವು ನೀಡುತ್ತೇನೆ’ ಎಂದು ಕೊಡುಗೆಗಳನ್ನು ಪ್ರಕಟಿಸಿದರು.

ಅಭಿನಂದನ ಭಾಷಣ ಮಾಡಿದ ವಿದ್ವಾಂಸ ಡಾ.ಕಬ್ಬಿನಾಲೆ ವಸನ್ತ ಭಾರದ್ವಾಜ್, ‘ ತಂದೆ ನಾರಾಯಣ ಶೆಟ್ಟರು 12 ಹೋಟೆಲುಗಳ ಸರದಾರ ನಾಗಿ ಡಜನ್ ನಾರಾಯಣ ಶೆಟ್ಟರೆಂದು ಖ್ಯಾತರಾದರೆ, ಮಗ ದಿವಾಕರ ಶೆಟ್ಟಿಯವರು ಸೃಜನಶೀಲ ವ್ಯಕ್ತಿತ್ವ ಮತ್ತು ಚಿಂತನೆಗಳ ಮೂಲಕ ಸೃಜನ್ ದಿವಾಕರ ಶೆಟ್ಟಿಯಾಗಿದ್ದಾರೆ’ ಎಂದು ಬಣ್ಣಿಸಿದರು.
ಆಶೀರ್ವಚನ ನೀಡಿದ ಕೋಡಿ ಮಠ ಮಹಾಸಂಸ್ಥಾನದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ‘ ಗೊತ್ತುಗುರಿ ಇಲ್ಲದ ಜೀವನದ ಈ ಕಾಲದಲ್ಲಿ ದಿವಾಕರ ಶೆಟ್ಟಿಯವರ ಜೀವನ ಮತ್ತು ಷಷ್ಟ್ಯಬ್ದ ಸಂಭ್ರಮ ಅಪೂರ್ವ ಕ್ಷಣ’ ಎಂದರು. 

ಶಿವಮೊಗ್ಗ ಆನಂದ ಪುರದ ಡಾ. ಮಲ್ಲಿಕಾರ್ಜುನ ಮುರುಗ ರಾಜೇಂದ್ರ ಸ್ವಾಮೀಜಿ, ಮಳೆಮಠದ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಸೊರಮ ಜಡೆ ಮಠ ಸಂಸ್ಥಾನದ ಡಾ.ಮಹಾಂತ ಸ್ವಾಮೀಜಿ, ಮೂರು ಕಳಸದ ಮಠದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ಕಡೂರು ದೊಡ್ಡ ಮಠದ ಪ್ರಭು ಕುಮಾರ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ಯತೀಶ ಶಿವಾಚಾರ್ಯ ಸ್ವಾಮೀಜಿ, ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ, ಶೈಲ ಶಾಖಾ ಮಠದ ಶಿವಾ ನಂದ ಶಿವಾಚಾರ್ಯ ಸ್ವಾಮೀಜಿ, ಬೊಮ್ಮನ ಹಳ್ಳಿಯ ಶಿವಯೋಗಿ ಸ್ವಾಮೀಜಿ, ಚಿಕ್ಕೋಡಿಯ ಸಂಸಾದಿನ ಸ್ವಾಮೀಜಿ, ಮಂಡ್ಯದ ತೆಂಡೆಕೆರೆ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಕಾರ್ಕಳ ಶಾಸಕ ಸುನೀಲ್ ಕುಮಾರ್, ಮಾಜಿ ಶಾಸಕ ಗೋಪಾಲ ಭಂಡಾರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಐಕಳ ಹರೀಶ್ ಶೆಟ್ಟಿ, ಮುಂಬಯಿಯ ಎಚ್.ಪಿ.ಮೆಹ್ತಾ, ಮುಂಬಯಿ ಮತ್ತು ಹುಟ್ಟೂರಿನ ಗಣ್ಯರು, ಸ್ಥಳೀಯ ಪ್ರಮುಖರು, ಜನ ಪ್ರತಿನಿಧಿಗಳು, ಸಮಿತಿಯ ಪ್ರಮುಖರು, ಸಾಹಿತಿಗಳು, ಪ್ರೋ.ಡಾ.ಜಿ.ವಿ. ಕುಲಕರ್ಣಿ, ಮೀರಾ ದಿವಾಕರ ಶೆಟ್ಟಿ, ದಿವ್ಯಾ ಆರ್. ಪೂಂಜ, ರೋಹಿತ್ ಆರ್.ಪೂಂಜ, ಸಾಗರ್ ಶೆಟ್ಟಿ,ಡಾ. ಅಕ್ಷಯಾ ಶೆಟ್ಟಿ, ಧರಾ ಆರ್. ಪೂಂಜ , ಅಭಿನಂದನ ಸಮಿತಿ ಅಧ್ಯಕ್ಷ ಅಂಬಾತ ನಯ ಮುದ್ರಾಡಿ, ಸಂಚಾಲಕ ಅಪ್ಪಣ್ಣ ಶೆಟ್ಟಿ ಮುಂಬಯಿ, ಉಪಾಧ್ಯಕ್ಷರಾದ ರಮೇಶ್ ಪೂಂಜ, ವೃಷಭದೇವ ಅಧಿ ಕಾರಿ, ಮುದ್ರಾಡಿ ಮಂಜುನಾಥ ಪೂಜಾರಿ, ಕಾರ್ಯದರ್ಶಿ ಪೇತ್ರಿ ವಿಶ್ವನಾಥ ಶೆಟ್ಟಿ ಮುಂಬಯಿ, ಅಶೋಕ್ ಕುಮಾರ್ ಮುದ್ರಾಡಿ, ಗಣಪತಿ ಮುದ್ರಾಡಿ, ಸುಕುಮಾರ್ ಮೋಹನ್, ಡಾ. ಪೂರ್ಣಿಮ ಸುಧಾಕರ ಶೆಟ್ಟಿ ಮುಂಬಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT