ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯೋಗದ ಪರಿಕಲ್ಪನೆ ಬದಲಾಗಲಿ’

Last Updated 16 ಮೇ 2017, 5:51 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಸರ್ಕಾರಿ ಉದ್ಯೋಗವೇ ಪರಮೋಚ್ಛವಾದುದು ಎಂಬ ಮನೋಭಾವ ಸಲ್ಲದು ಎಂದು ಶಾಸಕ ಡಿ.ಎನ್.ಜೀವರಾಜ್ ತಿಳಿಸಿದರು.

ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಸೋಮ ವಾರ ಕೌಶಲಾಭಿವೃದ್ಧಿ, ಉದ್ಯಮ ಶೀಲತೆ, ಜೀವನೋಪಾಯ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ ನಿರುದ್ಯೋ ಗಿಗಳ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಲ್ಲರೂ ಸರ್ಕಾರಿ ಕೆಲಸಕ್ಕೆ ಹೋಗಿ ದ್ದರೆ ಖಾಸಗಿ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿರ ಲಿಲ್ಲ. ಯಾವುದೇ ಉದ್ಯೋಗಕ್ಕೆ ಬೇಕಾದ ಕೌಶಲವನ್ನು ಒದಗಿಸಲು ಸರ್ಕಾರ ಆರಂಭಿಸಿರುವ ಯೋಜನೆ ಯನ್ನು ಎಲ್ಲರೂ ಸದುಪಯೋಗಪಡಿಸಿ ಕೊಳ್ಳಬೇಕು. ಪ್ರಧಾನಮಂತ್ರಿ ನರೇಂದ್ರಮೋದಿ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲು ದಿನದಯಾಳ್ ಕೌಶಲ ಉದ್ಯೋಗ ತರಬೇತಿ ಕೇಂದ್ರ ಸ್ಥಾಪಿಸಿ ಅಲ್ಲಿ ಸಂಸ್ಥೆಗಳ ಮೂಲಕ ತರಬೇತಿ ನೀಡಿ ಉದ್ಯೋಗ ಒದಗಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.

ಪ್ರಧಾನಮಂತ್ರಿಯ ಆಶಯಕ್ಕೆ ಮುಖ್ಯಮಂತ್ರಿಗಳು ಕೈಜೋಡಿಸಿರು ವುದು ಸ್ವಾಗತಾರ್ಹ. 2012 ರಲ್ಲಿಯೇ ತಾಲ್ಲೂಕು ಕೇಂದ್ರಕ್ಕೆ ಐಟಿಐನ ಮುಂದು ವರೆದ ಭಾಗವಾದ ನಿರುದ್ಯೋಗಿಗಳಿಗೆ ವಿವಿಧ ಉದ್ಯೋಗಗಳ ಬಗ್ಗೆ ತರಬೇತಿ ನೀಡುವ ಕೌಶಲ ತರಬೇತಿ ಕೇಂದ್ರ ಮಂಜೂರಾಗಿದ್ದರೂ ಸರ್ಕಾರ ಅದನ್ನು ಆರಂಭಿಸಿಲ್ಲ. ಯುವಜನರಿಗೆ ಸ್ವಯಂ ಉದ್ಯೋಗ ನೀಡಲು ಸಾಧ್ಯವಾಗುವ ಈ ಕೇಂದ್ರದ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಕ್ಷೇತ್ರಶಿಕ್ಷಣಾಧಿಕಾರಿ ಪಿ.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ರಾಜ್ಯ ದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾವಂತರಲ್ಲಿ ಶೇ 1 ರಷ್ಟು ಮಾತ್ರ ಸರ್ಕಾರಿ ಉದ್ಯೋಗ ಪಡೆಯಲು ಅವಕಾಶವಿದೆ. ಉಳಿದ ಶೇಕಡ 99ರಷ್ಟು ಜನರಿಗೆ ಸರ್ಕಾರಿ ಉದ್ಯೋಗವಕಾಶವಿಲ್ಲ. ನಿರುದ್ಯೋಗ ಒಂದು ಸಾಮಾಜಿಕ ಪಿಡುಗಾಗಿದೆ. ಪಡೆಯುವ ಪದವಿ ಬೇರೆ, ಕೆಲಸ ಮಾಡುವ ಉದ್ಯೋಗ ಬೇರೆಯಾಗಿರು ವುದರಿಂದ ವಿದ್ಯಾವಂತ ನಿರುದ್ಯೋಗಿ ಗಳಿಗೆ ಸೂಕ್ತ ತರಬೇತಿ ನೀಡಿ ಉದ್ಯೋಗವಕಾಶ ಕಲ್ಪಿಸಿದರೆ ಸಾಮಾ ಜಿಕ ಪಿಡುಗು ನಿವಾರಣೆಯಾಗುತ್ತದೆ. ಯಾವ ಉದ್ಯೋಗವನ್ನು ಪಡೆಯಲು ನಿರುದ್ಯೋಗಿಗಳು ಅಪೇಕ್ಷಿಸುತ್ತಾರೋ ಆ ಉದ್ಯೋಗದಕ್ಕೆ ಬೇಕಾಗಿರುವ ಕೌಶಲದ ತರಬೇತಿ ನೀಡಲು ನಿರುದ್ಯೋಗಿಗಳ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 7ದಿನಗಳ ಕಾಲ ನಿರುದ್ಯೋಗಿ ಗಳು ನೋಂದಣಿ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ  ಜಯಶ್ರೀ ಮೋಹನ್. ಸದಸ್ಯೆ ಪ್ರೇಮ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸಾವಿತ್ರಿ, ಸದಸ್ಯ ಉಪೇಂದ್ರ. ತಹಶೀ ಲ್ದಾರ್ ಟಿ.ಗೋಪಿನಾಥ್, ಇಒ ಕೆ. ಹೋಂ ಗಯ್ಯ, ಮುಖ್ಯಾಧಿಕಾರಿ ಕುರಿಯಾ ಕೋಸ್, ಗೋಪಾಲ್, ಕೆಸವೆ ಮಂಜು ನಾಥ್, ಕೋಕಿಲ , ಸಿಂಚನಉಡುಪ. ರಾಜನಾಯಕ್, ಸುನೀತಾ, ರಾಜ ಕುಮಾರ್ ಇದ್ದರು.

ಇಲ್ಲಿ ಹೆಸರು ನೋಂದಾಯಿಸಿ
ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾ ಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಎಲ್ಲಾ ಗ್ರಾಮ ಪಂಚಾಯಿತಿ ಗಳು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಳೆಹೊನ್ನೂರಿನ ನಾಡ ಕಚೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT