ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಂಕರರ ಸಂದೇಶ ಸಾರ್ವಕಾಲಿಕ

Last Updated 17 ಮೇ 2017, 5:32 IST
ಅಕ್ಷರ ಗಾತ್ರ

ಚಾಮರಾಜನಗರ: ‘ಅಹಿಂಸೆಯೇ ಪರಮಧರ್ಮ ಎಂದು ಸಾರಿದ ಜೈನ ತೀರ್ಥಂಕರರ ಸಂದೇಶ ಸಾರ್ವಕಾಲಿಕ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ. ಪ್ರೀತಿ ಶ್ರೀಮಂದರ್‌ ಕುಮಾರ್‌ ಮಂಗಳವಾರ ಹೇಳಿದರು.

ನಗರದ ಜೆ.ಎಚ್. ಪಟೇಲ್‌ ಸಭಾಂ ಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಭಗವಾನ್‌ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬುದ್ಧ, ಮಹಾವೀರ, ಬಸವಣ್ಣ ಹಾಗೂ ಅಂಬೇಡ್ಕರ್‌ ಅವರು ಆಕಾಶ, ಸಾಗರ, ಹೂವು ಹಾಗೂ ಸೂರ್ಯರಂತೆ ಶಾಶ್ವತ. ಅವರ ಸ್ಮರಣೆಯನ್ನು ಪ್ರತಿಯೊಬ್ಬರು ಮಾಡಬೇಕು. ಅವರಂತೆ ಅಹಿಂಸಾ ಮಾರ್ಗದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.

2,500ವರ್ಷಗಳ ಹಿಂದೆ ಮನು ಕುಲದಲ್ಲಿ ಜನಿಸಿದ ಶ್ರೇಷ್ಠ ಹೂವು ಮಹಾವೀರ. ಅವರ ಜೀವನ ಚರಿತ್ರೆ ಯನ್ನು ಸ್ಪಷ್ಟವಾಗಿ ಅರಿಯಲು ದಾಖಲೆ ಗಳು ದೊರೆತಿಲ್ಲ.
ಆದರೆ, ಜೈನ ಪುರಾಣದಲ್ಲಿ ಕೆಲವು ಮಾಹಿತಿ ದೊರೆತಿದೆ. ಅವರು 12 ವರ್ಷಗಳ ಕಠಿಣ ತಪಸ್ಸು ಮಾಡಿ ಜಗತ್ತಿಗೆ ಅಹಿಂಸಾಧರ್ಮ ಸಾರಿದರು ಎಂದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತ ನಾಡಿ, ಮಹಾನ್‌ ಪುರುಷರ ಆದರ್ಶ ಗಳನ್ನು ಅರಿತುಕೊಂಡು ನಡೆದಾಗ ಸಾಮರಸ್ಯ ಹೆಚ್ಚಾಗುತ್ತದೆ ಎಂದರು.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹನೀಯರ ಜಯಂತಿ ಆಚರಿಸುತ್ತಿದೆ. ಈ ಜಯಂತಿ ಕಾರ್ಯ ಕ್ರಮದ ಮೂಲಕ ಶಾಂತಿಯ ಮಹತ್ವವನ್ನು ಎಲ್ಲರು ಅರಿಯಬೇಕು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಚಂದ್ರು ಮಾತನಾಡಿ, ಮಹಾ ವೀರ ಜಗತ್ತಿಗೆ ಶಾಂತಿಯ ಸಂದೇಶ ಸಾರಿದರು. ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.

ಅಹಿಂಸೆಯ ಗುಣಗಳನ್ನು ಬೆಳೆಸಿಕೊಂಡಾಗ ಪರಸ್ಪರರಲ್ಲಿ ನಂಬಿಕೆ, ವಿಶ್ವಾಸ ಮೂಡುತ್ತದೆ. ಯುವಕರು ಮಹಾನ್‌ ಪುರುಷರ ಆದರ್ಶ ಪಾಲಿಸಬೇಕು ಎಂದು ಸಲಹೆ ನೀಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಿಂದ ಜಿಲ್ಲಾಡಳಿತ ಭವನ ದವರೆಗೆ ಮಹಾವೀರರ ಭಾವಚಿತ್ರದ ಮೆರವಣಿಗೆ ನಡೆಯಿತು.

ಮಧ್ಯಾಹ್ನ ಅಕ್ಷತಾ ಜೈನ್‌ ಮತ್ತು ತಂಡದಿಂದ ನೃತ್ಯರೂಪಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾ ಯಿತಿ ಸದಸ್ಯ ಸಿ.ಎಸ್. ಬಾಲರಾಜು, ಚೂಡಾ ಅಧ್ಯಕ್ಷ ಸುಹೇಲ್‌ ಆಲಿಖಾನ್, ಜೈನ ಸಮಾಜದ ಅಧ್ಯಕ್ಷ ವರ್ಧ ಮಾನಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮುನಿರಾಜಪ್ಪ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್.ಸತೀಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಡಿ. ನಾಗವೇಣಿ ಹಾಜರಿದ್ದರು.

**

ಬುದ್ಧ ಮತ್ತು ಮಹಾವೀರ ಶ್ರಮಣ ಪರಂಪರೆಯನ್ನು ಪ್ರತಿಪಾದಿಸಿದರು. ಅವರು ಸಾರಿದ ಸತ್ಯ ಮತ್ತು ಅಹಿಂಸೆಯ ಸಂದೇಶ ಇಡೀ ಮಾನವ ಜನಾಂಗಕ್ಕೆ ದಾರಿದೀಪ
-ಪ್ರೊ. ಪ್ರೀತಿ ಶ್ರೀಮಂದರ್‌ಕುಮಾರ್‌, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT