ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲ್ಗುಣಿಯ ಒಡಲು ಬಗೆಯುತ್ತಿರುವ ಮಾಫಿಯಾ

Last Updated 17 ಮೇ 2017, 10:52 IST
ಅಕ್ಷರ ಗಾತ್ರ

ಬಜ್ಪೆ: ಇಲ್ಲಿನ ಗುರುಪುರ ಕೈಕಂಬ ಸಮೀ ಪದ ಮಳಲಿ ಪೇಟೆಯ ಸಮೀಪ ಇರುವ ಫಲ್ಗುಣಿ ನದಿಯಲ್ಲಿ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದ ರಿಂದ ಫಲ್ಗುಣಿ ನದಿಯ ಒಡಲು ಬರಿದಾ ಗುತ್ತಿದೆ. ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಕಳೆದ ಮಾರ್ಚ್ ಅಂತ್ಯದಿಂದ ಇಲ್ಲಿಯತನಕ ಲೆಕ್ಕಕ್ಕಿಂತ ಜಾಸ್ತಿ ಮರಳು ಎತ್ತುತ್ತಿದ್ದು, ಫಲ್ಗುಣಿ ನದಿಯೇ ಬರಿದಾಗುವ ಕಾಲ ಸನ್ನಿಹಿತವಾಗಿದೆ ಎಂಬುದು ಗ್ರಾಮಸ್ಥರ  ಆರೋಪ. ಮುಖ್ಯವಾಗಿ ಗಣಿ ಇಲಾಖೆಯ ನಿಯಮ ಗಳನ್ನು ಇಲ್ಲಿ ಗಾಳಿಗೆ ತೂರಲಾಗಿದ್ದು, ನಿಯಮ ಮೀರಿ ಅಕ್ರಮವಾಗಿ ಮರಳು ಗಾರಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ದಿನಕ್ಕೆ ಸಾವಿರಾರು ಮೆಟ್ರಿಕ್ ಟನ್ ಮರಳನ್ನು ಎತ್ತಿ ಅದನ್ನು ಅವೈಜ್ಞಾನಿಕ ರೀತಿಯಲ್ಲಿ ಸಾಗಿಸಲಾಗು ತ್ತಿದ್ದು, ಮಳಲಿಯ ಪೇಟೆ ಸಮೀಪ ಹರಿ ಯುವ ಫಲ್ಗುಣಿ ನದಿಯಲ್ಲಿ ನಿರಂತರ ವಾಗಿ ಮರಳೆತ್ತುವ ಕಾರ್ಯ ನಡೆಯುತ್ತಾ ಇದೆ.

ನಿಯಮ ಗಾಳಿಗೆ ತೂರಿದರು: ‘ಮರಳುಗಾರಿಕೆಗೆ ಕೆಲವೊಂದು ಷರತ್ತು ಗಳನ್ನು ಇಲಾಖೆ ನಿಗದಿಪಡಿಸಿದ್ದು, ಆದರೆ ಇವೆಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಗುತ್ತಿಗೆದಾರರು ಗರಿಷ್ಠ ನಾಲ್ಕು ಲಾರಿ ಅಥವಾ ಟಿಪ್ಪರ್‌ಗಳನ್ನು ಬಳಸ ಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ನೂರಕ್ಕಿಂತಲೂ ಅಧಿಕ ಲಾರಿಗಳನ್ನು ಉಪಯೋಗಿಸುತ್ತಿದ್ದು, ಇದರಿಂದ ನಿತ್ಯ ಸಂಚರಿಸುವ ವಾಹನಗಳಿಗೆ ತೊಂದರೆ ಯಾಗಿದೆ. ಅಪಘಾತದ ಭಯ  ಸೃಷ್ಟಿಯಾ ಗಿದೆ. ಮಕ್ಕಳು ರಸ್ತೆಯಲ್ಲಿ ಸಂಚರಿಸು ತ್ತಿದ್ದು, ಮರಳು ಲಾರಿಗಳಿಂದ ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದೇವೆ’ ಎಂಬುದು ಗ್ರಾಮಸ್ಥರ ಅಳಲು.

ಟೆಂಡರ್‌ ವಹಿಸಿಕೊಳ್ಳುವಾಗ ಇಂತಿಷ್ಟೇ ಎಂದು ಮರಳಿನ ಅಂದಾಜು ಪ್ರಮಾಣ ಇದ್ದು, ಅದಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ತೆಗೆಯಲಾಗುತ್ತಿದೆ. ಮರಳು ಸಾಗಾಣಿಕೆಯ ಟಿಪ್ಪರ್ ಲಾರಿಗಳ ಮುಂಭಾಗ ಹಳದಿ ಬಣ್ಣ ಇರಬೇಕಿದ್ದು, ಆದರೆ ಇಲ್ಲಿ ಬೇರೆ ಲಾರಿಗಳಲ್ಲೂ ಮರಳು ಸಾಗಣೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇಲಾಖೆ ಸೂಚಿಸುವಷ್ಟು ಕಾರ್ಮಿಕ ರನ್ನು ಬಳಕೆ ಮಾಡಬೇಕಿದ್ದು, ಆದರೆ ಇಲ್ಲಿ ಹೆಚ್ಚು ಕಾರ್ಮಿಕರನ್ನು ಬಳ ಮಾಡಿ ಕೊಂಡು ಜಾಸ್ತಿ ಮರಳನ್ನು ಎತ್ತಲಾಗು ತ್ತಿದೆ. ಕಾರ್ಮಿಕ ಇಲಾಖೆಯ ನಿಯಮಾ ವಳಿಗಳನ್ನೂ ಇಲ್ಲಿ ಗಾಳಿಗೆ ತೂರಲಾಗಿದೆ.

ಮರಳೆತ್ತಲು ಯಂತ್ರ ಬಳಕೆ?: ಹೈಕೋರ್ಟ್ ಆದೇಶದ ಪ್ರಕಾರ ಮರಳು ಗಣಿಗಾರಿಕೆಗೆ ಯಂತ್ರೋಪಕರಣ ಅಂದರೆ ಹಿಟಾಚಿ, ಯಾಂತ್ರೀಕೃತ ದೋಣಿಗಳನ್ನು ಬಳಕೆ ಮಾಡಬಾರದು ಎಂಬ ನಿಯಮವಿದೆ. ಆದರೆ ಮರಳನ್ನು ದಂಡೆಯಿಂದ ವಾಹನಗಳಿಗೆ ಲೋಡ್ ಮಾಡಲು ಯಂತ್ರಗಳ ಬಳಕೆ ಮಾಡ ಬಹುದಾಗಿದ್ದು, ಆದರೆ ಕೆಲವೊಂದು ಸಂದರ್ಭದಲ್ಲಿ ಇವುಗಳನ್ನು ನದಿಯಿಂದ ಮರಳೆತ್ತಲು ಕೂಡಾ ಬಳಕೆ ಮಾಡುತ್ತಿ ದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಇಂಥಹ ಲಾರಿಗಳಿಗೆ ಜಿಪಿಎಸ್ ಪ್ಯಾನೆಲ್ ಬಳಕೆ ಮಾಡಬೇಕೆಂಬ ನಿಯಮವಿದ್ದು, ಅವುಗಳನ್ನೂ ಗಾಳಿಗೆ ತೂರಲಾಗಿದೆ. ಮರಳು ಸಾಗಣೆ, ಸಾಗಣೆ ವಿಧಾನದಲ್ಲಿ ಸಹ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಸ್ಥಳೀ ಯರು ದೂರಿದ್ದಾರೆ.

ಪ್ರತಿಭಟನೆಗೆ ನಿರ್ಧಾರ: ಅವ್ಯಾಹತ ಮರಳುಗಾರಿಕೆಯಿಂದ ಕಂಗಾಲಾಗಿರುವ ಗ್ರಾಮಸ್ಥರು ಮರಳುಗಾರಿಕೆಯ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಕೆಲ ದಿನಗಳ ಮುಂಚೆ ಸ್ಥಳೀಯರು ಮರಳು ಲಾರಿಗಳ ಸಿಬ್ಬಂದಿ ಜೊತೆ ವಾಗ್ವಾದ ನಡೆ ಸಿದ್ದು, ಬಸ್ ಚಾಲಕರೂ ಮರಳುಗಾರಿ ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಸ್‌ ಸಂಚಾರಕ್ಕೆ ಮರಳು ಲಾರಿಗಳು ಅಡ್ಡಿ ಯಾಗಿದ್ದು, ಜನರು ಕಂಗಾಲಾಗಿದ್ದಾರೆ.

-ಗಿರೀಶ್‌ ಮಳಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT