ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವಿಗೆ ಗ್ರಾಮಸ್ಥರ ಮನವಿ

Last Updated 17 ಮೇ 2017, 6:30 IST
ಅಕ್ಷರ ಗಾತ್ರ

ಮಾಗಡಿ: ಮೂತ್ರಪಿಂಡ ವಿಫಲ ಗೊಂಡಿರುವ ಮಗನನ್ನು ಉಳಿಸಿ ಕೊಳ್ಳಲು ತಂದೆ-ತಾಯಿ  ತಮ್ಮ ಮೂತ್ರ ಪಿಂಡ ದಾನ ಮಾಡಲು  ನೀಡಲು ಮುಂದಾಗಿದ್ದಾರೆ.
ಅವರಿಗೆ ವಯಸ್ಸಾದ ಕಾರಣ ಮೂತ್ರಪಿಂಡ (ಕಿಡ್ನಿ) ಪಡೆಯಲು ಸಾಧ್ಯವಿಲ್ಲ ಎಂದ ವೈದ್ಯರ ಮಾತಿನಿಂದ ಕಂಗಾಲಾಗಿರುವ ಪೋಷಕರು ಕರುಳ ಬಳ್ಳಿ ಉಳಿಸಿಕೊಳ್ಳಲು ದಾನಿಗಳ ಸಹಾ ಯ ಕೋರಿದ್ದಾರೆ.

ತಾಲ್ಲೂಕಿನ ವಾಜರಹಳ್ಳಿ ಗ್ರಾಮದ ರಂಗನಾಥ್(34)  ಎಂಬ ಯುವಕನ ಎರಡೂ ಮೂತ್ರಪಿಂಡ ವಿಫಲವಾಗಿದ್ದು, ದಾನಿಗಳ ನೆರವಿಗೆ ಅಂಗಲಾಚುತ್ತಿದ್ದಾರೆ. 
ಬಡ ಕುಟುಂಬದ ರಂಗನಾಥ್  9 ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದು, ಈಗ ಈ ಸಮಸ್ಯೆ ಕಾಡುತ್ತಿರುವುದರಿಂದ ಪತ್ನಿ ಕೂಡ ಮನೆ ತೊರೆದು ಹೋಗಿದ್ದಾರೆ.  ರಂಗನಾಥ್ ಸೋದರ ಕೂಡ ಅಂಗವಿಕಲನಾಗಿದ್ದು ತಂದೆ – ತಾಯಿ ವೃದ್ಧರು.  ಅರ್ಧ ಎಕರೆ ಜಮೀನಿ ನಲ್ಲಿ ಕೃಷಿಯನ್ನೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಕುಟುಂಬಕ್ಕೆ ಆಧಾರ ವಾಗಿದ್ದ ಮಗನೇ ಈಗ ಅನಾರೋಗ್ಯಕ್ಕೆ ತುತ್ತಾಗಿರುವುದು ಬಡ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.

‘ಪ್ರತಿ ವಾರ ಮೂರು ಸಲ  ಆಸ್ಪತ್ರೆಗೆ ಹೋಗಬೇಕಿದೆ. ಒಂದು ಸಲಕ್ಕೆ  ₹2 ಸಾವಿರ ಹಣ ಖರ್ಚಾಗುತ್ತದೆ. ವಾರಕ್ಕೆ ₹6ಸಾವಿರ ಬೇಕಾಗಿದೆ. ಒಂದು ಮೂತ್ರಪಿಂಡ ಬದಲಾವಣೆ ಮಾಡಲು ₹ 8 ರಿಂದ ₹10 ಲಕ್ಷ ಖರ್ಚಾಗುತ್ತದೆ. ಬಡ ಕುಟುಂಬ ಇಷ್ಟು ಹಣ ಬರಿಸಲು ಆಗದ ಪರಿಸ್ಥಿತಿ. ದಾನಿಗಳ ನೆರವಿನ ಸಹಾಯ ಹಸ್ತ ಚಾಚಿದರೆ  ಬಡ ಕುಟುಂಬಕ್ಕೆ ಅನುಕೂಲವಾಗುತ್ತದೆ’ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

**

ಸಹಾಯಕ್ಕಾಗಿ ಸಂಪರ್ಕಿಸಲು ಮನವಿ

ಸಹಾಯ ಹಸ್ತ ನೀಡುವವರು ರಂಗನಾಥ್ ಅವರ ಮೊಬೈಲ್ ನಂ.: 9972422161 ಹಾಗೂ ಅವರ ತಾಯಿ ನರಸಮ್ಮ ಅವರ ವಿಜಯ ಬ್ಯಾಂಕ್ ಸೋಲೂರು ಶಾಖೆ ಖಾತೆ ನಂ.144001231000887 ಐಎಫ್ಎಸ್‌ಸಿ ಕೋಡ್: ವಿಟಿಜೆಆರ್ 0001440 ಸಹಾಯ ಮಾಡಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT