ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರಿನ ಸಂಪರ್ಕ: ದಂಡ ಪಾವತಿಸಿ ಸಕ್ರಮ ಮಾಡಿಕೊಳ್ಳಿ’

Last Updated 17 ಮೇ 2017, 8:42 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ನೀರಿನ ಅನಧಿಕೃತ ಸಂಪರ್ಕವನ್ನು ದಂಡ ಪಾವತಿಸುವ ಮೂಲಕ ಸಕ್ರಮ ಮಾಡಿಕೊಳ್ಳುವಂತೆ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸೂಚಿಸಿದೆ.

ನಗರಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಸಂಪರ್ಕಗಳಿರುವುದು ಗಮನಕ್ಕೆ ಬಂದಿದೆ. ಹೀಗೆ ಸಂಪರ್ಕ ಪಡೆದಿರುವವರು ಮೇ 20ರಿಂದ ಜೂನ್‌ 30ರ ಒಳಗೆ ಜೋಡಣಾ ಶುಲ್ಕದೊಂದಿಗೆ ₹1,500 ದಂಡ ಪಾವತಿಸಿ ಅಧಿಕೃತ ಮಾಡಿಕೊಳ್ಳಬಹುದು. ತಪ್ಪಿದಲ್ಲಿ ಜುಲೈ 1ರಿಂದ ಜುಲೈ 31ರವರೆಗೆ ಗೃಹಬಳಕೆಯ ಅನಧಿಕೃತ ಸಂಪರ್ಕಕ್ಕೆ ₹ 3,000 ದಂಡ ವಿಧಿಸಲಾಗುವುದು. ಗೃಹೇತರ/ ವಾಣಿಜ್ಯ ಸಂಪರ್ಕಗಳಿಗೆ ₹ 5,000 ದಂಡ ಕಟ್ಟಿಸಿಕೊಂಡು ಸಕ್ರಮ ಮಾಡಲಾಗುವುದು.

ಆ.1ರ ನಂತರ ಯಾವುದೇ ಅನಧಿಕೃತ ಸಂಪರ್ಕವಿರುವುದು ಕಂಡುಬಂದಲ್ಲಿ ಕಡಿತಗೊಳಿಸಲಾಗುವುದು ಹಾಗೂ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು.
ಸಾರ್ವಜನಿಕರು ಇದಕ್ಕೆ ಆಸ್ಪದ ನೀಡಬಾರದು ಎಂದು ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಎನ್. ಪ್ರಸನ್ನಮೂರ್ತಿ ಎಚ್ಚರಿಕೆ ನೀಡಿದ್ದಾರೆ.

ಸಂಪರ್ಕ ಸಕ್ರಮ ಮಾಡಿಸಲು ವಾರ್ಡ್‌ ನಂ. 1ರಿಂದ 24 ಹಾಗೂ 58ನೇ ವಾರ್ಡ್‌ನವರು ಮೊ: 94489 92588, ವಾರ್ಡ್‌ ನಂ. 25ರಿಂದ 56ರವರೆಗಿನವರು  ಮೊ: 94489 98265 ಮತ್ತು 57ನೇ ವಾರ್ಡ್‌ನವರು ಮೊ:  94489 92585 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT