ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಸಂಚಾರ ಸಂಪೂರ್ಣ ಸ್ಥಗಿತ

Last Updated 17 ಮೇ 2017, 9:18 IST
ಅಕ್ಷರ ಗಾತ್ರ

ಹೊಸಪೇಟೆ:ರಸ್ತೆ ಬದಿ ಉರುಳಿ ಬಿದ್ದಿದ್ದ ಕಾಂಕ್ರೀಟ್ ಲಾರಿ ತೆರವುಗೊಳಿಸಲು ಮಂಗಳವಾರ ಮಧ್ಯಾಹ್ನ ರಾಷ್ಟೀಯ ಹೆದ್ದಾರಿ 50 ಬಂದ್‌ ಮಾಡಿದ್ದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಮಧ್ಯಾಹ್ನ 12ಗಂಟೆ ಸುಮಾರಿಗೆ ನಗರದ ಹೊರವಲಯದ ವ್ಯಾಸನಕೇರಿ ಸಮೀಪ ಹೊಸಪೇಟೆ–ಚಿತ್ರದುರ್ಗ ಹೆದ್ದಾರಿ ಪಕ್ಕ ಲಾರಿ ಉರುಳಿ ಬಿದ್ದಿತ್ತು. ಹೆದ್ದಾರಿ ನಿರ್ಮಿಸುತ್ತಿರುವ ಕಂಪೆನಿಯವರು ಲಾರಿಯನ್ನು ತೆರವುಗೊಳಿಸಲು ಸ್ಥಳಕ್ಕೆ ಎರಡು ಕ್ರೇನ್‌ಗಳನ್ನು ತರಿಸಿದರು.

ಈ ವೇಳೆ ರಸ್ತೆಯ ಎರಡೂ ಬದಿಯಲ್ಲಿ ವಾಹನ ಸಂಚಾರ ತಡೆದರು. ಲಾರಿ ತೆರವುಗೊಳಿಸಲು ಸುಮಾರು ಒಂದು ಗಂಟೆಗೂ ಅಧಿಕ ಸಮಯ ತೆಗೆದುಕೊಂಡರು. ಅಷ್ಟೊತ್ತಿಗೆ ರಸ್ತೆಯ ಎರಡೂ ಕಡೆಗಳಲ್ಲಿ ಸುಮಾರು ಮೂರರಿಂದ ನಾಲ್ಕು ಕಿ.ಮೀ ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನಗಳು ಮುಂದೆ ಚಲಿಸಲಾಗದೇ ಸ್ಥಳದಲ್ಲಿಯೇ ನಿಂತು ಬಿಟ್ಟಿದ್ದವು.

ಈ ವೇಳೆ ಕೆಲ ವಾಹನ ಮಾಲೀಕರು ಹಾಗೂ ಕಂಪೆನಿಯ ಸಿಬ್ಬಂದಿ ಮಧ್ಯೆ ವಾಗ್ವಾದವೂ ನಡೆಯಿತು. ಬಿಸಿಲಿನಲ್ಲಿಯೇ ವಾಹನಗಳಲ್ಲಿ ಕೂತಿದ್ದ ಜನ ಹಿಡಿಶಾಪ ಹಾಕಿದರು. ಸಮಯ ಮೀರುತ್ತಿದ್ದಂತೆ ವಾಹನಗಳ ಸಾಲು ಹೆಚ್ಚಾಗುತ್ತಿರುವುದನ್ನು ಗಮನಿಸಿದ ಕಂಪೆನಿಯವರು ಎರಡು ಕ್ರೇನ್‌ಗಳನ್ನು ರಸ್ತೆ ಮಧ್ಯದಿಂದ ತೆಗೆಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಈಗಿರುವ ರಸ್ತೆಯ ಎರಡೂ ಬದಿಯಲ್ಲಿ ಎತ್ತರದಲ್ಲಿ ಹೊಸ ರಸ್ತೆ ನಿರ್ಮಿಸಲಾಗುತ್ತಿದೆ. ಪ್ರಸ್ತುತವಿರುವ ರಸ್ತೆ ಕಿರಿದಾಗಿರುವುದರಿಂದ ವಾಹನಗಳು ನಿಧಾನಗತಿಯಲ್ಲಿ ಓಡಾಡುತ್ತಿದ್ದು, ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ. ಇಂತಹದ್ದರಲ್ಲಿ ವಾಹನ ಸಂಚಾರ ತಡೆದಿದ್ದರಿಂದ ವಾಹನಗಳ ಓಡಾಟ ಸಂಪೂರ್ಣ ನಿಂತು ಹೋಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT