ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡುವಿನೊಳಗೆ ಮನೆ ನಿರ್ಮಿಸಿ: ಡಿ.ಸಿ

Last Updated 17 ಮೇ 2017, 9:23 IST
ಅಕ್ಷರ ಗಾತ್ರ

ಬಳ್ಳಾರಿ: ಮುಖ್ಯಮಂತ್ರಿ  ಮನೆ ನಿರ್ಮಾಣ ಬಜಾರ್ ಯೋಜನೆ ಅಡಿ ಸಹಾಯಧನದೊಂದಿಗೆ ಸಾಲ ಪಡೆಯುವ ವಿವಿಧ ವಸತಿ ಯೋಜನೆಯ ಫಲಾನುಭವಿಗಳು ಗಡುವಿನೊಳಗೆ ಮನೆ ನಿರ್ಮಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ಸಲಹೆ ನೀಡಿದರು.

ನಗರದ ಬಿಡಿಎಎ ಸಭಾಂಗಣದಲ್ಲಿ ಮಂಗಳವಾರ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾಲ ಸೌಲಭ್ಯ, ರಿಯಾಯಿತಿ ದರದಲ್ಲಿ ಕಟ್ಟಡ ಸಾಮಗ್ರಿ ಮಾರಾಟ ಮತ್ತು ತಾಂತ್ರಿಕ ಮಾರ್ಗದರ್ಶನವನ್ನೂ ನೀಡಲಾ­ಗುತ್ತಿದ್ದು, ಫಲಾನುಭವಿಗಳು ನಿಗದಿಪಡಿಸಿದ ಅವಧಿಯಲ್ಲಿಯೇ ಮನೆಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ಹೇಳಿದರು.

2500 ಮಂದಿಗೆ ನಿವೇಶನ ಮಂಜೂ­ರಾಗಿದ್ದರೂ ದುಡ್ಡಿಲ್ಲದ ಕಾರಣ ಹಲವರು ಮನೆ ಕಟ್ಟಲು ಸಾಧ್ಯವಾಗಿಲ್ಲ. ಅಂಥವರನ್ನು ಯೋಜನೆ ಅಡಿ ಗುರುತಿಸಲಾಗಿದೆ. ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕ್‌ನಿಂದ ಮುಂಗಡ ಸಾಲ ಮಂಜೂರು ಮಾಡಲಾಗುವುದು. ನಂತರ ಎರಡು ಮೂರು ಹಂತಗಳಲ್ಲಿ ಪೂರ್ಣ ಸಾಲವನ್ನು ನೀಡಲಾಗುವುದು ಎಂದರು.

ಮುಂಗಡ ಸಾಲ ಪಡೆದವರಿಗೆ ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ದರದಲ್ಲಿ ನಿರ್ಮಿತಿ ಕೇಂದ್ರವು ಕಟ್ಟಡ ಸಾಮಗ್ರಿಗಳನ್ನು ಮಾರಾಟ ಮಾಡಲಿದೆ. ಅದರೊಂದಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ಸಲಹಾ ಸೇವೆಯೂ ದೊರಕಲಿದೆ ಎಂದರು.

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ರವಿಸುಧಾಕರ್‌ ಮಾತನಾಡಿ, ಬಡ ಫಲಾನುಭವಿಗಳಿಗೆ ನೆರವು ನೀಡಲೆಂದೇ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗು ವುದು ಎಂದರು. ಮೇಯರ್‌ ಜಿ.ವೆಂಕಟ ರಮಣ ಉಪಸ್ಥಿತರಿದ್ದರು.

ನೂಕುನುಗ್ಗಲು ನಿಯಂತ್ರಿಸಿದ ಡಿ.ಸಿ.

ಯೋಜನೆಯ ಉದ್ಘಾಟನೆ ಕಾರ್ಯಕ್ರಮ ಮುಗಿದ ಕೂಡಲೇ ಸಭಾಂಗಣದಲ್ಲಿದ್ದ ನಾಲ್ಕು ಕೌಂಟರ್‌ಗಳತ್ತ ನೂರಾರು ಮಂದಿ ಏಕಕಾಲಕ್ಕೆ ಧಾವಿಸಿದ ಪರಿಣಾಮವಾಗಿ ನೂಕುನುಗ್ಗಲು ಏರ್ಪಟ್ಟಿತ್ತು. ಕೆಲವು ನಿಮಿಷ ಗಲಿಬಿಲಿಯ ಸನ್ನಿವೇಶ ನಿರ್ಮಾಣವಾಗಿತ್ತು.

ಬ್ಯಾಂಕ್‌ ಅಧಿಕಾರಿ ಸಿಬ್ಬಂದಿ­ಯ ಮಾತನ್ನು ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ.  ತಾಳ್ಮೆಯಿಂದ ಇರು­ವಂತೆ ಜಿಲ್ಲಾಧಿ­ಕಾರಿ ಹಲವು ಬಾರಿ ಮೈಕ್‌ ಮೂಲಕ ಮಾಡಿದ ಮನವಿ­ಗೂ ಜನ ಕಿವಿಗೊಡಲಿಲ್ಲ. ಹೀಗಾಗಿ ಅವರು ಮೊದಲನೇ ಕೌಂಟರ್‌ ಅನ್ನು ವೇದಿಕೆಗೆ ಸ್ಥಳಾಂತರಿಸಿ, ಫಲಾನುಭವಿಗಳ ಪಟ್ಟಿಯನ್ನು ತಾವೇ ಓದಿ ಒಬ್ಬೊಬ್ಬರನ್ನೇ ಕರೆದರು. ನಂತರ ಸನ್ನಿವೇಶ ತಿಳಿಯಾ­ಯಿತು.

ಯೋಜನೆಯ ಉದ್ಘಾಟನೆ ಕಾರ್ಯಕ್ರಮ ಮುಗಿದ ಕೂಡಲೇ ಸಭಾಂಗಣದಲ್ಲಿದ್ದ ನಾಲ್ಕು ಕೌಂಟರ್‌ಗಳತ್ತ ನೂರಾರು ಮಂದಿ ಏಕಕಾಲಕ್ಕೆ ಧಾವಿ­ಸಿದ ಪರಿಣಾಮವಾಗಿ ನೂಕುನುಗ್ಗಲು ಏರ್ಪಟ್ಟಿತ್ತು. ಕೆಲವು ನಿಮಿಷ ಗಲಿಬಿಲಿಯ ಸನ್ನಿ­ವೇಶ ನಿರ್ಮಾಣವಾಗಿತ್ತು. ಬ್ಯಾಂಕ್‌ ಅಧಿಕಾರಿ ಸಿಬ್ಬಂದಿಯ ಮಾತನ್ನು ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. 

ತಾಳ್ಮೆಯಿಂದ ಇರುವಂತೆ ಜಿಲ್ಲಾ­ಧಿಕಾರಿ ಹಲವು ಬಾರಿ ಮೈಕ್‌ ಮೂಲಕ ಮಾಡಿ­ದ ಮನವಿಗೂ ಜನ ಕಿವಿಗೊಡಲಿಲ್ಲ. ಹೀಗಾಗಿ ಅವರು ಮೊದಲನೇ ಕೌಂಟರ್‌ ಅನ್ನು ವೇದಿಕೆಗೆ ಸ್ಥಳಾಂತರಿಸಿ, ಫಲಾನುಭವಿಗಳ ಪಟ್ಟಿಯನ್ನು ತಾವೇ ಓದಿ ಒಬ್ಬೊಬ್ಬರನ್ನೇ ಕರೆದರು. ನಂತರ ಸನ್ನಿವೇಶ ತಿಳಿಯಾಯಿತು.

*

ಬಡವರ ನೆರವಿಗಾಗಿ ಸರ್ಕಾರ ಮುಖ್ಯಮಂತ್ರಿ ಮನೆ ನಿರ್ಮಾಣ ಯೋಜನೆ ಜಾರಿಗೆ ತಂದಿದೆ. ಸಹಾಯಧನ ಪಡೆಯುವ ಫಲಾನುಭವಿಗಳು ಗಡುವಿನಲ್ಲಿ ಮನೆ ಕಟ್ಟಬೇಕು
ಡಾ.ರಾಮಪ್ರಸಾದ್‌  ಮನೋಹರ್‌ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT