‘ಸದ್ಯ ಪೇಟಿಎಂನ ಆರ್ಥಿಕ ವ್ಯವಹಾರದ ಉಪಾಧ್ಯಕ್ಷರಾಗಿರುವ ರೇನು ಸತ್ತಿ ಅವರು ಪಾವತಿ ಬ್ಯಾಂಕುಗಳ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಕಂಪೆನಿ ಹೇಳಿಕೊಂಡಿದೆ. ಆದರೆ, ಕೆಲ ಮೂಲಗಳು ‘ಪೇಟಿಎಂನ ಸಲಹಾ ಸಂಸ್ಥೆ ಪ್ರೈಸ್ ವಾಟರ್‌ಹೌಸ್ ಕೂಪರ್ಸ್ ನಿರ್ದೇಶಕಿ ಶಿಂಜಿನಿ ಕುಮಾರ್ ಅವರು ಪಾವತಿ ಬ್ಯಾಂಕ್‌ಗಳನ್ನು ಮುನ್ನಡೆಸಲು ಫೆಬ್ರವರಿಯಲ್ಲಿಯೇ ನೇಮಕವಾಗಿದ್ದಾರೆ’ ಎಂದು ತಿಳಿಸಿವೆ.