ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದೇ ಪದೇ ಬಾಗಿಲು ಬಡೀಬೇಡಿ

Last Updated 17 ಮೇ 2017, 19:30 IST
ಅಕ್ಷರ ಗಾತ್ರ
ಈಗ ನಾಯಿಯನ್ನು ಮಕ್ಕಳಂತೆ ಸಾಕುವವರು ಸಾಕಷ್ಟು ಮಂದಿ ಇದ್ದಾರೆ. ನಾಯಿಯೂ ಮನೆಯ ಸದಸ್ಯನೇ ಆಗಿಹೋಗಿದೆ. ಮನೆಯಲ್ಲೆಲ್ಲಾ ತಿರುಗಾಡಿಕೊಂಡು ಆರಾಮಾಗಿ ಇರುತ್ತದೆ. ಈ ನಾಯಿಯದ್ದು ಬೇರೆಯದೇ ಕಥೆ. ಇದರ ಹೆಸರು ಹಕಲ್‌ಬೆರಿ.

ಆಸ್ಟಿನ್‌ನ ಮನೆಯೊಂದರಲ್ಲಿರುವ ಈ ನಾಯಿ ಮನೆ ಹೊರಗೋ, ಒಳಗೋ ಇರುವುದೇ ಇಲ್ಲ. ಸದಾ ಮನೆ ಮೇಲೇ ಠಿಕಾಣಿ ಹೂಡಿರುತ್ತದೆ. ದಿನದ ಸುಮಾರು ಸಮಯ ಮನೆಯ ಮೇಲೇ ಹತ್ತಿ ಅಲ್ಲೇ ಅಡ್ಡಾಡಿಕೊಂಡು ಕಾಲ ಕಳೆಯುತ್ತದೆ. ಅದಕ್ಕೆ ಆ ಜಾಗವೇ ಬಲು ಇಷ್ಟ ಅಂತೆ. 
 
ಸಮಸ್ಯೆ ಆಗಿದ್ದು ಅದರಿಂದಲ್ಲ. ಹಾದಿಬೀದಿಯಲ್ಲಿ ಹೋಗುವವರಿಂದ. ಮನೆ ಮೇಲೆ ನಾಯಿ ಓಡಾಡುವುದನ್ನು ಕಂಡವರಿಗೆಲ್ಲಾ ಅದೇನೋ ಆತಂಕ. ಗೊತ್ತಿಲ್ಲದೇ ಮೇಲೆ ಏರಿ ಚಡಪಡಿಸುತ್ತಿದೆ ಎಂದು ತಿಳಿದುಕೊಂಡು ಆತಂಕಗೊಂಡು ಮನೆ ಮಾಲೀಕರಿಗೆ ವಿಷಯ ತಿಳಿಸಲೆಂದೇ ಬಾಗಿಲು ಬಡಿಯುತ್ತಿದ್ದರು. ಆದರೆ ಹೀಗೆ ಬಾಗಿಲು ಬಡಿಯುತ್ತಿರುವವರ ಸಂಖ್ಯೆ ದಿನೇ ದಿನೇ ಏರುತ್ತಿದ್ದುದೇ ಮನೆ ಮಾಲೀಕರಿಗೆ ತಲೆನೋವಾಯಿತು.
 
ಹೀಗೆ ರೋಸಿಹೋದವರೇ ಕೊನೆಗೊಂದು ತೀರ್ಮಾನಕ್ಕೆ ಬಂದರು. ನಾಯಿ ನೋಡಿ, ಆತಂಕಗೊಂಡು, ಬಂದು ಬಾಗಿಲು ಬಡಿಯುವವರಿಗೆಂದೇ ಮನೆ ಬಾಗಿಲಿಗೆ ಒಂದು ಪತ್ರವನ್ನು ಬರೆದು ಅಂಟಿಸಿದರು. ಅದು ಹೀಗಿದೆ ನೋಡಿ... 
 
‘ಬಾಗಿಲು ಬಡಿಯಬೇಡಿ. ಹಕಲ್‌ಬೆರಿಗೆ ಮೇಲೆ ಇರುವುದೇ ಇಷ್ಟ. ಅವನಿಗೆ ಅಲ್ಲಿಂದ ಜಿಗಿದು ಓಡಾಡುವುದೂ ಗೊತ್ತಿದೆ. ನೀವು ಆಹಾರ ಅಥವಾ ಬಾಲ್ ತೋರದೇ ಆತ ಕೆಳಗಿಳಿಯುವುದಿಲ್ಲ. ಭಯ ಪಡಬೇಡಿ. ನಿಮ್ಮ ಕಾಳಜಿಗೆ ಧನ್ಯವಾದ. ಬೇಕೆಂದರೆ ಒಂದು ಫೋಟೊ ತೆಗೆದುಕೊಂಡು ಹೋಗಿ ಫೇಸ್‌ಬುಕ್‌ಗೆ ಹಾಕಿ’ ಎಂದಿತ್ತು...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT