ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಕಾರ ವಿಜ್ಞಾನ, ಪಥ್ಯ ವಿಜ್ಞಾನ ಕೋರ್ಸ್‌

Last Updated 18 ಮೇ 2017, 6:00 IST
ಅಕ್ಷರ ಗಾತ್ರ

ಮಂಗಳೂರು: ಶೈಕ್ಷಣಿಕವಾಗಿ ಸಾಕಷ್ಟು ಸಾಧನೆ ಮಾಡಿರುವ ಮಂಗಳೂರಿನಲ್ಲಿ ಎಂಜಿನಿಯರಿಂಗ್‌, ವೈದ್ಯಕೀಯ ಕಾಲೇ ಜುಗಳಿಗೆ ಕೊರತೆ ಇಲ್ಲ. ಹಾಗಂತ ಇತರ ಕಾಲೇಜುಗಳು ಇಲ್ಲವೇ ಇಲ್ಲ ಎಂಬ ಮಾತು ಸರಿಯಲ್ಲ. ಅನೇಕ ಕಾಲೇಜು ಗಳು ವೃತ್ತಿಪರ ಕೋರ್ಸ್‌ಗಳ ಹೊರತಾ ಗಿಯೂ ಉದ್ಯೋಗ ಒದಗಿಸಬಲ್ಲ ಹಲವು ಕೋರ್ಸ್‌ಗಳನ್ನು ಕಲಿಸುತ್ತಿವೆ. ಅವುಗಳಲ್ಲಿ ನಗರದ ಮಿಲಾಗ್ರಿಸ್‌ ಕಾಲೇಜು ಒಂದು.

ನಗರದ ಪ್ರಸಿದ್ಧ ಕಾಲೇಜುಗಳಲ್ಲಿ ಒಂದಾಗಿರುವ ಮಿಲಾಗ್ರಿಸ್ ಕಾಲೇಜು, ನಗರದ ಹೃದಯ ಭಾಗವಾದ ಹಂಪನ ಕಟ್ಟೆಯಲ್ಲಿದ್ದು, ಮಿಲಾಗ್ರಿಸ್ ಚರ್ಚ್ ವತಿ ಯಿಂದ ನಡೆಸಲಾಗುತ್ತಿದೆ. ಮಂಗಳೂರು ಕ್ಯಾಥೊಲಿಕ್‌ ಶಿಕ್ಷಣ ಮಂಡಳಿಯ ಅಧೀನ ಅಂಗ ಸಂಸ್ಥೆಯಾಗಿದ್ದು, ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.

2010ರಲ್ಲಿ ಬಿಕಾಂ, ಬಿಬಿಎಂ ಕೋರ್ಸ್‌ಗಳಿಂದ ಆರಂಭಗೊಂಡ ಈ ಕಾಲೇಜು, 2016ರ ಸಾಲಿನಲ್ಲಿ ವೃತ್ತಿಪರ ಶಿಕ್ಷಣವನ್ನು ಆರಂಭಿಸಿದೆ.

ಹೋಟೆಲ್ ಮ್ಯಾನೇಜ್‌ಮೆಂಟ್ (ಬಿಎಸ್ಸಿ ಇನ್ ಹಾಸ್ಪಿ ಟಾಲಿಟಿ ಸೈನ್ಸ್ - ಸತ್ಕಾರದ ವಿಜ್ಞಾನ): ದ್ವಿತೀಯ ಪಿಯುಸಿಯಲ್ಲಿ ಕಲೆ, ವಿಜ್ಞಾನ ಅಥವಾ ವಾಣಿಜ್ಯ ವಿದ್ಯಾರ್ಥಿಗಳು ಈ ಕೋರ್ಸ್‌ ಅನ್ನು ಆಯ್ಕೆ ಮಾಡಬಹು ದಾಗಿದೆ.

ಬಿಎಸ್ಸಿ (ಎಚ್.ಎಸ್) ಕೋರ್ಸ್ ಮೂರು ವರ್ಷದ್ದಾಗಿದ್ದು, ಮಂಗಳೂರು ವಿಶ್ವವಿದ್ಯಾಲಯದ ಸಂಲಗ್ನತೆಗೆ ಒಳ ಪಟ್ಟಿದೆ. ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದಿದೆ. ಈ ವೃತ್ತಿಪರ ಕೋರ್ಸಿನ ವಿಶೇಷತೆ ಎಂದರೆ ಲೆಕ್ಕವಿಜ್ಞಾನ, ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ ವಿಷಯಗಳ ಅಧ್ಯಯನವಿಲ್ಲದೇ ಬಿಎಸ್ಸಿ ಪದವಿ ಪಡೆಯಬಹುದಾಗಿದೆ.

ಈ ವೃತ್ತಿಪರ ಕೋರ್ಸ್ ಕಲಿತವರಿಗೆ ಪಂಚತಾರಾ ಹಾಗೂ ಐಷಾರಾಮಿ ಹೋಟೆಲ್‌ಗಳು, ಪ್ರಯಾಣಿಕ ಹಡಗು ಗಳು, ಬಹುರಾಷ್ಟೀಯ ಕಂಪೆನಿಗಳು, ವಿಮಾನ ಸಹಾಯಕರು ಹಾಗೂ ಕೇಟರಿಂಗ್ ಉದ್ಯಮಗಳಲ್ಲಿ ಅನೇಕ ಅವಕಾಶಗಳನ್ನು ಒದಗಿಸುತ್ತದೆ.

ಬಿಎಸ್ಸಿ ಎಫ್‌ಎನ್‌ಡಿ (ಆಹಾರ, ಪೌಷ್ಟಿಕಾಂಶ ಮತ್ತು ಪಥ್ಯ ವಿಜ್ಞಾನ): ಈ ಕೋರ್ಸ್ ಮನುಷ್ಯನ ಆಹಾರದ ಬಗ್ಗೆ ಒಂದು ಹೊಸ ಆವಿಷ್ಕಾರ. ಮಂಗಳೂರು ವಿಶ್ವವಿದ್ಯಾಲಯದ ಒಂದೆರಡು ಕಾಲೇ ಜುಗಳನ್ನು ಬಿಟ್ಟು ವಿರಳವಾಗಿ ಲಭ್ಯವಿ ರುವ ಮತ್ತು ಉದ್ಯೋಗ ಖಾತರಿ ಇರುವ ಕೋರ್ಸ್.

ಈ ಕೋರ್ಸ್ ಮಾಡಿದವರಿಗೆ ಸರ್ಕಾರಿ ಕ್ಷೇತ್ರದಲ್ಲಿ ಆಹಾರ ಪರಿವೀಕ್ಷ ಕರು, ಆಸ್ಪತ್ರೆಗಳಲ್ಲಿ ಪಥ್ಯ ಮತ್ತು ಪೌಷ್ಟಿ ಕಾಂಶ ಅಧಿಕಾರಿಯಾಗಿ, ಬಹುರಾ ಷ್ಟ್ರೀಯ ಆಹಾರೋತ್ಪನ್ನ ಕಂಪೆನಿಗಳಲ್ಲಿ ಹಾಗೂ ಐಷಾರಾಮಿ ಹೋಟೆಲ್‌ಗಳಲ್ಲಿ ಉದ್ಯೋಗಗಳು ಲಭ್ಯವಿವೆ. ಪಿಯುಸಿ ಯಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ದಲ್ಲಿ ಸಂಖ್ಯಾವಿಜ್ಞಾನ ಹಾಗೂ ಲೆಕ್ಕ ವಿಜ್ಞಾನ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ಶುಲ್ಕದ ಅತ್ಯುತ್ತಮ ಕೋರ್ಸ್ ಇದಾಗಿದೆ.

ಬಿಎಸ್ಸಿ -ಗಣಕ ವಿಜ್ಞಾನ, ಲೆಕ್ಕ ವಿಜ್ಞಾನ, ಸಂಖ್ಯಾಶಾಸ್ತ್ರ: ಈ ಕೋರ್ಸ್‌ ಅನ್ನು ಕಲಿತವರಿಗೆ ಐಟಿ, ಬಿಟಿ ಕಂಪೆನಿ ಗಳಲ್ಲಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ವಿದೇಶಿ ಕಂಪೆನಿಗಳಲ್ಲಿ ಉದ್ಯೋಗಾವಕಾಶಗಳಿವೆ.

ಬಿಕಾಂ (ಎಸಿಸಿಎ): ಬಿಕಾಂ – ಎಸಿ ಸಿಎ ಯು.ಕೆ. ಪಠ್ಯಕ್ರಮವನ್ನು ಒಳ ಗೊಂಡು, ಪ್ರಪಂಚದ 181 ರಾಷ್ಟ್ರಗಳಲ್ಲಿ ಈ ಕೋರ್ಸ್ ಮಾನ್ಯತೆ ಪಡೆದಿರುತ್ತದೆ. ಮೂರು ವರ್ಷದ ಬಿಕಾಂ ಪದವಿ ಯೊಂದಿಗೆ ಚಾರ್ಟರ್ಡ್ ಅಕೌಂಟೆಂಟ್ ಪದವಿ ಪಡೆಯಲು ಅವಕಾಶ. ವಿದೇಶಿ ವಾಣಿಜ್ಯ ಸಂಸ್ಥೆಗಳಲ್ಲಿ, ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಲೆಕ್ಕಪರಿಶೋಧಕರಾಗಿ (ಆಡಿಟರ್) ವಿಪುಲವಾದ ಉದ್ಯೋಗಾ ವಕಾಶಗಳು ಇರುತ್ತವೆ.

ಪರಿಪೂರ್ಣತೆಗಾಗಿ ತುಡಿತ ಎಂಬ ಧ್ಯೇಯೋದ್ದೇಶದೊಂದಿಗೆ 2010 ರಲ್ಲಿ ಆರಂಭಗೊಂಡ ಮಿಲಾಗ್ರಿಸ್ ಕಾಲೇಜು ಅತ್ಯುನ್ನತ ವಿನೂತನ ಶೈಲಿಯ ವಿನ್ಯಾಸ ದೊಂದಿಗೆ, ಉತ್ಕೃಷ್ಟ ಮೂಲಸೌಲಭ್ಯಗ ಳೊಂದಿಗೆ, ವಾಚನಾಲಯ ಹಾಗೂ ತಾಂತ್ರೀಕೃತ ತರಗತಿಗಳನ್ನು ಹೊಂದಿದೆ.

ಪಠ್ಯೇತರ ಚಟುವಟಿಕೆಗಳಿಗೆ ಪ್ರತ್ಯೇಕ ಪ್ರೋತ್ಸಾಹ ನೀಡಲು ಕ್ರೀಡಾಸಂಘ, ಸಾಂಸ್ಕೃತಿಕ ಸಂಘ, ವಾಣಿಜ್ಯ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಘಟಕಗ ಳಿದ್ದು, ವಿವಿಧ ಆಟೋಟ ಹಾಗೂ ಶೈಕ್ಷಣಿಕ ಕಾರ್ಯಾಗಾರಗಳನ್ನು ನಡೆಸಿ, ಮಕ್ಕಳಿಗೆ ಕ್ರಿಯಾತ್ಮಕ ಹಾಗೂ ಚಿಂತನ ಶೀಲ ಮನೋಭಾವ ಬೆಳೆಸಲಾಗುತ್ತಿದೆ.

ಕಾಲೇಜಿಗೆ ದಾಖಲಾತಿ, ಇತರ ಮಾಹಿತಿಗಾಗಿ ದೂ.ಸಂ. 0824-2423822 ಅಥವಾ ಮೊ.ಸಂ. 81051 37062, 99804 25382 ಸಂಪರ್ಕಿಸಬಹುದಾಗಿದೆ.

**

ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಮುಂದೇನು ಎನ್ನುವ ಪ್ರಶ್ನೆ ಸಹಜ. ಎಂಜಿನಿಯರಿಂಗ್‌, ವೈದ್ಯಕೀಯ, ದಂತ ವೈದ್ಯಕೀಯ, ವಾಸ್ತುಶಿಲ್ಪದಂತಹ ವೃತ್ತಿಪರ ಕೋರ್ಸ್‌ಗಳ ಹೊರತಾಗಿಯೂ ಹಲವಾರು ಅವಕಾಶಗಳು ದ್ವಿತೀಯ ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ತೆರೆದಿವೆ. ಅಂತಹ ಕೆಲವು ಕೋರ್ಸ್‌ಗಳ ಪರಿಚಯ ನೀಡುವ ಪ್ರಯತ್ನ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT